ಒಸಾಕಾ: ಜಾಗತಿಕ ಸವಾಲುಗಳನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಐದು ಅಂಶಗಳ ವಿಧಾನವನ್ನು ಮಂಡಿಸಿದರು. ಜಿ 20 ಶೃಂಗಸಭೆಯ ಹೊರತಾಗಿ ಜಪಾನ್‌ನ ಒಸಾಕಾದಲ್ಲಿ ನಡೆದ ಅನೌಪಚಾರಿಕ ಬ್ರಿಕ್ಸ್ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಮೂರು ಪ್ರಮುಖ ಸವಾಲುಗಳತ್ತ ಬೆಳಕು ಚೆಲ್ಲಿದರು. 


COMMERCIAL BREAK
SCROLL TO CONTINUE READING

"ಮೊದಲನೆಯದಾಗಿ, ವಿಶ್ವ ಆರ್ಥಿಕತೆಯಲ್ಲಿ ಆರ್ಥಿಕ ಹಿಂಜರಿತ ಮತ್ತು ಅನಿಶ್ಚಿತತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ ನಂತರ ಡಿಜಿಟಲೀಕರಣ ಮತ್ತು ಹವಾಮಾನ ಬದಲಾವಣೆ ವಿಚಾರಗಳ ಕುರಿತಾಗಿ ಅವರು ಮಾತನಾಡಿದರು. ಇಂತಹ ವಿಚಾರಗಳು ಭವಿಷ್ಯದ ಪೀಳಿಗೆಯ ಪ್ರಮುಖ ಸಂಗತಿಗಳಾಗಿವೆ ಎಂದರು. ಇದೇ ವೇಳೆ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿ, "ಭಯೋತ್ಪಾದನೆ ಮಾನವೀಯತೆಗೆ ಅಪಾಯವಾಗಿದೆ. ಇದು ಮುಗ್ಧ ಜನರ ಜೀವನವನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೇ ಆರ್ಥಿಕ ಅಭಿವೃದ್ಧಿ ಮತ್ತು ಕೋಮು ಸೌಹಾರ್ದತೆಯ ಮೇಲೂ ಪರಿಣಾಮ ಬೀರುತ್ತದೆ ಎಂದರು. ಈ ಹಿನ್ನಲೆಯಲ್ಲಿ ಭಯೋತ್ಪಾದನೆ ಮತ್ತು ವರ್ಣಭೇದ ನೀತಿಗೆ ಬೆಂಬಲ ನೀಡುವ ಎಲ್ಲಾ ವಲಯಗಳನ್ನು ಸ್ಥಗಿತಗೋಳಿಸಬೇಕೆಂದು ಪ್ರಧಾನಿ ಮೋದಿ ಬ್ರಿಕ್ಸ್ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಂಡರು.


ಈ ಜಾಗತಿಕ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ದೇಶಗಳು ಹೇಗೆ ದಾರಿ ಮಾಡಿಕೊಡಬಹುದು ಎಂಬುದರ ಕುರಿತು ಪಿಎಂ ಮೋದಿ ಐದು ಅಂಶಗಳ ವಿಧಾನವನ್ನು ಮಂಡಿಸಿದರು:  


1) ಅಂತರರಾಷ್ಟ್ರೀಯ ಹಣಕಾಸು ಮತ್ತು ವ್ಯಾಪಾರ ಸಂಸ್ಥೆಗಳನ್ನು ಸುಧಾರಿಸುವ ಮೂಲಕ ಬಹುಪಕ್ಷೀಯತೆಯಲ್ಲಿ ಸುಧಾರಣೆ ತರುವುದು .


2) ಇಂಧನ ಸುರಕ್ಷತೆ ಮತ್ತು ಇಂಧನದ ಲಭ್ಯತೆ,  


3) ವಿಪತ್ತು ಸ್ಥಿತಿ ಸ್ಥಾಪಕ ಮೂಲಸೌಕರ್ಯಗಳ ನಿರ್ವಹಣೆಗೆ ಒಕ್ಕೂಟ ರಚನೆ


4) ಪರಿಣಿತ ಕೆಲಸಗಾರರಿಗೆ ಪ್ರಯಾಣದ ಅವಕಾಶವನ್ನು ಸರಳೀಕರಿಸುವುದು  


5) ಭಯೋತ್ಪಾದನೆ ಕುರಿತ ಜಾಗತಿಕ ಸಮ್ಮೇಳನವನ್ನು ಆಯೋಜಿಸುವುದು.