ನವದೆಹಲಿ: ನಿಜವಾದ ಪ್ರೀತಿ ಇದ್ದಾಗ ಅದಕ್ಕೆ ಯಾವುದೇ ಆಸ್ತಿ, ಅಂತಸ್ತು, ಸ್ಥಾನಮಾನ ಕೂಡ ಮುಖ್ಯವಾಗುವುದಿಲ್ಲ ಈಗ ಅಂತಹ ಒಂದು ಪ್ರೇಮ ಕಹಾನಿ ಪ್ರಧಾನಮಂತ್ರಿ ಲೈಫ್ ನಲ್ಲಿಯೂ ನಡೆಯಬಹುದೆಂದರೆ ನಿಜಕ್ಕೂ ಅಚ್ಚರಿಯ ಸಂಗತಿ ಅಲ್ಲವೇ?


COMMERCIAL BREAK
SCROLL TO CONTINUE READING

ಹೌದು, ಇದು ನಿಜಕ್ಕೂ ಅಚ್ಚರಿಯ ಸಂಗತಿಯೇ, ಹಾಗಾದರೆ ಆ ಪ್ರಧಾನಮಂತ್ರಿ ಯಾವ ದೇಶದವರು ಎನ್ನುತ್ತೀರಾ? ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜಾಕಿಂಡಾ ಆರ್ಡೆರ್ನ್, ಈಸ್ಟರ್ ರಜಾದಿನದ ಸಂದರ್ಭದಲ್ಲಿ ಅವರ ದೀರ್ಘಾವಧಿಯ ಸ್ನೇಹಿತ ಏಕಾಏಕಿ ಪ್ರಧಾನ ಮಂತ್ರಿಗೆ ಮದುವೆ ಪ್ರಸ್ತಾಪವನ್ನು ಇಟ್ಟಿದ್ದಾನೆ. 


ಈ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಜಾಕಿಂಡಾ ಆರ್ಡೆರ್ನ್ " ಈ ಪ್ರಶ್ನೆ ತಮಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಹೇಳಿದರು.ನ್ಯೂಜಿಲೆಂಡ್ನ ಹಾಕ್ಸ್ ಬೇನಲ್ಲಿನ ಮಾಯಾ ಪೆನಿನ್ಸುಲಾದಲ್ಲಿ ಮೊಕೊತಾಹಿ ಬೆಟ್ಟದ ಮೇಲೆ ಈ ಪ್ರಸ್ತಾಪವನ್ನು ಮಾಡಲಾಗಿತ್ತು.ಇದಕ್ಕೆ ಆರ್ಡನ್ ತಮಾಶೆ ಮಾಡುತ್ತಾ  "ಇದು ತುಂಬಾ ರೋಮ್ಯಾಂಟಿಕ್ ...," ಎಂದು ಹೇಳಿದರು. ಆದರೆ ಈಗ ಇನ್ನು ಮದುವೆ ಯಾವಾಗ ಎಂದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.


1990 ರಲ್ಲಿ ಪಾಕಿಸ್ತಾನದ ಬೆನಜೀರ್ ಭುಟ್ಟೊ ಬಳಿಕ ಕಚೇರಿಯಲ್ಲಿ ಜನ್ಮ ನೀಡಲಿರುವ ಆರ್ಡರ್ನ್ ಮಾತ್ರ ಎರಡನೆಯ ಚುನಾಯಿತ ನಾಯಕನಾಗಿದ್ದಾರೆ, ಒಂದು ವೇಳೆ ಅವರು ಕಚೇರಿಯಲ್ಲಿ ಮದುವೆಯಾದರೆ. ಅಧಿಕಾರದಲ್ಲಿದ್ದಾಗ ಮದುವೆಯಾದ ಪ್ರಮುಖ ನಾಯಕಿ ಎನ್ನುವ ಖ್ಯಾತಿ ಪಡೆಯಲಿದ್ದಾರೆ.