ಇಸ್ಲಾಮಾಬಾದ್ (ಪಾಕಿಸ್ತಾನ) : ಡೈಲಿ ಟೈಮ್ಸ್ ವರದಿ ಪ್ರಕಾರ ಮಹಿಳೆಯರ ಸಮಾಧಿಗೆ ಬೀಗ ಹಾಕಲಾಗುತ್ತಿದೆ. ಇದು ಸಮಾಜಕ್ಕೆ ನಾಚಿಕೆಗೇಡಿನ ಸುದ್ದಿ. ಸತ್ತವರ ಮೇಲೆ ಅತ್ಯಾಚಾರ ಮಾಡುವ ಮಟ್ಟಕ್ಕೆ ಜನರು ಇಳಿದಿದ್ದಾರೆ, ಅವರನ್ನು ಸುರಕ್ಷಿತವಾಗಿಡಲು, ಸಮಾಧಿಗಳಿಗೆ ಬೀಗಗಳನ್ನು ಅಳವಡಿಸಲಾಗುತ್ತಿದೆ ಎಂದರೆ ಮಾನವೀಯ ಸಮಾಜ ತಲೆತಗ್ಗಿಸುವ ದುಸ್ಥಿತಿ ಇದು. ಇದು ಎಲ್ಲೂ ಕಂಡಿಲ್ಲದ ಸ್ಥಿತಿಯಾಗಿದೆ. 


COMMERCIAL BREAK
SCROLL TO CONTINUE READING

ಇದರ ಹಿಂದೆ ಮೂಲಭೂತವಾದಿ ಚಿಂತನೆಯೇ ಕಾರಣ ಎಂದು ‘ದಿ ಕರ್ಸ್ ಆಫ್ ಗಾಡ್, ವೈ ಐ ಲೆಫ್ಟ್ ಇಸ್ಲಾಂ’ ಕೃತಿಯ ಲೇಖಕ ಹ್ಯಾರಿಸ್ ಸುಲ್ತಾನ್ ಹೇಳಿದ್ದಾರೆ. ಪಾಕಿಸ್ತಾನವು ಅಶ್ಲೀಲ, ಲೈಂಗಿಕ ಹತಾಶೆಯ ಸಮಾಜವನ್ನು ಸೃಷ್ಟಿಸಿದೆ, ಜನರು ಈಗ ತಮ್ಮ ಹೆಣ್ಣುಮಕ್ಕಳ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ, ಆದ್ದರಿಂದ ಅವರು ಅತ್ಯಾಚಾರಕ್ಕೊಳಗಾಗುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. 


ಇದನ್ನೂ ಓದಿ : ತನ್ನ ಸೇನಾ ವೆಚ್ಚ ಭರಿಸಲು US ಬಳಿ 'ದೇಣಿಗೆ'ಗಾಗಿ ಮೊರೆಯಿಟ್ಟ ಬಡ ಪಾಕಿಸ್ತಾನ


ನೆಕ್ರೋಫಿಲಿಯಾ ಪ್ರಕರಣಗಳು ಹೆಚ್ಚುತ್ತಿವೆ : 


ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. 2011ರಲ್ಲಿ ಕರಾಚಿಯಲ್ಲಿ ವ್ಯಕ್ತಿಯೊಬ್ಬ 48 ಮಹಿಳೆಯರ ಶವಗಳ ಮೇಲೆ ಅತ್ಯಾಚಾರ ಎಸಗಿದ್ದ. ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು. ಅವನ ಹೆಸರು ಮುಹಮ್ಮದ್ ರಿಜ್ವಾನ್. ಕಳೆದ ವರ್ಷ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿಗಳು ಚಕ್ ಕಮ್ಲಾ ಗ್ರಾಮದಲ್ಲಿ ಹದಿಹರೆಯದ ಹುಡುಗಿಯ ಶವವನ್ನು ಅಗೆದು ಅತ್ಯಾಚಾರ ಎಸಗಿದ್ದರು. ಅದೇ ದಿನ ರಾತ್ರಿ ಸಂಬಂಧಿಕರು ಶವವನ್ನು ಹೂತು ಹಾಕಿರುವ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ.


2021 ರಲ್ಲಿ, ಗುಲಾಮುಲ್ಲಾ ಬಳಿಯ ಹಳ್ಳಿಯಲ್ಲಿ ಜನರು ಶವವನ್ನು ಅತ್ಯಾಚಾರ ಮಾಡಿದರು. ಗ್ರಾಮದ ಜಮೀನ್ದಾರನ ಮಗನಾದ ಸ್ಥಳೀಯ ಗೂಂಡಾ ಈ ಘೋರ ಅಪರಾಧದ ಪ್ರಮುಖ ಆರೋಪಿ ಎಂದು ಸಂತ್ರಸ್ತೆಯ ಕುಟುಂಬ ಹೇಳಿದೆ. 2020 ರಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ ಮಹಿಳೆಯ ಮೃತದೇಹದ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದನ್ನು ಜನರು ಹಿಡಿದಿದ್ದಾರೆ.


ಇದನ್ನೂ ಓದಿ : ಚೀನಾ - ಭಾರತ ಸಂಬಂಧ ಏಕೆ ಹದಗೆಟ್ಟಿತು? ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೊಟ್ರು ಕಾರಣ!


ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಪಾಕಿಸ್ತಾನದಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಜೀವನದಲ್ಲಿ ಕೆಲವು ರೀತಿಯ ಹಿಂಸೆಯನ್ನು ಎದುರಿಸಿದ್ದಾರೆ. ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.


ನೆಕ್ರೋಫಿಲಿಯಾ ಎಂದರೇನು?


ಒಬ್ಬ ವ್ಯಕ್ತಿಯು ಮೃತ ದೇಹಗಳನ್ನು ಅತ್ಯಾಚಾರ ಮಾಡುವಲ್ಲಿ ವಿಪರೀತ ಆನಂದವನ್ನು ಪಡೆಯುವುದನ್ನು ನೆಕ್ರೋಫಿಲಿಯಾ ಎನ್ನುತ್ತಾರೆ. ಇದೊಂದು ನೆಕ್ರೋಫಿಲಿಯಾ ಮಾನಸಿಕ ಸ್ಥಿತಿಯಾಗಿದೆ. ಇದು ಪ್ಯಾರಾಫಿಲಿಯಾದ ಭಯಾನಕ ರೂಪವಾಗಿದೆ. ಇದು ಗಂಭೀರ ಮಾನಸಿಕ ಕಾಯಿಲೆಯಾಗಿದ್ದು, ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆಯ ಅಗತ್ಯವಿರುತ್ತದೆ. ಪಾಕಿಸ್ತಾನದಲ್ಲಿ ಇದರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಆತಕ ಸೃಷ್ಟಿಸಿದೆ.


ಇದನ್ನೂ ಓದಿ : ಸುಡಾನ್ ಸಮರದಿಂದ ಪೆಪ್ಸಿ-ಕೋಕ್ ಪೂರೈಕೆಗೆ ಅಡಚಣೆ; ನಿತ್ಯೋಪಯೋಗಿ ಉತ್ಪನ್ನಗಳಲ್ಲೂ ಕೊರತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.