ನವದೆಹಲಿ: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬುಧವಾರ ಪುಟ್ ಬಾಲ್ ಆಟಗಾರರ ಆನ್‌ಲೈನ್ ಜನಾಂಗೀಯ ನಿಂದನೆಯ ವಿರುದ್ಧದ ಕ್ರಮಗಳನ್ನು ಬಲಪಡಿಸುವುದಾಗಿ ವಾಗ್ದಾನ ಮಾಡಿದ್ದಾರೆ.ಅಂತಹ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಭಿಮಾನಿಗಳನ್ನು ಆಟಗಳಿಂದ ನಿಷೇಧಿಸುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ನಿಂಧನೆ ತಗೆದು ಹಾಕದಿದ್ದಲ್ಲಿ ತಂಡವನ್ನು ವಿಧಿಸುವ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತೀಯ ಹೊಸ ರೂಪಾಂತರಿ ತಳಿ ನಮ್ಮ ಪ್ರಗತಿಗೆ ಗಂಭೀರ ಅಡ್ಡಿ ಉಂಟುಮಾಡಬಹುದು-ಬೋರಿಸ್ ಜಾನ್ಸನ್


ಭಾನುವಾರ ನಡೆದ ಯುರೋ 2020 ರ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಸೋಲಿನ ನಂತರ ಮೂವರು ಕಪ್ಪು ಪುಟ್ ಬಾಲ್ ಆಟಗಾರರನ್ನು ಆನ್‌ಲೈನ್ ಜನಾಂಗೀಯ ನಿಂದನೆಗೆ ಒಳಪಡಿಸಿದ್ದರಿಂದ ಈಗ ಬೋರಿಸ್ ಜಾನ್ಸನ್ ವಿರುದ್ಧ ಕಿಡಿಕಾರಲಾಗುತ್ತಿದೆ.ಈ ಹಿನ್ನಲೆಯಲ್ಲಿ ಈಗ ಪ್ರತಿಕ್ರಿಯಿಸಿರುವ ಅವರು ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.


ಇದನ್ನೂ ಓದಿ: ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ವಿವಾಹವಾದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್


'ಬ್ರಿಟನ್ ನಲ್ಲಿ ವರ್ಣಭೇದ ನೀತಿಯು ಒಂದು ಸಮಸ್ಯೆಯೆಂದು ನಾನು ಭಾವಿಸುತ್ತೇನೆ, ಮತ್ತು ಅದನ್ನು ನಿಭಾಯಿಸಬೇಕಾಗಿದೆ. ಮತ್ತು ಈ ಬೆಳಿಗ್ಗೆ ನಾನು ವಿವರಿಸಿದ ಕೆಲವು ವಿಧಾನಗಳೊಂದಿಗೆ ಅದಕ್ಕೆ ಅಂತ್ಯ ಹಾಡಬೇಕಾಗಿದೆ ಎಂದು ಜಾನ್ಸನ್ (Boris Johnson) ಸಂಸತ್ತಿನಲ್ಲಿ ಹೇಳಿದರು.ಇದಕ್ಕೂ ಮೊದಲು ಜಾನ್ಸನ್ ಅವರು ತಮ್ಮ ಡೌನಿಂಗ್ ಸ್ಟ್ರೀಟ್ ನಿವಾಸದಲ್ಲಿ ಮಂಗಳವಾರ ಸಾಮಾಜಿಕ ಮಾಧ್ಯಮ ಕಂಪನಿಗಳ ಮುಖ್ಯಸ್ಥರಿಗೆ ಆತಿಥ್ಯ ವಹಿಸಿದ ನಂತರ ಆನ್‌ಲೈನ್ ನಿಂದನೆಯನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವ ಕ್ರಮಗಳನ್ನು ಸಂಸತ್ತಿನಲ್ಲಿ ವಿವರಿಸಿದ್ದರು.


'ನಾವು ಮಾಡುತ್ತಿರುವುದು ಇಂದು ಫುಟ್ಬಾಲ್ ನಿಷೇಧದ ಆದೇಶವನ್ನು ಬದಲಾಯಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಇದರಿಂದಾಗಿ ನೀವು ತಪ್ಪಿತಸ್ಥರಾಗಿದ್ದರೆ...ಫುಟ್ಬಾಲ್ ಆಟಗಾರರ ಆನ್‌ಲೈನ್‌ನಲ್ಲಿ ಜನಾಂಗೀಯ ನಿಂದನೆ ಆಗಿದ್ದರೆ ನೀವು ಪಂದ್ಯಕ್ಕೆ ಹೋಗುವುದಿಲ್ಲ, ಮತ್ತು ಯಾವುದೇ ವಿನಾಯಿತಿ ಮತ್ತು ಕ್ಷಮೆ ಇಲ್ಲ ಎಂದು ಅವರು ಹೇಳಿದರು.


ಇದನ್ನೂ ಓದಿ: Boris Johnson: ಕೊರೋನಾ ಕಾರಣದಿಂದ ಭಾರತ ಪ್ರವಾಸ ರದ್ದುಗೊಳಿಸಿದ ಯುಕೆ ಪ್ರಧಾನಿ!


ಕಳೆದ ರಾತ್ರಿ ನಾನು ಫೇಸ್‌ಬುಕ್, ಟ್ವಿಟರ್, ಟಿಕ್‌ಟಾಕ್, ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್‌ನ ಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚಿಸಿದ್ದೇನೆ ಮತ್ತು ಆನ್‌ಲೈನ್ ಹಾನಿ ಮಸೂದೆಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಶಾಸನವನ್ನು ತರುತ್ತೇವೆ.ಒಂದು ವೇಳೆ ದ್ವೇಷ ಮತ್ತು ವರ್ಣಭೇದ ನೀತಿಗೆ ತಡೆ ತರದೇ ಇದ್ದಲ್ಲಿ ಅಂತಹ ಪ್ಲಾಟ್‌ಫಾರ್ಮ್‌ಗಳು ತಮ್ಮ ಜಾಗತಿಕ ಆದಾಯದ ಶೇ 10 ರಷ್ಟು ತಂಡವನ್ನು ತೆರಬೇಕಾಗುತ್ತದೆ ಎಂದು ಹೇಳಿದರು.


ಇದನ್ನು ಓದಿ-ರೂಪಾಂತರಿ ಕೊರೊನಾ ನಡುವೆಯೂ ಭಾರತಕ್ಕೆ ಬರ್ತಾರಾ ಬ್ರಿಟನ್ ಪ್ರಧಾನಿ...?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.