ನವದೆಹಲಿ: ಸಾಂಪ್ರದಾಯಿಕ ಕಾನೂನು ಚೌಕಟ್ಟುಗಳಿಂದ ಸೌದಿ ವಿಮಖವಾಗುತ್ತಿದೆಯಾ? ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ಕೆಲವು ವರ್ಷಗಳಲ್ಲಿ ಸೌದಿಯಲ್ಲಿನ ಬೆಳವಣಿಗೆಗಳನ್ನು ನೋಡಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಸೌದಿಯಲ್ಲಿ ಮಹಿಳೆಯರು ಬುರ್ಖಾ ಇಲ್ಲದೆ ಹೊರಗೆ ನಡೆದಾಡುವುದು ಕಷ್ಟವಾಗಿತ್ತು, ಆದರೆ ಈಗ ಸಂದರ್ಭಕ್ಕೆ ತಕ್ಕಂತೆ ಸೌದಿ ಕೂಡ ಬದಲಾಗುತ್ತಿದೆ ಎನ್ನುವುದಕ್ಕೆ ಈಗ ಅಲ್ಲಿನ ಕೆಲವು ನಿದರ್ಶನ ಇದಕ್ಕೆ ಸಾಕ್ಷಿ ಎನ್ನಬಹುದು. ಕಳೆದ ವರ್ಷ ಸೌದಿ ರಾಜಕುಮಾರ್ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ ಇಸ್ಲಾಂನಲ್ಲಿ ನಿಲುವಂಗಿ ಕಡ್ಡಾಯವಲ್ಲ ಡ್ರೆಸ್ ಕೋಡ್ ಸಡಿಲಿಸಬಹುದು ಎಂದು ಸುಳಿವು ನೀಡಿದ್ದರು. ಆದರೆ ಅವರ ಉದಾರೀಕರಣದ ನಿಲುವಿನ ಹೊರತಾಗಿಯೂ, ಯಾವುದೇ ಅಧಿಕೃತ ಶಾಸನ ಇಲ್ಲದೆ ಇರುವುದರಿಂದ ಈ ಅಭ್ಯಾಸವು ಹಾಗೆ ಮುಂದುವರೆಯಿತು.


ಕೆಲವು ಮಹಿಳೆಯರಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ನಿಲುವನ್ನು ಪ್ರತಿಭಟಿಸಿದ್ದರು, ಈಗ ಇನ್ನು ಕೆಲವು ಮಹಿಳೆಯರು ಈ ಎಲ್ಲ ನಿಯಮಗಳನ್ನು ಧಿಕ್ಕರಿಸಿ ಅಬಯಾವಿಲ್ಲದೆ ಹೊರಗೆ ಸುತ್ತಾಡುವ ಮೂಲಕ ಸಂಪ್ರದಾಯವಾದಿ ನಿಲುವುಗಳನ್ನು ಧಿಕ್ಕರಿಸಿದ್ದಾರೆ. ಮಶೇಲ್ ಅಲ್-ಜಲೂದ್ ಎನ್ನುವ ಮಹಿಳೆ ಈ ಸಾಂಸ್ಕೃತಿಕ ದಂಗೆಯ ಮೂಲಕ ಒಂದು ಹೆಜ್ಜೆ ಮುಂದೆ ಇಟ್ಟು ನಿಲುವಂಗಿ ಧರಿಸುವುದನ್ನೇ ಬಿಟ್ಟಿದ್ದಾರೆ. ಕಳೆದ ವಾರ ಮಧ್ಯ ರಿಯಾದ್‌ನ ಮಾಲ್‌ವೊಂದರಲ್ಲಿ ಮಾರ್ಡನ್ ಡ್ರೆಸ್ ಧರಿಸಿ ಹಾಗೆ ಸುತ್ತಾಡುವ ಮೂಲಕ ಗಮನ ಸೆಳೆದಿದ್ದಾಳೆ. 


ಇದೇ ರೀತಿ ಈಗ ಮನಹೇಲ್ ಅಲ್-ಒಟೈಬಿ ಎಂಬ 25 ವರ್ಷದ ಮಹಿಳೆ ಕೂಡ ಇದೆ ಮಾದರಿಯನ್ನು ಅನುಸರಿಸಿದ್ದಾಳೆ. ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆಕೆ 'ನಾಲ್ಕು ತಿಂಗಳುಗಳಿಂದ ನಾನು ರಿಯಾದ್ ನಲ್ಲಿ ಅಬಯಾ ಇಲ್ಲದೆ ವಾಸಿಸುತ್ತಿದ್ದೇನೆ" ಎಂದು ಒಟೈಬಿ ಹೇಳಿದ್ದಾರೆ.