Modi inaugurated the Swami Narayan Temple : :  ಅಬುಧಾಬಿಯಲ್ಲಿ  ಹಿಂದೂ ದೇವಾಲಯ ಉದ್ಘಾಟನೆಯಾಗಿದೆ. ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು (ಫೆ.14ರಂದು) ಉದ್ಘಾಟಿಸಿದ್ದಾರೆ. 


COMMERCIAL BREAK
SCROLL TO CONTINUE READING

27 ಎಕರೆ ಜಾಗದಲ್ಲಿ ತಲೆಯೆತ್ತಿರುವ ಬೃಹತ್ ದೇಗುಲಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚವಾಗಿದೆ.ಏಷ್ಯಾದ ಅತೀ ದೊಡ್ಡ ಹಿಂದೂ ದೇವಾಲಯ ಎಂಬ ಖ್ಯಾತಿಯೂ ಬಿಎಪಿಎಸ್ ಸ್ವಾಮಿ ನಾರಾಯಣ ದೇಗುಲಕ್ಕೆ ಸಿಕ್ಕಿದೆ ಮತ್ತು  ವಿಶ್ವದ 3ನೇ ಅತಿದೊಡ್ಡ ಹಿಂದೂ ದೇಗುಲವ ಎಂಬ ಖ್ಯಾತಿಯೂ ಇದಕ್ಕಿದೆ.


ಇದನ್ನು ಓದಿ :  ಚೀನಾದಿಂದ ಸಿಲಿಕಾನ್ ಸಿಟಿಗೆ ಬಂತು ಚಾಲಕರಹಿತ ಮೆಟ್ರೋ ರೈಲು ಭೋಗಿ 


ಪ್ರಧಾನಿ ನರೇಂದ್ರ ಮೋದಿ ಇದೀಗ ದೇಗುಲ ಉದ್ಘಾಟಿಸಿದ್ದು,  ಈ ಅಪರೂಪದ ಕ್ಷಣವನ್ನು ಯುಎಇಯಲ್ಲಿರುವ ಅಸಂಖ್ಯಾತ ಹಿಂದೂಗಳು ಕಣ್ತುಂಬಿಕೊಂಡರು. ಈ ವೇಳೆ ಸ್ವಾಮೀಜಿಗಳು, ಪಾದ್ರಿ, ಮುಸ್ಲಿಂ ಮೌಲ್ವಿಗಳು ಸೇರಿದಂತೆ ಹಲವು ಧರ್ಮಗಳ ಗುರುಗಳು ಜೊತೆಯಿದ್ದರು.


ದೇಗುಲಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸ್ವಾಮಿ ನಾರಾಯಣ ಪಾದದ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಈ ಅದ್ಭುತ ದೇಗುಲವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಜಲಾಭಿಷೇಕ ಮಾಡುವ ಮೂಲಕ ಈ ದೇಗುಲವನ್ನು ಉಧ್ಘಾಟನೆ ನಡೆಯಿತು. 


ಇದನ್ನು ಓದಿ :  PM Surya Ghar Muft Bijli Yojana ಎಂದರೇನು? ಸಿಗಲಿದೆ ಉಚಿತ 300 ಯೂನಿಟ್ ವಿದ್ಯುತ್!


ಧರ್ಮ ಸಾಮರಸ್ಯದ ಅದ್ಭುತ ಕ್ಷಣಕ್ಕೆ ಅಬುಧಾಬಿಯ ಈ ದೇಗುಲ ಸಾಕ್ಷಿಯಾಗಿದ್ದು, ಈ ವೇಳೆ ಬಿಎಎಸ್‌ಪಿ ಸ್ವಾಮಿ ನಾರಾಯಣ ಸಂಸ್ಥೆ ಮುಖ್ಯಸ್ಥರು, ಹಿಂದೂ ಧರ್ಮದ ಗುರುಗಳು, ಮುಸ್ಲಿಂ ಮೌಲ್ವಿಗಳು, ಕ್ರಿಶ್ಚಿಯನ್ ಧರ್ಮದ ಪಾದ್ರಿಗಳು ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಪ್ರಧಾನಿ ಮೋದಿಯವರಿಗೆ ಇದ್ದರು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.