ಸ್ಟಾಕ್ಹೋಮ್: ಅಮೇರಿಕದ ಅರ್ಥಶಾಸ್ತ್ರಜ್ಞ ರಿಚರ್ಡ್ ಥಲೇರ್ ಸೋಮವಾರ ಆರ್ಥಿಕತೆ ಮತ್ತು ಮನೋವಿಜ್ಞಾನದ ನಡುವಿನ ಅಂತರವನ್ನು ಸಂಚರಿಸುವ ತನ್ನ ಪ್ರವರ್ತಕ ಕೆಲಸಕ್ಕಾಗಿ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.


COMMERCIAL BREAK
SCROLL TO CONTINUE READING

ರಿಚರ್ಡ್ ಥಲೇರ್ ಪ್ರಾಯೋಗಿಕ ಸಂಶೋಧನೆಗಳು "ಸೀಮಿತವಾದ ವಿವೇಚನಾಶೀಲತೆ, ಸಾಮಾಜಿಕ ಆದ್ಯತೆಗಳು ಮತ್ತು ಸ್ವಯಂ ನಿಯಂತ್ರಣದ ಕೊರತೆಗಳ ಪರಿಣಾಮಗಳನ್ನು ಅನ್ವೇಷಿಸುವ ಮೂಲಕ, ಮಾನವ ಲಕ್ಷಣಗಳು ವೈಯಕ್ತಿಕ ನಿರ್ಧಾರಗಳನ್ನು ಮತ್ತು ಮಾರುಕಟ್ಟೆ ಫಲಿತಾಂಶಗಳನ್ನು ವ್ಯವಸ್ಥಿತವಾಗಿ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸಿದೆ" ಎಂದು ನೊಬೆಲ್ ತೀರ್ಪುಗಾರರ ಒಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


"ಅವರ ಪ್ರಾಯೋಗಿಕ ಸಂಶೋಧನೆಗಳು ಮತ್ತು ಸೈದ್ಧಾಂತಿಕ ಒಳನೋಟಗಳು ನಡವಳಿಕೆಯ ಅರ್ಥಶಾಸ್ತ್ರದ ಹೊಸ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಕ್ಷೇತ್ರವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ, ಇದು ಆರ್ಥಿಕ ಸಂಶೋಧನೆ ಮತ್ತು ನೀತಿಗಳ ಹಲವಾರು ಕ್ಷೇತ್ರಗಳಲ್ಲಿ ಆಳವಾದ ಪರಿಣಾಮವನ್ನು ಬೀರಿದೆ" ತೀರ್ಪುಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.