China ನಾಗರಿಕತ್ವ ತ್ಯಜಿಸಿ, ಗೋಲ್ಡನ್ ಪಾಸ್ಪೋರ್ಟ್ ಪಡೆದು ಯುರೋಪ್ ತಲುಪಿದ ಏಷ್ಯಾದ ಶ್ರೀಮಂತ ಮಹಿಳೆ
ಚೀನಾದ ಕೋಟ್ಯಾಧಿಪತಿಗಳು ಇದೀಗ ಯುರೋಪಿಯನ್ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ದೊಡ್ಡ ಮೊತ್ತವನ್ನು ಪಾವತಿಸುತ್ತಿದ್ದಾರೆ. ಸೈಪ್ರಸ್ ಚೀನಾದ ಶ್ರೀಮಂತರಿಗೆ ಆದ್ಯತೆ ನೀಡುವ ದೇಶವಾಗಿದ್ದು, ಶ್ರೀಮಂತರಿಗೆ `ಗೋಲ್ಡನ್ ಪಾಸ್ಪೋರ್ಟ್` ನೀಡುತ್ತದೆ.
ನವದೆಹಲಿ: ಚೀನಾದ ಕೋಟ್ಯಾಧಿಪತಿಗಳು ಇದೀಗ ಯುರೋಪಿಯನ್ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ದೊಡ್ಡ ಮೊತ್ತವನ್ನು ಪಾವತಿಸುತ್ತಿದ್ದಾರೆ. ಸೈಪ್ರಸ್ ಚೀನಾದ ಶ್ರೀಮಂತರಿಗೆ ಆದ್ಯತೆ ನೀಡುವ ದೇಶವಾಗಿದ್ದು, ಶ್ರೀಮಂತರಿಗೆ 'ಗೋಲ್ಡನ್ ಪಾಸ್ಪೋರ್ಟ್' ನೀಡುತ್ತದೆ. ಮಾಧ್ಯಮಗಳಿಗೆ ಸೋರಿಕೆಯಾದ ಒಂದು ವರದಿಯ ಪ್ರಕಾರ ಚೀನಾದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಯಾಂಗ್ ಹುಯಿಯಾನ್ ಸೈಪ್ರಸ್‌ನ 'ಗೋಲ್ಡನ್ ಪಾಸ್‌ಪೋರ್ಟ್' ಮೂಲಕ ಯುರೋಪಿಯನ್ ಒಕ್ಕೂಟದ ಪೌರತ್ವವನ್ನುಪಡೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ. 23 ಅಕ್ಟೋಬರ್ 2018 ರಂದು ಅವರು ಸೈಪ್ರಸ್ ಪೌರತ್ವವನ್ನು ಪಡೆದುಕೊಂಡಿದ್ದಾರೆ.
ಸೈಪ್ರಸ್ ನಾಗರಿಕತ್ವ ಲಭಿಸಿದ್ದಾದರು ಹೇಗೆ?
'ಗೋಲ್ಡನ್ ಪಾಸ್‌ಪೋರ್ಟ್' ಪಡೆಯಲು ಸೈಪ್ರಸ್‌ನಲ್ಲಿ 2 ಮಿಲಿಯನ್ ಯುರೋಗಳಷ್ಟು ಹೂಡಿಕೆ ಮಾಡಿದ 500 ಚೀನೀ ಶ್ರೀಮಂತರಲ್ಲಿ ಯಾಂಗ್ ಹುಯಿಯಾನ್ ಕೂಡ ಒಬ್ಬರು. ಸೈಪ್ರಸ್ ಸರ್ಕಾರವು ತಮ್ಮ ದೇಶದ ಪೌರತ್ವವನ್ನು ಶ್ರೀಮಂತರಿಗೆ ನೀಡುತ್ತಿದೆ, ಅವರು ಸೈಪ್ರಸ್‌ನಲ್ಲಿ ಕನಿಷ್ಠ 2 ಮಿಲಿಯನ್ ಯುರೋಗಳಷ್ಟು ಹೂಡಿಕೆ ಮಾಡಬಹುದು ಮತ್ತು ಸೈಪ್ರಸ್ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡಬಹುದು. ಈ ಪಟ್ಟಿಯಲ್ಲಿರುವ ಇತರ ಎಂಟು ಜನರ ಹೆಸರುಗಳನ್ನೂ ಬಹಿರಂಗಪಡಿಸಲಾಗಿದೆ. ಈ ಪಟ್ಟಿ ಲು ವೆನ್ಬಿನ್ ಹೆಸರನ್ನು ಸಹ ಒಳಗೊಂಡಿದೆ. ಲು ಜುಲೈ 2019 ರಲ್ಲಿ ಸೈಪ್ರಸ್ ಗೋಲ್ಡನ್ ಪಾಸ್‌ಪೋರ್ಟ್ ಪಡೆದಿದ್ದಾರೆ. ಲು ಚೆಂಗ್ಡು ಪೀಪಲ್ಸ್ ಕಾಂಗ್ರೆಸ್ ಸದಸ್ಯೆಯಾಗಿದ್ದಾರೆ ಹಾಗೂ ಸಿಚುವಾನ್ ಟ್ರಾಯ್ ಇನ್ಫರ್ಮೇಷನ್ ಟೆಕ್ನಾಲಜಿ ಕಂಪನಿಯ ಮಾಲೀಕರಾಗಿದ್ದಾರೆ.
ಯಾಂಗ್ ಹುಯಿಯಾನ್ ಯಾರು?
ಯಾಂಗ್ ಹುಯಿಯಾನ್ ಚೀನಾದ ರಿಯಲ್ ಎಸ್ಟೇಟ್ ಕಂಪನಿ ಕಂಟ್ರಿ ಗಾರ್ಡನ್‌ನ ಒಡತಿಯಾಗಿದ್ದಾರೆ ಹಾಗೂ ಚೀನಾದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ.. ಯಾಂಗ್ ಹುಯಿಯಾನ್ ಅವರನ್ನು ಫೋರ್ಬ್ಸ್ 2020 ರಲ್ಲಿ ವಿಶ್ವದ ಆರನೇ ಶ್ರೀಮಂತ ಮಹಿಳೆ ಎಂದು ಪರಿಗಣಿಸಲಾಗಿದೆ ಮತ್ತು ಅವರ ಸಂಪತ್ತನ್ನು 20.3 ಬಿಲಿಯನ್ ಡಾಲರ್ ಇದೆ ಎಂದು ಅಂದಾಜಿಸಲಾಗಿತ್ತು. ಯಾಂಗ್ ಹುಯಿಯಾನ್ ತನ್ನ ಹೆಚ್ಚಿನ ಸಂಪತ್ತನ್ನು ಚೀನಾದ ಉನ್ನತ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅವರ ತಂದೆ ಯೆಯುಂಗ್ ಕ್ವಾಕ್ ಕೆಯುಂಗ್ ಅವರಿಂದ ಪಡೆದುಕೊಂಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಏನಿದು ಸೈಪ್ರಸ್ ಗೋಲ್ಡನ್ ಪಾಸ್ಪೋರ್ಟ್?
ಸೈಪ್ರಸ್ ದೇಶ ತನ್ನ ಗೋಲ್ಡನ್ ಪಾಸ್ಪೋರ್ಟ್ ಯೋಜನೆಯನ್ನು 2013 ರಿಂದ ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಕನಿಷ್ಠ 2 ಮಿಲಿಯನ್ ಯುರೋಗಳಷ್ಟು ಹೂಡಿಕೆ ಅಗತ್ಯವಿದೆ. ಅದರ ನಂತರ ವ್ಯಕ್ತಿಯು ಸೈಪ್ರಸ್‌ನ ಗೋಲ್ಡನ್ ಪಾಸ್‌ಪೋರ್ಟ್ ಪಡೆಯಬಹುದಾಗಿದೆ. ಅದರ ಮೇಲೆ ಅವನು ವೀಸಾ ಇಲ್ಲದೆ ಯುರೋಪಿನಲ್ಲಿ ಎಲ್ಲಿ ಬೇಕಾದರೂ ಸಂಚರಿಸಬಹುದು. ಆದರೆ ಆ ದೇಶ ಯುರೋಪಿಯನ್ ಒಕ್ಕೂಟದ ಭಾಗವಾಗಿರಬೇಕು. ಕಳೆದ ವರ್ಷ ಈ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.