Wagner Group Mutiny: ರಷ್ಯಾದಲ್ಲಿ ಸಕ್ರೇಯವಾಗಿರುವ ಖಾಸಗಿ ಸೈನ್ಯದ ವ್ಯಾಗ್ನರ್ ಗುಂಪು ದಂಗೆ ಎದ್ದ ಬಳಿಕ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವ್ಯಾಗ್ನರ್ ಗ್ರೂಪ್ ನಮ್ಮ ಬೆನ್ನಿಗೆ ಚೂರಿ ಹಾಕಿದೆ ಎಂದು ಪುಟಿನ್ ಹೇಳಿದ್ದಾರೆ. ನಾವು ನಮ್ಮ ನಾಗರಿಕರನ್ನು ಮತ್ತು ದೇಶವನ್ನು ಯಾವುದೇ ಬೆಲೆ ತೆತ್ತು ಕೂಡ ರಕ್ಷಿಸುತ್ತೇವೆ. ವ್ಯಾಗ್ನರ್ ಗ್ರೂಪ್ ರಷ್ಯಾಕ್ಕೆ ಸವಾಲು ಹಾಕಿದೆ ಎಂದು ಪುಟಿನ್ ಹೇಳಿದ್ದಾರೆ. ನಾವು ಒಗ್ಗಟ್ಟಾಗಿ ಉಳಿಯಬೇಕು. ವ್ಯಾಗ್ನರ್ ರಷ್ಯಾಕ್ಕೆ ದ್ರೋಹ ಬಗೆದಿದ್ದಾರೆ. ನಾವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕಾಗಿದೆ. ಇದು ಅಂತರ್ಯುದ್ಧ ಮತ್ತು ದೇಶದ್ರೋಹದ ಸ್ಥಿತಿಯಾಗಿದೆ. ದೇಶದ್ರೋಹಿಗಳ ವಿರುದ್ಧ ಹೋರಾಡುತ್ತೇವೆ ಎಂದು ಅವರು ಹೇಳಿದ್ದಾರೆ  ರಷ್ಯಾದಲ್ಲಿ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ.  ವ್ಯಾಗ್ನರ್ ಗುಂಪಿನ ಹೋರಾಟಗಾರರು ರಾಜಧಾನಿ ಮಾಸ್ಕೋದತ್ತ ಹೆಜ್ಜೆ ಹಾಕಿದ್ದಾರೆ. ಈ ವಂಚನೆಯಿಂದ ಪುಟಿನ್ ಆಕ್ರೋಶಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ದೇಶದ್ರೋಹಿಗಳನ್ನು ಭಯೋತ್ಪಾದಕರಂತೆ ಶಿಕ್ಷಿಸಲಾಗುವುದು
ಬಂಡಾಯವೆದ್ದವರನ್ನು ಭಯೋತ್ಪಾದಕರಂತೆ ಶಿಕ್ಷಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ರಷ್ಯಾದ ಸೈನ್ಯವು ವೀರರಂತೆ ಹೋರಾಡುತ್ತಿದೆ. ನಾವು ಒಗ್ಗಟ್ಟಾಗಿ ಉಳಿಯಬೇಕು. ವ್ಯಾಗ್ನರ್ ದೇಶ ವಿರೋಧಿ ಚಟುವಟಿಕೆ ನಿಲ್ಲಿಸಬೇಕು. ದೇಶದ್ರೋಹ ಮಾಡಿದವರಿಗೆ ಶಿಕ್ಷೆಯಾಗುತ್ತದೆ. ರಷ್ಯಾದಲ್ಲಿ ಪರಿಸ್ಥಿತಿ ಹದಗೆಡುತ್ತಿರುವಂತೆ ತೋರುತ್ತಿದ್ದು, ಇದೇ ವೇಳೆ ಪುಟಿನ್ ಅವರ ಈ ದೊಡ್ಡ ಹೇಳಿಕೆ ಮುನ್ನೆಲೆಗೆ ಬಂದಿದೆ.


ರಷ್ಯಾ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲಾಗುತ್ತಿದೆ
ರಷ್ಯಾ ರಾಷ್ಟ್ರದ ಭವಿಷ್ಯವನ್ನು ಈಗ ನಿರ್ಧರಿಸಲಾಗುತ್ತಿದೆ ಎಂದು ಪುಟಿನ್ ಹೇಳಿದ್ದಾರೆ. ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಲು ನಮಗೆ ಎಲ್ಲಾ ಶಕ್ತಿಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ, ರಷ್ಯಾದ ರಕ್ಷಣಾ ಸಚಿವಾಲಯವು ವ್ಯಾಗ್ನರ್ ಗ್ರೂಪ್ನ ಖಾಸಗಿ ಮಿಲಿಟರಿ ಕಂಪನಿಯ ಸೈನಿಕರನ್ನು ತಮ್ಮ ಸಶಸ್ತ್ರ ದಂಗೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದೆ ಮತ್ತು ಅವರ ನೆಲೆಗಳಿಗೆ ಮರಳಲು ಸೂಚಿಸಿದೆ.


ಇದನ್ನೂ ಓದಿ-Ginger Ale: ಯಾವ ಪಾನೀಯ ಕೈಯಲ್ಲಿ ಹಿಡಿದು ಪ್ರಧಾನಿ ಮೋದಿ ಬೀಡೆನ್ ಗೆ ಚಿಯರ್ಸ್ ಹೇಳಿದ್ರು?


ವ್ಯಾಗ್ನರ್ ಗ್ರೂಪ್ ಪ್ರತೀಕಾರ ತೀರಿಸಿಕೊಳ್ಳಲಿದೆ
ಅತ್ತ, ನಮ್ಮ  ಹೋರಾಟಗಾರರ ಮೇಲೆ ರಷ್ಯಾದ ಸೈನ್ಯವು ದಾಳಿ ಮಾಡಿದೆ ಎಂದು ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಹೇಳಿದ್ದಾರೆ. ರಷ್ಯಾದ ಸೇನೆಯ ದಾಳಿಯಲ್ಲಿ ನಮ್ಮ ಅನೇಕ ಹೋರಾಟಗಾರರು ಸಾವನ್ನಪ್ಪಿದ್ದಾರೆ. ನಮ್ಮೆ  ಸೇನೆಗೆ ಶಸ್ತ್ರಾಸ್ತ್ರಗಳನ್ನು ನೀಡಿಲ್ಲ. ನಮ್ಮ ಸೇನೆಗೆ ಸೇನಾ ಸೌಲಭ್ಯ ನೀಡಿಲ್ಲ. ರಷ್ಯಾದ ರಕ್ಷಣಾ ಸಚಿವರನ್ನು ತೆಗೆದುಹಾಕಬೇಕು. ರಕ್ಷಣಾ ಸಚಿವರನ್ನು ತೆಗೆದುಹಾಕದಿದ್ದರೆ, ಫಲಿತಾಂಶವು ಕೆಟ್ಟದಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.


ಇದನ್ನೂ ಓದಿ-PM Modi In US: ಪ್ರಧಾನಿ ಮೋದಿ ಭಾಷಣ ಬಹಿಷ್ಕರಿಸಲು ಮುಂದಾದ ಇಬ್ಬರು ಅಮೆರಿಕ ಸಂಸದರು


ಬಂಡಾಯವು ಇದ್ದಕ್ಕಿದ್ದಂತೆ ಪ್ರಾರಂಭವಾಗಲಿಲ್ಲ ಎಂದು ವ್ಯಾಗ್ನರ್ ಗ್ರೂಪ್ ಮುಖ್ಯಸ್ಥರು ಹೇಳಿದ್ದಾರೆ. ಹಲವು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ವ್ಯಾಗ್ನರ್ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿದ ಆರೋಪವೂ ರಷ್ಯಾ ಮೇಲಿದೆ. ದಾಳಿಯಲ್ಲಿ ವ್ಯಾಗ್ನರ್ ಗುಂಪಿನ ಹಲವು ಹೋರಾಟಗಾರರು ಮೃತಪಟ್ಟಿದ್ದು,  ರಷ್ಯಾ ಸೇನೆ ಈ ದಾಳಿ ನಡೆಸಿದೆ ಎಂದು ಅದು ಆರೋಪಿಸಿದೆ. ದಾಳಿಯ ನಂತರ, ಪ್ರಿಗೋಜಿನ್ ಸೇಡು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಣತೊಟ್ಟಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.