ನವದೆಹಲಿ: ಬ್ರಿಕ್ಸ್ ಗ್ರೂಪ್ ನ ಭಾಗವಾಗಿರುವ ಚೀನಾ ಮತ್ತು ಭಾರತದಲ್ಲಿ COVID-19 ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಬಹುದೆಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಆ ಮೂಲಕ ಕರೋನವೈರಸ್ ಲಸಿಕೆಗಳ ಅಭಿವೃದ್ಧಿಗೆ ಬ್ರಿಕ್ಸ್ ದೇಶಗಳ ಜಂಟಿ ಪ್ರಯತ್ನಕ್ಕೆ ಕರೆ ನೀಡಿದರು.


COMMERCIAL BREAK
SCROLL TO CONTINUE READING

ನಮ್ಮ ದಕ್ಷಿಣ ಆಫ್ರಿಕಾದ ಸ್ನೇಹಿತರ ಉಪಕ್ರಮದ ಮೇಲೆ ಎರಡು ವರ್ಷಗಳ ಹಿಂದೆ ಮಾಡಲು ನಾವು ಒಪ್ಪಿದ ಬ್ರಿಕ್ಸ್ ಲಸಿಕೆಗಳ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಕೇಂದ್ರದ ಸ್ಥಾಪನೆಯನ್ನು ವೇಗಗೊಳಿಸುವುದು ಮುಖ್ಯ ಎಂದು ನಾವು ನಂಬುತ್ತೇವೆ" ಎಂದು 12 ನೇ ಬ್ರಿಕ್ಸ್ ಶೃಂಗಸಭೆಯನ್ನುದ್ದೇಶಿಸಿ ಪುಟಿನ್ ಮಾತನಾಡಿದರು.


Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ


ಅಧ್ಯಕ್ಷ ಪುಟಿನ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಭಾಗವಹಿಸಿದ್ದರು.ಆಗಸ್ಟ್ನಲ್ಲಿ ನೋಂದಾಯಿಸಲ್ಪಟ್ಟ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಚೀನಾ ಮತ್ತು ಭಾರತದಲ್ಲಿ ಉತ್ಪಾದಿಸಬಹುದು ಎಂದು ಪುಟಿನ್ ಹೇಳಿದ್ದಾರೆ ಎಂದು ಸ್ಪುಟ್ನಿಕ್ನ್ಯೂಸ್ ವರದಿ ಮಾಡಿದೆ.


BIG NEWS: Covid 19 Vaccine ಅಭಿವೃದ್ಧಿಗಾಗಿ ಕೊರೊನಾ ವೈರಸ್ ಪ್ರೋಟೀನ್ ಪುನರ್ರಚಿಸಿದ ವಿಜ್ಞಾನಿಗಳು

'ರಷ್ಯಾದ ನೇರ ಹೂಡಿಕೆ ನಿಧಿ ತನ್ನ ಬ್ರೆಜಿಲಿಯನ್ ಮತ್ತು ಭಾರತೀಯ ಪಾಲುದಾರರೊಂದಿಗೆ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವ ಬಗ್ಗೆ ಒಪ್ಪಂದಗಳನ್ನು ಮಾಡಿಕೊಂಡಿದೆ, ಚೀನಾ ಮತ್ತು ಭಾರತದ ಔಷಧೀಯ ಕಂಪನಿಗಳೊಂದಿಗೆ ಈ ದೇಶಗಳಲ್ಲಿ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಅವರ ಅಗತ್ಯಗಳನ್ನು ಸರಿದೂಗಿಸುವುದಷ್ಟೇ ಅಲ್ಲದೆ ಮೂರನೇ ಜಗತ್ತಿನ ದೇಶಗಳಿಗೂ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಪುಟಿನ್ ಹೇಳಿದರು.


Good News: Covid-19ಗೆ ಯಶಸ್ವಿಯಾಗಿ Vaccine ಸಿದ್ಧಪಡಿಸಿದ ರಷ್ಯಾ! ಎಲ್ಲ ಟ್ರಯಲ್ ಗಳು ಯಶಸ್ವಿ ಎಂದ Sechenov University


'ಆಗಸ್ಟ್ 11 ರಂದು, ಸ್ಪುಟ್ನಿಕ್ ವಿ ಎಂದು ಕರೆಯಲ್ಪಡುವ ಕೊರೊನಾವೈರಸ್ ಲಸಿಕೆಯನ್ನು ನೋಂದಾಯಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು. ಲಸಿಕೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದರೆ, ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ವಿದೇಶದಲ್ಲಿ ಲಸಿಕೆ ಉತ್ಪಾದನೆ ಮತ್ತು ಪ್ರಚಾರಕ್ಕಾಗಿ ಹೂಡಿಕೆ ಮಾಡುತ್ತಿದೆ. ವೆಕ್ಟರ್ ರಿಸರ್ಚ್ ಸೆಂಟರ್ ತಯಾರಿಸಿದ ರಷ್ಯಾದ ಮತ್ತೊಂದು ಲಸಿಕೆ ಎಪಿಕೊರೊನಾವಾಕ್ ಅನ್ನು ಅಕ್ಟೋಬರ್‌ನಲ್ಲಿ ನೋಂದಾಯಿಸಲಾಯಿತು.