ನವದೆಹಲಿ: ರೋಹಿಂಗ್ಯಾ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ  ಬಾಂಗ್ಲಾದೇಶವು ಚೀನಾ, ರಷ್ಯಾ, ಭಾರತ ಮತ್ತು ಜಪಾನ್ ಗಳ ಸಹಾಯವನ್ನು ನಿರೀಕ್ಷಿಸಿದೆ. 


COMMERCIAL BREAK
SCROLL TO CONTINUE READING

ದಿ ಡೈಲಿ ಸ್ಟಾರ್ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಹೇಳಿಕೆಯನ್ನು ಉಲ್ಲೇಖಿಸಿದ್ದು '' ನಾವು  ಚೀನಾ ರಷ್ಯಾ ಭಾರತ,ಜಪಾನ್ ದೇಶಗಳು ರೊಹಿಂಗ್ಯಾ ಸಮಸ್ಯೆಯಲ್ಲಿ  ಪ್ರಮುಖ ಪಾತ್ರ ವಹಿಸಬೇಕೆಂದು ಕೇಳಿಕೊಳ್ಳುತ್ತೇವೆ" ಎಂದು ತಿಳಿಸಿದರು. 


ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಗುಸ್ಟಾವೊ ಮೆಝಾ-ಕ್ಯುಡ್ರಾ ಹಸೀನಾರವರ ಅಧಿಕೃತ ನಿವಾಸದಲ್ಲಿನ ಭೇಟಿಯ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.ರೋಹಿಂಗ್ಯಾ ಪ್ರಜೆಗಳಿಗೆ ಬಾಂಗ್ಲಾದೇಶದಿಂದ ವಾಪಾಸ್ ಮಯನ್ಮಾರ್ ಗೆ ಹಿಂದುರಿಗಿಸಲು ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಹೆಚ್ಚು ಒತ್ತಡವನ್ನು ಮಯನ್ಮಾರ್ ಸರ್ಕಾರದ ಮೇಲೆ ಹಾಕಬೇಕೆಂದು ಶೇಖ್ ಹಸೀನಾ ತಿಳಿಸಿದ್ದಾರೆ 


ಮ್ಯಾನ್ಮಾರ್ ಸರ್ಕಾರವು ರೊಹಿಂಗ್ಯಾರ ವಿಷಯದಲ್ಲಿ ಬಾಂಗ್ಲಾದೇಶದೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಅನುಸಾರವಾಗಿ ವರ್ತಿಸಬೇಕೆಂದರು. ರೋಹಿಂಗೀಯ ಪೌರತ್ವರ  ಮತ್ತು ಅದರ ಜೊತೆಗಿನ ಹಕ್ಕುಗಳನ್ನು ಮ್ಯಾನ್ಮಾರ್ ಸರ್ಕಾರವು ತಿರಸ್ಕರಿಸಿದೆ.