Viral Video: ಅಪರಾಧಿಗಳು ಜೈಲಿನಿಂದ ಪರಾರಿಯಾಗುವ ಅನೇಕ ಘಟನೆಗಳನ್ನು ಕೇಳಿದ್ದೇವೆ. ಇತ್ತೀಚೆಗಷ್ಟೇ ಬ್ರೆಜಿಲ್‌ನಲ್ಲಿ ಇಂತಹದೊಂದು ಘಟನೆ ನಡೆದಿದೆ. ಕೈದಿಯೊಬ್ಬ ಚಲಿಸುವ ಪೊಲೀಸ್ ವಾಹನದಿಂದ (Prisoner Escapes From Moving Police Van) ಪರಾರಿಯಾಗಿದ್ದಾನೆ. 


COMMERCIAL BREAK
SCROLL TO CONTINUE READING

ಕೈಗೆ ಹಾಕಿದ ಕೋಳದ ಸಮೇತ ಪರಾರಿಯಾಗಿದ್ದಾನೆ. ಈ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಪೊಲೀಸ್ ಕಾರಿನಿಂದ ಜಿಗಿದ ವ್ಯಕ್ತಿ, ಓಡಿ ತಪ್ಪಿಸಿಕೊಂಡಿದ್ದಾನೆ.


ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ವೈರಲ್‌ಹಾಗ್ (ViralHog) ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಯು ಡಿಸೆಂಬರ್ 28, 2021 ರಂದು ಬ್ರೆಜಿಲ್‌ನ ಪರೈಬಾದ ಅಲಗೋವಾ ನೋವಾದಲ್ಲಿ ನಡೆದಿದೆ ಎನ್ನಲಾಗಿದೆ. ಇದುವರೆಗೆ ಸುಮಾರು 40,00 ವೀಕ್ಷಣೆಗಳನ್ನು ಪಡೆದಿದೆ.


ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ದಾರ್ಥ್ ಆಕ್ಷೇಪಾರ್ಹ ಟ್ವೀಟ್‌; "ಉತ್ತಮ ಪದಗಳನ್ನು ಬಳಸಬಹುದಿತ್ತು" ಎಂದ ಬ್ಯಾಡ್ಮಿಂಟನ್ ತಾರೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.