ಹಾವು ನೋಡ್ರಿದ್ರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ? ಒಂದು ವೇಳೆ ಅದು ನಿಮ್ಮ ಲಗೇಜ್ ಒಳಗೆ ಸೇರಿಕೊಂಡಿದೆ ಎಂದು ತಿಳಿದರೆ ನಿಮ್ಮ ಪರಿಸ್ಥಿತಿ ಹೇಗಾಗಿರಬೇಡ ನೀವೇ ಊಹಿಸಿ! ಇತ್ತೀಚೆಗೆ ಮಹಿಳೆಯ ಲಗೇಜ್'ನಲ್ಲಿ ಸೇರಿಕೊಂಡಿದ್ದ ಹೆಬ್ಬಾವೊಂದು ಆಸ್ಟ್ರೇಲಿಯಾದಿಂದ ಸ್ಕಾಟ್ಲೆಂಡಿಗೆ ವಿಮಾನದಲ್ಲಿ ಪ್ರಯಾಣಿಸಿದೆ. ಅಚ್ಚರಿಯಾಗುತ್ತಿರಬೇಕಲ್ಲವೇ? ಆದರೂ ಇದು ಸತ್ಯ!


COMMERCIAL BREAK
SCROLL TO CONTINUE READING

ಈ ಬಗ್ಗೆ ಎಬಿಸಿ ವರದಿ ಮಾಡಿದ್ದು, ಸ್ಕಾಟ್ಲೆಂಡ್‌ ಮೂಲದ ಮೋಯ್ರಾ ಬೋಕ್ಸಾಲ್ ಎಂಬ ಮಹಿಳೆಯ ತನ್ನ ಲಗೇಜ್‌ನೊಂದಿಗೆ ಇದ್ದ ಶೂನಲ್ಲಿ ಸೇರಿಕೊಂಡಿರುವುದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಏರ್‌ಪೋರ್ಟ್‌ನಲ್ಲಿ ಅವರ ಗಮನಕ್ಕೆ ಬಂದಿದೆ. ಇದನ್ನು ಕಂಡ ಆಕೆ ಹೌಹಾರಿದ್ದು, ಸುಮಾರು 14,900 ಕಿಲೋ ಮೀಟರ್'ಗಳ ವರೆಗೆ ಆಕೆ ಶೂ ಒಳಗೆ ಸೇರಿಕೊಂಡು ವಿಮಾನದಲ್ಲಿ ಪ್ರಯಾಣಿಸಿದೆ.


ಆರಂಭದಲ್ಲಿ ಯಾರೋ ತಮಾಷೆ ಮಾಡಿ ಹೆದರಿಸಲು ಹಾವಿನ ಆಟಿಕೆಯನ್ನು ಇರಿಸಿದ್ದಾರೆ ಎಂದು ಆಕೆ ತಿಲಿದಿದ್ದ ಆಕೆ, ಅದನ್ನು ಮುಟ್ಟಿದಾಗ ಅದು ಚಲಿಸಿದ್ದು ಕಂಡು ಗಾಬರಿಯಾಗಿದ್ದಾರೆ. ಅಷ್ಟೇ ಅಲ್ಲ, ಸ್ಕಾಟ್ಲೆಂಡ್‌ನಿಂದ ಆಸ್ಟ್ರೇಲಿಯಾ ನಡುವಿನ ಪ್ರಯಾಣದಲ್ಲಿ ಆ ಹಾವು ಪೊರೆ ಬಿಡಲು ಆರಂಭಿಸಿತ್ತು ಎನ್ನಲಾಗಿದೆ. ಬಳಿಕ ಅದನ್ನು ಪ್ರಾಣಿ ರಕ್ಷಣಾ ಸಂಸ್ಥೆಗೆ ಒಪ್ಪಿಸಲಾಗಿದೆ.