ಎರಡು ದಿನಗಳ ಭೇಟಿಗಾಗಿ ಜಪಾನ್‌ಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಇವರ ಜೊತೆ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಆಸ್ಟ್ರೇಲಿಯಾದ ಹೊಸ ಪಿಎಂ ಆಂಥೋನಿ ಅಲ್ಬನೀಸ್ ಭಾಗವಹಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಸಹ ಪಿಎಂ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Snake Viral Video: ಎರಡು ಕಿಂಗ್ ಕೋಬ್ರಾಗಳ ನಡುವೆ ಭೀಕರ ಕಾಳಗ, ಹೇಗಿದೆ ನೋಡಿ...


ಮಾತುಕತೆ ಮುಗಿಸಿದ ಬಳಿಕ ಟ್ವೀಟ್‌ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ "ಇಂದು ಟೋಕಿಯೊದಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಜಪಾನ್ ಪ್ರಧಾನಿ ಕಿಶಿಡಾ, ಯುಎಸ್ ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾವು ಕ್ವಾಡ್‌ಗೆ ಮತ್ತು ಮುಕ್ತವಾಗಿ ಮರುರೂಪಗೊಳ್ಳುತ್ತಿರುವ ಇಂಡೋ-ಪೆಸಿಫಿಕ್‌ ಯೋಜನೆಯ ಹಂಚಿಕೆಗೆ ಬದ್ಧವಾಗಿರುತ್ತೇವೆ" ಎಂದು ಬರೆದಿದ್ದಾರೆ. 


"ಇನ್ನು 2023ರಲ್ಲಿ ನಡೆಯಲಿರುವ  ಕ್ವಾಡ್ ಶೃಂಗಸಭೆಯನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ. ಅಲ್ಬನೀಸ್ ಅವರು ಸೋಮವಾರ ಆಸ್ಟ್ರೇಲಿಯಾದ 31 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 


ಇದನ್ನು ಓದಿ: Achala Ekadashi: ಅಚಲ ಏಕಾದಶಿಯಂದು ಉಪವಾಸ ಮಾಡಿದ್ರೆ ಈ ಫಲಗಳು ಪ್ರಾಪ್ತಿ


ಇನ್ನು ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಈ ಸಮಯದಲ್ಲಿ, ಅವರು ಚಿಕ್ಕ ಹುಡುಗಿಯ ರೇಖಾಚಿತ್ರವನ್ನು ನೋಡಿ ಅವಳ ಇಚ್ಛೆಯಂತೆ ಆಟೋಗ್ರಾಫ್‌ಗೆ ಸಹಿ ಹಾಕಿದರು. ಬಳಿಕ ತ್ರಿವರ್ಣ ಧ್ವಜದ ರೇಖಾಚಿತ್ರದೊಂದಿಗೆ ತನಗಾಗಿ ಕಾಯುತ್ತಿದ್ದ ಹುಡುಗನೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿಗೆ ಹಿಂದಿಯಲ್ಲಿ ಶುಭಾಶಯ ಹೇಳಿದರು. ಆಗ ಬಾಲಕನ ಶುಭಾಶಯದಿಂದ ಪ್ರಭಾವಿತರಾದ ಪ್ರಧಾನಿ ಮೋದಿ ಅವರು ಹಿಂದಿಯನ್ನು ಎಲ್ಲಿಂದ ಕಲಿತಿದ್ದೀರಿ? ಎಂದು ಆಶ್ಚರ್ಯಚಕಿತರಾಗಿ ಕೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.