ನವದೆಹಲಿ: ಕುಲ್ ಭೂಷಣ್ ಜಾಧವ್ ನನ್ನು ಭೇಟಿ ಮಾಡಲು ಆತನ ಪತ್ನಿ ಮತ್ತು ತಾಯಿ ಇಸ್ಲಾಮಾಬಾದ್ ಗೆ ತೆರೆಳಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ದುಷ್ಕೃತ್ಯವನ್ನು ಖಂಡಿಸಿ ವಾಷಿಂಗ್ಟನ್ನ ಪಾಕ್ ರಾಯಭಾರಿ ಕಚೇರಿಯ ಮುಂದೆ ಇಂಡಿಯನ್-ಅಮೆರಿಕನ್ನರು ಮತ್ತು ಬಲೂಚ್ಗಳ ಗುಂಪು 'ಚಪ್ಪಲ್ ಚೋರ್ ಪಾಕಿಸ್ತಾನ'ದ ಬ್ಯಾನರ್ ಅನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.





COMMERCIAL BREAK
SCROLL TO CONTINUE READING

ಪಾಕಿಸ್ತಾನ ತಾನು ಧರಿಸುವಂತ ಚಪ್ಪಲಿಗಳನ್ನು ಹೊಂದಿಲ್ಲ, ಆದ್ದರಿಂದ ಅವರು ಕುಲ್ಬುಶನ್ ಜಾದವ್ ಅವರ ಪತ್ನಿ ಮತ್ತು ತಾಯಿಯ ಚಪ್ಪಲಿಗಳನ್ನು ತೆಗೆದುಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಪಾಕಿಸ್ತಾನ ಎಂದರೆ ಯುಎಸ್ನಿಂದ ಡಾಲರ್ ಅನ್ನು ಗಳಿಸುವುದು ಮತ್ತು ಹಿಂದೂಸ್ತಾನ್ ನಿಂದ ಶೂಗಳನ್ನು ತಿನ್ನುವುದು. ಕುಲ್ಬುಶನ್ ಕುಟುಂಬದೊಂದಿಗೆ ನಡೆದಿರುವ ವರ್ತನೆಯು ಪಾಕಿಸ್ತಾನದ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು. ಅಲ್ಲದೆ ಪ್ರತಿಭಟನಾಕಾರರು ಪಾಕಿಸ್ತಾನಕ್ಕೆ ನಾವು ಚಪ್ಪಲಿಗಳನ್ನು ನೀಡುತ್ತೇವೆ ಎಂದು ಅಣುಕಿಸಿ ಚಪ್ಪಲಿಗಳ ಮೂಲಕ ಪ್ರತಿಭಟನೆಯಲ್ಲಿ ತೊಡಗಿದರು. 



ಇದೇ ವೇಳೆ ಅವರ ತಾಯಿಯ ಸಿಂಧೂರ ತೆಗೆಸಿದ್ದರ ಬಗ್ಗೆಯೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.