ಬ್ಯಾಂಕಾಕ್: ಥೈಲ್ಯಾಂಡ್ ಜೈಲಿಯಲ್ಲಿ ವಿಚಾರಣಾಧಿ ಖೈದಿಯೊಬ್ಬ ಜೈಲಿನಿಂದ ಪರಾರಿಯಾಗಲು ಪ್ಲಾನ್ ಮಾಡಿ ಮರಣಹೊಂದಿರುವ ಘಟನೆ ನಡೆದಿದೆ. ವಿಚಾರಣಾಧಿ ಖೈದಿಯೊಬ್ಬ ಜೈಲಿನಿಂದ ಪರಾರಿಯಾಗಲು ಪ್ಲಾನ್ ಮಾಡಿ ಸೆರೆಮನೆಯಿಂದ ತಪ್ಪಿಸಿಕೊಳ್ಳಲು, ಆರು ಮೀಟರ್ (20 ಅಡಿ) ಎತ್ತರದ ಗೋಡೆಯಿಂದ ಎಗರಿದ, ಆದರೆ ಹೈ ವೋಲ್ಟೇಜ್ ತಂತಿಯಿಂದಾಗಿ ಆತ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING


ದಕ್ಷಿಣ ಸೂರತ್ ಥಾನಿ ಪ್ರಾಂತ್ಯದಲ್ಲಿರುವ ಜೈಲಿನಲ್ಲಿ ಬಂಧಿಸಲ್ಪಟ್ಟ 32 ವರ್ಷದ ವಿವಾಟ್ ಅಕ್ಸಾರೊಸಮ್ ತನ್ನೊಂದಿಗಿದ್ದ ಇನ್ನಿಬ್ಬರು ಖೈದಿಗಳೊಂದಿಗೆ ಜೈಲಿನಿಂದ ತಪ್ಪಿಸಿಕೊಳ್ಳಲು ಆರು ಮೀಟರ್ (20 ಅಡಿ) ಎತ್ತರದ ಗೋಡೆಯನ್ನು ಎಗರಿದರು. ಜೈಲಿನ ಗೋಡೆಯಿಂದ ಹೊರಗಿದ್ದ ವಿದ್ಯುತ್ ಮುಳ್ಳುತಂತಿಯಿಂದ ಕರೆಂಟ್ ಹೊಡೆದು ಆತ ಸ್ಥಳದಲ್ಲೇ ನಿಧನರಾದರು  ಎಂದು ಚಿಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕ ಕರ್ನಲ್ ವಾಂಚೈ ಪಾಲ್ವಾನ್ ಎಎಫ್ಪಿಗೆ ತಿಳಿಸಿದರು.


ಮಾದಕ ದ್ರವ್ಯಗಳನ್ನೂ ಹೊಂದಿದ್ದ ಕಾರಣ ಅಕ್ಸಾರೊಸಮ್ ನನ್ನು ಬಂಧಿಸಲಾಗಿತ್ತು.