Russia-Ukraine Tension: ಏನಿದು False Flag Attack? ಇಂದಿನ ಸಮಯದಲ್ಲಿ ಅದು ಸಾಧ್ಯವೇ?
False Flag: `ಫಾಲ್ಸ್ ಫ್ಲಾಗ್ ದಾಳಿ` ಹಾಗೂ ಅದರಲ್ಲಿ ಶಾಮೀಲಾಗಿರುವ ಆರೋಪಿ ದೇಶಗಳ ಒಂದು ದೊಡ್ಡ ಇತಿಹಾಸವೇ ಇದೆ.
Russia Ukraine Conflict - ರಷ್ಯಾ (Russia) ತನ್ನ ಸೈನಿಕರ ಮೇಲೆ ದಾಳಿ ನಡೆಯುತ್ತಿರುವ ಚಿತ್ರಣವನ್ನು ಇಡೀ ವಿಶ್ವಕ್ಕೆ ತೋರಿಸಲು ಯೋಜನೆ ರೂಪಿಸುತ್ತಿದೆ ಎಂದು ಕಳೆದ ಹಲವು ವಾರಗಳಿಂದ ಅಮೆರಿಕಾದ (America) ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಈ ರೀತಿಯ ಫಾಲ್ಸ್ ಫ್ಲ್ಯಾಗ್ ದಾಳಿ ರಷ್ಯಾಗೆ ಉಕ್ರೇನ್ (Ukraine) ಮೇಲೆ ದಾಳಿ ನಡೆಸುವ ಕಾರಣ ಒದಗಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಸುಳ್ಳು ಧ್ವಜ ದಾಳಿ" ಒಂದು ಮಿಲಿಟರಿ ಕ್ರಮವಾಗಿದೆ, ಇದರಲ್ಲಿ ಒಂದು ದೇಶವು ರಹಸ್ಯವಾಗಿ, ಉದ್ದೇಶಪೂರ್ವಕವಾಗಿ ತನ್ನ ಸ್ವಂತ ಆಸ್ತಿ, ಮಾನವ ಜೀವಕ್ಕೆ ಹಾನಿ ಮಾಡುತ್ತದೆ, ಆದರೆ ತನ್ನ ಶತ್ರು ದೇಶವು ಹಾಗೆ ಮಾಡಿದೆ ಎಂದು ಇಡೀ ಜಗತ್ತಿಗೆ ತಿಳಿಸುತ್ತದೆ. ಬಳಿಕ ಅದನ್ನೇ ನೆಪವಾಗಿಸಿ ಅದು ತನ್ನ ಶತ್ರು ದೇಶದ ಮೇಲೆ ದಾಳಿ ನಡೆಸುತ್ತದೆ.
ರಷ್ಯಾದ ಈ ಯೋಜನೆಯನ್ನು ಬಹಿರಂಗಗೊಳಿಸುವ ಮೂಲಕ, ಬಿಡೆನ್ ಆಡಳಿತವು (Biden Administration) ಕ್ರೆಮ್ಲಿನ್ ಯುದ್ಧವನ್ನು ಸಮರ್ಥಿಸಲು ಅಂತಹ ಮೈದಾನಗಳನ್ನು ನಿರ್ಮಿಸುವುದನ್ನು ತಡೆಯಲು ಬಯಸುತ್ತದೆ. ಆದರೆ ಇಂತಹ "ಸುಳ್ಳು ಧ್ವಜ" ದಾಳಿಗಳು ಇಂದಿನದ ದಿನಗಳಲ್ಲಿ ಸಂಭವಿಸುವುದು ಸಾಧ್ಯವಿಲ್ಲ. ಏಕೆಂದರೆ ಉಪಗ್ರಹ ಚಿತ್ರಗಳು ಮತ್ತು ಯುದ್ಧ ಭೂಮಿಯ ಲೈವ್ ವೀಡಿಯೊವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಮತ್ತು ತಕ್ಷಣವೇ ಹಂಚಿಕೊಳ್ಳಲಾಗುತ್ತದೆ.
ಇದನ್ನೂ ಓದಿ-ಭದ್ರತೆಗೆ ಧಕ್ಕೆ ತರುವ 54 ಆ್ಯಪ್‌ಗಳನ್ನು ಭಾರತ ನಿಷೇಧಿಸಿದ ನಂತರ ಚೀನಾ ಹೇಳಿದ್ದೇನು?
ಇದರ ಜೊತೆಗೆ ಇಂದಿನ ದಿನಗಳಲ್ಲಿ ಸುಳ್ಳು ಧ್ವಜ ದಾಳಿಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸಾಕಷ್ಟು ಕಷ್ಟದ ಕೆಲಸವಾಗಿದೆ. "ಸುಳ್ಳು ಧ್ವಜ" ದಾಳಿ ಮತ್ತು ಅದರಲ್ಲಿ ಭಾಗಿಯಾಗಿರುವ ದೇಶಗಳಿಗೆ ಸುದೀರ್ಘ ಇತಿಹಾಸವಿದೆ. ಈ ಪದವು ಕಡಲ್ಗಳ್ಳರಿಂದ ಹುಟ್ಟಿಕೊಂಡಿದೆ. ಅವರು ಮೈತ್ರಿಪೂರ್ಣ (ಹಾಗೂ ಸುಳ್ಳು) ಧ್ವಜಗಳನ್ನು ನೆಟ್ಟು ವ್ಯಾಪಾರಿ ಹಡಗುಗಳನ್ನು ಸಾಕಷ್ಟು ಸನೀಹಕ್ಕೆ ಬರುವಂತೆ ಆಕರ್ಶಿಸಿ ಮತ್ತು ನಂತರ ಅವುಗಳ ಮೇಲೆ ದಾಳಿ ನಡೆಸುತ್ತಿದ್ದರು.
ಇದನ್ನೂ ಓದಿ-'ಅರ್ಧ ನರಿ ಅರ್ಧ ಮನುಷ್ಯ'.. ಏನಿದು ವಿಚಿತ್ರ! ಅಸಲಿ ಸತ್ಯ ಏನು ಗೊತ್ತಾ?
20ನೇ ಶತಮಾನದಲ್ಲಿ ಫಾಲ್ಸ್ ಫ್ಲ್ಯಾಗ್ ಗೆ ಸಂಬಂಧಿಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. 1939ರಲ್ಲಿ ನಾಜಿ ಜರ್ಮನಿಯ ಏಜೆಂಟ್‌ಗಳು ಪೋಲೆಂಡ್‌ನ ಗಡಿಯ ಸಮೀಪವಿರುವ ಜರ್ಮನ್ ರೇಡಿಯೊ ಕೇಂದ್ರದಿಂದ ಜರ್ಮನ್ ವಿರೋಧಿ ಸಂದೇಶಗಳನ್ನು ಪ್ರಸಾರ ಮಾಡಿದ್ದರು.ಅಷ್ಟೇ ಅಲ್ಲ ಅವರು ಹಲವು ನಾಗರಿಕರ ಹತ್ಯೆಯನ್ನು ಕೂಡ ಮಾಡಿದ್ದರು. ಹತ್ಯೆಯ ನಂತರ ಅವರಿಗೆ ಪೋಲಿಷ್ ಸೈನಿಕರ ಸಮವಸ್ತ್ರ ತೊಡಿಸಿ ಪೋಲೆಂಡ್ ವಿರುದ್ಧ ಜರ್ಮನಿಯ ನಿಯೋಜಿತ ದಾಳಿಯ ನೆಪವನ್ನಾಗಿಸಲಾಯಿತು. ಅದೇ ವರ್ಷ ಸೋವಿಯತ್ ಒಕ್ಕೂಟವು ಫಿನ್ನಿಷ್ ಗಡಿಯ ಸಮೀಪವಿರುವ ಸೋವಿಯತ್ ಪ್ರದೇಶದ ಮೇಲೆ ಶೆಲ್ಗಳನ್ನು ಹಾರಿಸಿತು ಮತ್ತು ಫಿನ್ಲೆಂಡ್ ಅನ್ನು ದೋಷಿಯನ್ನಾಗಿಸಿತು.
ಇದನ್ನೂ ಓದಿ-13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಗರ್ಭಿಣಿಯರಾಗಿದ್ದ 8 ಬಾಲಕಿಯರು.. ಶಿಕ್ಷಕನಿಗೆ ಜೀವಾವಧಿ ಶಿಕ್ಷೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ