ನವದೆಹಲಿ: ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟಿನ ಕುರಿತಾಗಿ ನಡೆಯುತ್ತಿರುವ ಜಿ 20 ಅಸಾಧಾರಣ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 12 ರಂದು ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆ.ಈ ಶೃಂಗ ಸಭೆಯನ್ನು ಇಟಲಿ ದೇಶವು ಆಯೋಜಿಸುತ್ತಿದೆ.


COMMERCIAL BREAK
SCROLL TO CONTINUE READING

G-20  (G20 Summit) ಭಾಗವಾಗಿರುವ ಇಟಾಲಿಯನ್ ಪ್ರೆಸಿಡೆನ್ಸಿಯ ಆಹ್ವಾನದ ಮೇರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 12 ರಂದು  G20 ಅಸಾಧಾರಣ ನಾಯಕರ ಶೃಂಗಸಭೆಯಲ್ಲಿ ವರ್ಚುವಲ್ ರೂಪದಲ್ಲಿ ಭಾಗವಹಿಸಲಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.ಈ ಸಭೆಯ ಕಾರ್ಯಸೂಚಿಯು ಮಾನವೀಯ ಅಗತ್ಯಗಳಿಗೆ ಪ್ರತಿಕ್ರಿಯೆ ಮತ್ತು ಮೂಲಭೂತ ಸೇವೆಗಳು ಮತ್ತು ಜೀವನೋಪಾಯಕ್ಕೆ ಪ್ರವೇಶವನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: ಜಾಗತಿಕ ಆರ್ಥಿಕತೆಗೆ 5 ಟ್ರಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿದ ಜಿ-20 ರಾಷ್ಟ್ರಗಳು


ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಪಘಾನಿಸ್ತಾನದ ಬಿಕ್ಕಟ್ಟಿ ವಿಚಾರವಾಗಿ ನಡೆದ ಜಿ 20 ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಇನ್ನೊಂದೆಡೆಗೆ ಈ ಹಿಂದೆ ಪಿಎಂ ಮೋದಿ ಅವರು ಅಫ್ಘಾನಿಸ್ತಾನದಲ್ಲಿ ಎಸ್‌ಸಿಒ-ಸಿಎಸ್‌ಟಿಒ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.


ಇದನ್ನೂ ಓದಿ: How To Earn From Facebook: ಫೇಸ್‌ಬುಕ್‌ನಿಂದ ಗಳಿಸುವ ಅವಕಾಶ, ಭಾರತದಲ್ಲಿ ಬಿಡುಗಡೆಯಾಗಿದೆ ಈ ಅದ್ಭುತ ವೈಶಿಷ್ಟ್ಯ


G20 ವಿಶ್ವದ 20 ಪ್ರಮುಖ ಆರ್ಥಿಕತೆಗಳನ್ನು ಒಳಗೊಂಡಿದ್ದು ಮತ್ತು ಅಂತರಾಷ್ಟ್ರೀಯ ಒಮ್ಮತವನ್ನು ನಿರ್ಮಿಸಲು ಸಹಾಯ ಮಾಡಲು ಮತ್ತು ವಿಶ್ವಸಂಸ್ಥೆ ಮತ್ತು ಅದರ ಏಜೆನ್ಸಿಗಳು ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳು ಮತ್ತು ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಜಾಗತಿಕ ಮತ್ತು ಪ್ರಾದೇಶಿಕವಾಗಿ ದೇಶಗಳ ನಡುವೆ ಸಮನ್ವಯದ ವಿಧಾನಕ್ಕೆ ಸಹಾಯ ಮಾಡುವ ಪ್ರಮುಖ ವೇದಿಕೆಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.