ಪ್ಯಾರಿಸ್: ಕೊರೊನಾವೈರಸ್ (Coronavirus)  ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಫ್ರಾನ್ಸ್ (France) ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron)  ಅವರು ಮೂರನೇ ಬಾರಿಗೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದಾರೆ. ಅಧ್ಯಕ್ಷರ ಆದೇಶದ ಪ್ರಕಾರ, ಫ್ರಾನ್ಸ್‌ನ ಶಾಲೆಗಳು ಮೂರು ವಾರಗಳವರೆಗೆ ಮುಚ್ಚಲ್ಪಡುತ್ತವೆ.  


COMMERCIAL BREAK
SCROLL TO CONTINUE READING

ಫ್ರಾನ್ಸ್‌ನಲ್ಲಿ ಏಕೆ ಲಾಕ್‌ಡೌನ್ ವಿಧಿಸಲಾಯಿತು ?
ಫ್ರಾನ್ಸ್‌ನಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 1 ಲಕ್ಷಕ್ಕೆ ತಲುಪಿದೆ. ಲಸಿಕೆಯ ನಿಧಾನಗತಿಯ ಕಾರಣದಿಂದಾಗಿ ಮತ್ತು ಹೆಚ್ಚುತ್ತಿರುವ ಕರೋನಾದ ಪ್ರಕರಣಗಳಿಂದಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಫ್ರಾನ್ಸ್‌ನಲ್ಲಿ ಮತ್ತೆ ಲಾಕ್‌ಡೌನ್ (Lockdown) ವಿಧಿಸಲು ಮುಂದಾಗಿದ್ದಾರೆ ಎಂದು ನಂಬಲಾಗಿದೆ. ಇನ್ನು ಲಾಕ್‌ಡೌನ್ ಕುರಿತಂತೆ  ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಫ್ರೆಂಚ್ ಅಧ್ಯಕ್ಷರು ನಾವು ಈಗ ಲಾಕ್‌ಡೌನ್ ವಿಧಿಸದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಬಹುದು ಎಂದಿದ್ದಾರೆ.


ಇದನ್ನೂ  ಓದಿ - "COVID-19 ನಿಯಮಗಳನ್ನು ಜನರು ಪಾಲಿಸದಿದ್ದರೆ ಸಂಪೂರ್ಣ ಲಾಕ್‌ಡೌನ್"


ಮೂರು ವಾರಗಳ ಲಾಕ್‌ಡೌನ್ ಜಾರಿ:
ಕಳೆದ ಒಂದು ವಾರದಿಂದ ಪ್ಯಾರಿಸ್‌ನಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದಾಗ್ಯೂ ಪ್ಯಾರಿಸ್ನ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಕರೋನಾ (Coronavirus) ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮುಂದಿನ ಮೂರು ವಾರಗಳವರೆಗೆ ಫ್ರಾನ್ಸ್‌ನಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.


ಒಂದೇ ದಿನದಲ್ಲಿ ಫ್ರಾನ್ಸ್‌ನಲ್ಲಿ ಐದು ಸಾವಿರಕ್ಕೂ ಹೆಚ್ಚು ಕರೋನ ಪ್ರಕರಣಗಳು :
ಮಂಗಳವಾರ, ಫ್ರಾನ್ಸ್‌ನಲ್ಲಿ 5 ಸಾವಿರ 72 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಈ ಮೊದಲು 2020 ರ ಏಪ್ರಿಲ್ 23 ರಂದು ಫ್ರಾನ್ಸ್‌ನಲ್ಲಿ ಒಂದೇ ದಿನ 5 ಸಾವಿರ ಪ್ರಕರಣಗಳು ವರದಿಯಾಗಿವೆ.


ಇದನ್ನೂ  ಓದಿ - Lockdown in Pakistan: ನೆರೆಯ ದೇಶದಲ್ಲಿ ನಾಳೆಯಿಂದ ಫುಲ್ ಲಾಕ್‌ಡೌನ್


ಗಮನಾರ್ಹವಾಗಿ ಇಮ್ಯಾನ್ಯುಯೆಲ್ ಮ್ಯಾಕ್ರನ್ 2021 ರ ಆರಂಭದಲ್ಲಿ ಫ್ರಾನ್ಸ್‌ನಲ್ಲಿ ಮತ್ತೆ  ಲಾಕ್‌ಡೌನ್ ಜಾರಿಗೊಳಿಸಲಾಗುವುದಿಲ್ಲ ಎಂದು ಹೇಳಿದ್ದರು. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಕರೋನಾವೈರಸ್ ಅನ್ನು ನಿಯಂತ್ರಿಸಲು ವಿಧಿಯಿಲ್ಲದೇ ಈಗ ಮತ್ತೆ ಲಾಕ್‌ಡೌನ್ ಅನ್ನೇ ಆಶ್ರಯಿಸಿರುವ ಮ್ಯಾಕ್ರನ್ ಕರೋನಾವೈರಸ್‌ನ ವೇಗವನ್ನು ತಡೆಯಲು ಲಾಕ್‌ಡೌನ್ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.