ರಷ್ಯಾದಲ್ಲಿ ಕೊರೊನಾದಿಂದ ಕೇವಲ 24 ಗಂಟೆಗಳಲ್ಲಿ 1,075 ಜನರು ಸಾವು
ರಷ್ಯಾದಲ್ಲಿ ಶನಿವಾರದಂದು ಕಳೆದ 24 ಗಂಟೆಗಳಲ್ಲಿ 1,075 ಕೋವಿಡ್ ಸಾವುಗಳನ್ನು ದಾಖಲಿಸಿರುವುದು ಈಗ ತೀವ್ರ ಚಿಂತೆಗೀಡು ಮಾಡುವಂತೆ ಮಾಡಿದೆ.
ನವದೆಹಲಿ: ರಷ್ಯಾದಲ್ಲಿ ಶನಿವಾರದಂದು ಕಳೆದ 24 ಗಂಟೆಗಳಲ್ಲಿ 1,075 ಕೋವಿಡ್ ಸಾವುಗಳನ್ನು ದಾಖಲಿಸಿರುವುದು ಈಗ ತೀವ್ರ ಚಿಂತೆಗೀಡು ಮಾಡುವಂತೆ ಮಾಡಿದೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅನೇಕ ಮನವಿಗಳು ಮತ್ತು ಸ್ಪುಟ್ನಿಕ್ ವಿ ಲಸಿಕೆಯ ಲಭ್ಯತೆಯ ಹೊರತಾಗಿಯೂ, ಕೇವಲ ಶೇ 36 ರಷ್ಟು ರಷ್ಯನ್ನರಿಗೆ ಮಾತ್ರ ಸಂಪೂರ್ಣ ಲಸಿಕೆ ತೆಗೆದುಕೊಂಡಿದ್ದಾರೆ.ಸರ್ಕಾರದ ತಾಜಾ ಅಂಕಿಅಂಶಗಳ ಪ್ರಕಾರ, ದೇಶವು ಶನಿವಾರ ದಾಖಲೆಯ 37,678 ಹೊಸ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ.
ಇದನ್ನೂ ಓದಿ: ICICI Bank Alert! ಖಾತೆಯ ಈ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ, ಭಾರೀ ನಷ್ಟ ಅನುಭವಿಸಬೇಕಾಗಬಹುದು
ಇನ್ನೊಂದೆಡೆಗ ಈಗ ಅಧಿಕೃತ ದಾಖಲೆಗಳ ಪ್ರಕಾರ ರಷ್ಯಾದಲ್ಲಿ ಕೊರೊನಾದಿಂದ 229,528 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರೋಸ್‌ಸ್ಟಾಟ್‌ನ ಅಂಕಿಅಂಶಗಳು ಸೂಚಿಸುವಂತೆ ಆಗಸ್ಟ್ ಅಂತ್ಯದ ವೇಳೆಗೆ 400,000 ಕ್ಕೂ ಹೆಚ್ಚು ಜನರು ಕರೋನವೈರಸ್ (Coronavirus) ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಮಾಸ್ಕೋ ರಷ್ಯಾದ ಕೊರೊನಾ ಕೇಂದ್ರ ಬಿಂದುವಾಗಿದ್ದು ಅಕ್ಟೋಬರ್ 28 ಮತ್ತು ನವೆಂಬರ್ 7 ರ ನಡುವೆ ಅನಿವಾರ್ಯವಲ್ಲದ ಸೇವೆಗಳನ್ನು ಸ್ಥಗಿತಗೋಳಿಸಲಿದೆ ಎನ್ನಲಾಗಿದೆ.
ICICI ಬ್ಯಾಂಕ್‌ಗೆ 3 ಕೋಟಿ ರೂ.ಗಳ ದಂಡ ವಿಧಿಸಿದ ಆರ್‌ಬಿಐ, ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ವೇಗವಾಗಿ ಹರಡುವ ಸೋಂಕುಗಳನ್ನು ತಡೆಯಲು ಅಕ್ಟೋಬರ್ 30 ರಿಂದ ರಾಷ್ಟ್ರವ್ಯಾಪಿ ವಾರದ ರಜೆಗೆ ಪುಟಿನ್ ಆದೇಶಿಸಿದ್ದಾರೆ.ಪುಟಿನ್ ಈ ವಾರ ರಷ್ಯಾದ ಹೆಚ್ಚಿನ ಸಾವಿನ ಪ್ರಮಾಣವನ್ನು ದುರದೃಷ್ಟವಶಾತ್ ಎಂದು ಕರೆದರು ಮತ್ತು ಲಸಿಕೆಯನ್ನು ಪಡೆಯಬೇಕೆಂದು ದೇಶದ ಜನರಲ್ಲಿ ಮನವಿ ಮಾಡಿಕೊಂಡರು.
ಸ್ಪುಟ್ನಿಕ್ ವಿ ಅನ್ನು ಹತ್ತಾರು ದೇಶಗಳಲ್ಲಿ ಇದನ್ನು ಬಳಸಲಾಗುತ್ತಿದೆಯಾದರೂ,ಅದನ್ನು ಯುರೋಪ್ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಅನುಮೋದಿಸಿಲ್ಲ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ