Karachi Food: ಪಾಕಿಸ್ತಾನದ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರವಾಗಿರುವ ಕರಾಚಿಯು ಆಹಾರ ಪ್ರಿಯರಿಗೆ 'ಫುಡ್ ಕ್ಯಾಪಿಟಲ್' ಆಗಿದೆ. ಇತ್ತೀಚಿನ ಟ್ರೆಂಡ್‌ನಲ್ಲಿ, 'ಸೋಯಾಬೀನ್ ಆಲೂ ಬಿರಿಯಾನಿ', 'ಆಲೂ ಟಿಕ್ಕಿ', 'ವಡಾ ಪಾವ್', 'ಮಸಾಲಾ ದೋಸೆ' ಮತ್ತು 'ಧೋಕ್ಲಾ' ನಂತಹ ಭಾರತೀಯ ಸಸ್ಯಾಹಾರಿ ಖಾದ್ಯಗಳತ್ತ ಜನರ ಆಸಕ್ತಿ ಹೆಚ್ಚುತ್ತಿದೆ. 


COMMERCIAL BREAK
SCROLL TO CONTINUE READING

ಸಿಂಧ್ ಪ್ರಾಂತ್ಯದ ರಾಜಧಾನಿಯಾದ ಕರಾಚಿಯ ಎಂಎ ಜಿನ್ನಾ ರಸ್ತೆಯ ಐತಿಹಾಸಿಕ ಹಳೆಯ ಆವರಣದಲ್ಲಿರುವ ‘ಮಹಾರಾಜ್ ಕರಮಚಂದ್ ವೆಜಿಟೇರಿಯನ್ ಫುಡ್ಸ್ ಇನ್’ ರೆಸ್ಟೋರೆಂಟ್ ಮಾಲೀಕ ಮಹೇಶ್ ಕುಮಾರ್, ಜನರು ಸಸ್ಯಾಹಾರಿ ಖಾದ್ಯಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ತಮ್ಮ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಕರಾಚಿಯಲ್ಲಿ 'ಶುದ್ಧ ಸಸ್ಯಾಹಾರಿ ಭಾರತೀಯ ಪಾಕಪದ್ಧತಿ' ಎಂದು ಕರೆಯಲಾಗುತ್ತದೆ. 


ಇದನ್ನೂ ಓದಿ: ಐಶ್ವರ್ಯಾ ರೈ ಬಚ್ಚನ್‌ ಅಣ್ಣ ಯಾರು ಗೊತ್ತಾ? ಇವರ ಅತ್ತಿಗೆಯೂ ಸಖತ್‌ ಫೇಮಸ್..‌ ಗ್ಲಾಮರ್ ಲೋಕದಲ್ಲಿ ಮಿಂಚಿದ ಬ್ಯೂಟಿ ಈಕೆ !


ವಿಭಜನೆಯ ಮೊದಲು ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಶಾಂತಿ ಮತ್ತು ಸೌಹಾರ್ದತೆಯಿಂದ ವಾಸಿಸುತ್ತಿದ್ದ ನಗರ ಕರಾಚಿ. ಇಲ್ಲಿನ ನಾರಾಯಣ ಕಾಂಪ್ಲೆಕ್ಸ್ ಪ್ರದೇಶವು ರೆಸ್ಟೋರೆಂಟ್‌ಗಳಿಗೆ ಮಾತ್ರವಲ್ಲದೆ ಶತಮಾನಗಳಷ್ಟು ಹಳೆಯದಾದ ಸ್ವಾಮಿನಾರಾಯಣ ದೇವಸ್ಥಾನ ಮತ್ತು ಗುರುದ್ವಾರಕ್ಕೂ ಪ್ರಸಿದ್ಧಿಯಾಗಿದೆ.


ಆರಂಭದಲ್ಲಿ ಸಂಕೀರ್ಣದ ಜನರಿಗಾಗಿ ನಿರ್ಮಿಸಲಾದ ಮಹಾರಾಜ್ ಕರಮ್‌ಚಂದ್ ರೆಸ್ಟೋರೆಂಟ್, ಈಗ ಕರಾಚಿಗೆ ಬರುವ ಜನರು, ನಗರದ ನ್ಯಾಯಾಲಯಗಳಿಗೆ ಭೇಟಿ ನೀಡುವ ವಕೀಲರು ಮತ್ತು ಸಂದರ್ಶಕರಿಗೆ ಜನಪ್ರಿಯ ಸ್ಥಳವಾಗಿದೆ.


ನಮ್ಮಲ್ಲಿ ಸೋಯಾಬೀನ್ ಆಲೂ ಬಿರಿಯಾನಿ, ಆಲೂ ಟಿಕ್ಕಿ, ಪನೀರ್ ಕಡಾಯಿ ಮತ್ತು ಮಿಕ್ಸ್‌‌ ವೆಜ್ ಪ್ರಸಿದ್ಧವಾಗಿವೆ. ನಾವು ಊಟದ ಸಮಯದಲ್ಲಿ ಹೆಚ್ಚಿನ ಆರ್ಡರ್‌ ಅನ್ನು ಪಡೆಯುತ್ತೇವೆ. ಸಾಕಷ್ಟು 'ಟೇಕ್‌ಅವೇ' ಮತ್ತು 'ಡೆಲಿವರಿ' ಮಾಡುತ್ತೇವೆ ಎಂದು ಮಹೇಶ್ ಕುಮಾರ್ ಹೇಳಿದರು.


1960 ರಲ್ಲಿ ಮಹೇಶ್ ಕುಮಾರ್ ತಂದೆ ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು.‌ಇಂದಿಗೂ ಅದೇ ಹಳೆಯ ಮರದ ಕುರ್ಚಿ ಮತ್ತು ಟೇಬಲ್‌ಗಳನ್ನು ಈ ರೆಸ್ಟೋರೆಂಟ್ ಹೊಂದಿದೆ. ಇಲ್ಲಿ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುವ ವಿವಿಧ ಮಸಾಲೆಗಳು, ತಾಜಾ ತರಕಾರಿಗಳು ಮತ್ತು ಮನೆಯಲ್ಲಿ ತಯಾರಿಸಿದ ಮಸಾಲೆಗಳು ಗ್ರಾಹಕರನ್ನು ಆಕರ್ಷಿಸುತ್ತವೆ.


ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ಪತನ.. 62 ಮಂದಿ ಸಾವು! ಆಕಾಶದಿಂದ ವಿಮಾನ ಬೀಳುವ ವಿಡಿಯೋ ವೈರಲ್‌


ಮಹೇಶ್ ಅವರು ತಮ್ಮ ರೆಸ್ಟೋರೆಂಟ್ ಅನ್ನು ಪ್ರಚಾರ ಮಾಡುವುದಿಲ್ಲ. "ನಮ್ಮ ಆಹಾರ ಮತ್ತು ಸೇವೆಯಿಂದ ಸಂತೋಷವಾಗಿರುವ ಸಾಕಷ್ಟು ಗ್ರಾಹಕರನ್ನು ನಾವು ಹೊಂದಿದ್ದೇವೆ ಆದರೆ ಅದನ್ನು ಪ್ರಚಾರ ಮಾಡಲು ನಾವು ಇಷ್ಟಪಡುವುದಿಲ್ಲ" ಎಂದು ಅವರು ಹೇಳಿದರು.


ಕರಾಚಿಯ ಇತರ ಭಾಗಗಳಲ್ಲಿಯೂ ಸಹ ಉದ್ಯಮಶೀಲ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮಹಿಳೆಯರು 'ಪಾವ್ ಭಾಜಿ', 'ವಡಾ ಪಾವ್' ಹೀಗೆ ಶಾಖಾಹಾರಿ ತಿನಿಸು ತಯಾರಿಸುವ ಫುಡ್ ಸ್ಟಾಲ್‌ ಹೊಂದಿದ್ದಾರೆ. 'ದೋಸಾ' ಮತ್ತು 'ಧೋಕ್ಲಾ' ಫುಲ್‌ ಫೇಮಸ್‌ ಆಗಿವೆ. 


ಕವಿತಾ ದೀದಿಯ ಆಹಾರದ ಖ್ಯಾತಿ
ಕವಿತಾ ಎಂಟು ತಿಂಗಳ ಹಿಂದೆ ಕ್ಯಾಂಟ್ ಪ್ರದೇಶದಲ್ಲಿ ರಸ್ತೆ ಬದಿ ಅಡುಗೆ ಅಂಗಡಿ ಆರಂಭಿಸಿದ್ದರು. ಭಾರತೀಯ ಸಸ್ಯಾಹಾರಿ ಭಕ್ಷ್ಯಗಳನ್ನು ಮಾರಾಟ ಮಾಡುತ್ತಾರೆ.  ಅಂಗಡಿಗೆ ಬರುವ ಜನಸಂದಣಿಯನ್ನು ನಿಭಾಯಿಸುವುದು ಅವಳಿಗೆ ತುಂಬಾ ಕಷ್ಟ.


ಕವಿತಾ ಮಾತ್ರವಲ್ಲದೆ, ಅವರ ಸೊಸೆ ಚಂದ್ರಿಕಾ ದೀಕ್ಷಿತ್, ಸಹೋದರ ಜಿತೇಂದ್ರ ಮತ್ತು ಅವರ ತಾಯಿ ನೋಮಿತಾ ಸಹ ಮೂರು ಸ್ಟಾಲ್‌ಗಳನ್ನು ಪರಸ್ಪರ ಅಕ್ಕಪಕ್ಕದಲ್ಲಿ ನಡೆಸುತ್ತಿದ್ದರೆ. 'ಧೋಕ್ಲಾ', 'ಆಮ್ ಪನ್ನಾ' ಮತ್ತು 'ದಾಲ್ ಸಮೋಸ' ಮಾರಾಟ ಮಾಡುವ ಸ್ಟಾಲ್ ನಡೆಸುತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.