ನವದೆಹಲಿ: ಜಾಗತಿಕವಾಗಿ ಕೊರೊನಾ ವೈರಸ್ ಭೀತಿಯನ್ನುಂಟು ಮಾಡಿರುವ ಹಿನ್ನಲೆಯಲ್ಲಿ ವಿಶ್ವದೆಲ್ಲೆಡೆ ಈಗ ಭಾರತೀಯ ನಮಸ್ತೆ ಸಾಕಷ್ಟು ಖ್ಯಾತಿಯನ್ನು ಪಡೆದಿದೆ.


COMMERCIAL BREAK
SCROLL TO CONTINUE READING

ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಹ್ಯಾಂಡ್ ಶೇಕ್ ಮಾಡುವ ಬದಲು ಬ್ರಿಟನ್ ನಿಂದ ಪ್ರಿನ್ಸ್ ಚಾರ್ಲ್ಸ್ ಅವರು ನಮಸ್ತೆ ಮಾಡುತ್ತಿರುವುದು ಗಮನ ಸೆಳೆದಿದೆ.ವಿಶೇಷವೆಂದರೆ ಈ ಅವರು ಹ್ಯಾಂಡ್ ಶೇಕ್ ಮಾಡಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಕೊರೊನಾ ಭೀತಿಯಿಂದಾಗಿ ಅವರು ನಮಸ್ತೆ ಮಾಡುತ್ತಾರೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಎಬಿಸಿ ಹಂಚಿಕೊಂಡಿರುವ ಈ ವಿಡಿಯೋಗೆ ಟ್ವೀಟ್ ಮಾಡಿರುವ ರವೀನಾ ಟಂಡನ್ ಪ್ರಾರ್ಥನೆಯಂತಹ ಸನ್ನೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿರುವುದಕ್ಕೆ ಕಿಡಿಕಾರಿರುವ ಬಾಲಿವುಡ್ ನಟಿ 'ಇದು ನಮಸ್ತೆ' ಪ್ರಕಟಿಸುವ ಮೊದಲು ಹೋಮ್ ವರ್ಕ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಜಾಗತಿಕವಾಗಿ ಕೊರೊನಾ ಭಯದಿಂದಾಗಿ ಭಾರತೀಯ ಸಂಪ್ರದಾಯದ ರೀತಿಯಲ್ಲಿ ನಮಸ್ತೆ ಎಂದು ನಮಸ್ಕರಿಸುತ್ತಿರುವುದು ಈಗ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ. ರವೀನಾ ಟಂಡನ್ ಅವರ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ, ಎಬಿಸಿ ಟಿವಿ ಶೋ ಕ್ವಾಂಟಿಕೊದಲ್ಲಿ ನಟಿಸಿದ ಪ್ರಿಯಾಂಕಾ ಚೋಪ್ರಾ, ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್ ಗಳಲ್ಲಿ ನಮಸ್ತೆ ಮಾಡುವ ತನ್ನ ವರ್ಷಗಳ ಸಂಗ್ರಹವನ್ನು ಪೋಸ್ಟ್ ಮಾಡಿದ್ದಾರೆ.


ಆದಾಗ್ಯೂ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಐರಿಶ್ ಪ್ರಧಾನಿ ಲಿಯೋ ವರಡ್ಕರ್ ಅವರು ಇತ್ತೀಚೆಗೆ ಶ್ವೇತಭವನದಲ್ಲಿ ನಮಸ್ತೆಯೊಂದಿಗೆ ಪರಸ್ಪರ ಶುಭಾಶಯ ಕೋರುತ್ತಿದ್ದರೂ ಕೂಡ ಪ್ರಿನ್ಸ್ ಚಾರ್ಲ್ಸ್ ಗೆಸ್ಚರ್ ನ್ನು ಗುರುತಿಸುವಲ್ಲಿ ಅಮೆರಿಕದ ಮಾಧ್ಯಮ ವಿಫಲವಾಗಿದೆ ಎಂಬುದು ಆಶ್ಚರ್ಯಕರ ಸಂಗತಿ ಎನ್ನುತ್ತಾರೆ ನೆಟ್ಟಿಗರು.