President Xi Jinping: ಉಜ್ಬೇಕಿಸ್ತಾನ್‌ನಲ್ಲಿ ನಡೆದ SCO ಶೃಂಗಸಭೆಯಿಂದ ಹಿಂದಿರುಗಿದ ಬಳಿಕ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಮಂಗಳವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಶಿ ಜಿನ್‌ಪಿಂಗ್ ಈ ತಿಂಗಳ ಆರಂಭದಲ್ಲಿ ಎರಡು ವರ್ಷಗಳ ನಂತರ ತಮ್ಮ ಮೊದಲ ವಿದೇಶಿ ಪ್ರವಾಸವನ್ನು ಮಾಡಿದ್ದರು.

COMMERCIAL BREAK
SCROLL TO CONTINUE READING

ಮಂಗಳವಾರ, ಶಿ ಜಿನ್‌ಪಿಂಗ್ ಮುಖವಾಡ ಧರಿಸಿ, ಬೀಜಿಂಗ್‌ನಲ್ಲಿ ಕಳೆದ ದಶಕದಲ್ಲಿ ಚೀನಾದ ಸಾಧನೆಗಳ ಕುರಿತು ನಡೆದ ಪ್ರದರ್ಶನಕ್ಕೆ ಭೇಟಿ ನೀಡಿದ್ದರು ಎಂದು ಸರ್ಕಾರಿ ಶಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶಿ ಅವರು ಸೆಪ್ಟೆಂಬರ್ 16 ರ ಮಧ್ಯರಾತ್ರಿ ಉಜ್ಬೇಕಿಸ್ತಾನ್‌ನಿಂದ ಬೀಜಿಂಗ್‌ಗೆ ಹಿಂದಿರುಗಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಭೇಟಿಯ ಮೊದಲು ಜನವರಿ 2020ರಲ್ಲಿ  ಚೀನಾದ ನಾಯಕ ಕೊನೆಯ ಬಾರಿಗೆ ವಿದೇಶಕ್ಕೆ ಅಂದರೆ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದರು.


ಶಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದರು ಎಂಬ ವಿಲಕ್ಷಣ ವದಂತಿ ಹಬ್ಬಿತ್ತು ಮತ್ತು ಪ್ರಸ್ತುತ ಅದನ್ನು ನಿರಾಕರಿಸಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.


ಚೀನಾದ ನ್ಯಾಯಾಲಯವೊಂದು ಕಳೆದ ವಾರ ಸಾರ್ವಜನಿಕ ಭದ್ರತೆಯ ಮಾಜಿ ಉಪ ಸಚಿವ ಸನ್ ಲಿಜುನ್, ಮಾಜಿ ನ್ಯಾಯ ಸಚಿವ ಫು ಝೆಂಗುವಾ ಮತ್ತು ಶಾಂಘೈ, ಚಾಂಗ್ಕಿಂಗ್ ಮತ್ತು ಶಾಂಕ್ಸಿಯ ಮಾಜಿ ಪೊಲೀಸ್ ಮುಖ್ಯಸ್ಥರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿನಲ್ಲಿರಿಸಿತ್ತು. ಫೂ ಮತ್ತು ಪೊಲೀಸ್ ಮುಖ್ಯಸ್ಥರು ರಾಜಕೀಯ ಬಣದ ಭಾಗವಾಗಿದ್ದಾರೆ ಮತ್ತು ಜಿನ್ಪಿಂಗಗೆ ನಿಷ್ಠರಾಗಿಲ್ಲ ಎಂಬ ಆರೋಪಗಳನ್ನು ಹೊರಿಸಲಾಗಿತ್ತು.


ಇದನ್ನೂ ಓದಿ-Russia: ಶಾಲೆಯೊಂದರಲ್ಲಿ ಹಠಾತ್ ಫೈರಿಂಗ್, 7 ವಿದ್ಯಾರ್ಥಿಗಳು ಸೇರಿದಂತೆ 13 ಮಂದಿ ಸಾವು


ಚೀನೀ ಕಮ್ಯುನಿಸ್ಟ್ ಪಕ್ಷದ (CCP) ಕೇಂದ್ರ ಸಮಿತಿಯ ಪ್ರತಿನಿಧಿಗಳ ಪಟ್ಟಿಯನ್ನು ರಾಜ್ಯ ಮಾಧ್ಯಮವು ಭಾನುವಾರ ಪ್ರಕಟಿಸಿತ್ತು, ಸುಮಾರು 2,300 ಪ್ರತಿನಿಧಿಗಳನ್ನು ಅಂತಿಮಗೊಳಿಸಲಾಗಿದೆ. ಸೆಪ್ಟೆಂಬರ್ 24 ರಂದು ಮಿಲಿಟರಿ ದಂಗೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹಬ್ಬಿದ ಬಳಿಕ ಪ್ರಕಟಗೊಂಡ ಈ ಪಟ್ಟಿಯಲ್ಲಿ ಶಿ ಜಿನ್ಪಿಂಗ್ ಅವರ ಹೆಸರು ಇದ್ದ ಕಾರಣ ವದಂತಿಗಳಿಗೆ ಖಂಡನೆ ವ್ಯಕ್ತವಾಗಿದೆ.


ಇದನ್ನೂ ಓದಿ-Global Economy: ರಷ್ಯಾ-ಯುಕ್ರೇನ್ ನಡುವಿನ ಯುದ್ಧದಿಂದ 2023ರಲ್ಲಿ ವಿಶ್ವದ ಆರ್ಥಿಕತೆಗೆ ಭಾರಿ ಪೆಟ್ಟು


ಈ ವದಂತಿಗಳು ಸೇನಾ ವಾಹನಗಳ ಆಧಾರ ರಹಿತ ವೀಡಿಯೊಗಳ ಜೊತೆಗೆ ಆಧಾರ ರಹಿತ ಹಕ್ಕು ಮಂಡನೆಗಳು ಮತ್ತು ಹೆಚ್ಚಾಗಿ ಸಾಮೂಹಿಕ ವಿಮಾನ ರದ್ದತಿಯನ್ನು ಆಧರಿಸಿವೆ ಎಂದು ಗಾರ್ಡಿಯನ್ ವರದಿ ಮಾಡಿದೆ,  ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ದಂಗೆ ವದಂತಿಗಳ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖವಿಲ್ಲ, ಆದರೆ ವಾರಾಂತ್ಯದಲ್ಲಿ 200,000 ಕ್ಕೂ ಹೆಚ್ಚು ಜನರು ದೇಶಾದ್ಯಂತ ವಿಮಾನ ನಿಲ್ದಾಣಗಳಿಂದ ವಿಮಾನ ರದ್ದತಿ ಬಗ್ಗೆ ವೈಬೋ ಹ್ಯಾಶ್‌ಟ್ಯಾಗ್ ಅನ್ನು ಗಮನಿಸಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ