Russia-Ukraine War: ಖೆರ್ಸನ್ ಏರ್‌ಫೀಲ್ಡ್ ಮೇಲೆ ದಾಳಿ, ರಷ್ಯಾದ ಅನೇಕ ಹೆಲಿಕಾಪ್ಟರ್ ನಾಶಪಡಿಸಿದ ಉಕ್ರೇನ್!
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ(Russia-Ukraine War) 21ನೇ ದಿನವಾದ ಬುಧವಾರವೂ ಮುಂದುವರೆದಿದೆ. ರಷ್ಯಾದ ಸೈನಿಕರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಉಕ್ರೇನ್ ಜೊತೆಗಿನ ಯುದ್ಧದ ನಡುವಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಪುಟೀನ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರಷ್ಯಾ ಮೇಲೆ ಅನೇಕ ನಿಷೇಧಗಳನ್ನು ಹೇರಿದೆ.
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ(Russia-Ukraine War) 21ನೇ ದಿನವಾದ ಬುಧವಾರವೂ ಮುಂದುವರೆದಿದೆ. ರಷ್ಯಾದ ಸೈನಿಕರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಉಕ್ರೇನ್ ಜೊತೆಗಿನ ಯುದ್ಧದ ನಡುವಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಪುಟೀನ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರಷ್ಯಾ ಮೇಲೆ ಅನೇಕ ನಿಷೇಧಗಳನ್ನು ಹೇರಿದೆ.
ಖೆರ್ಸನ್ ಏರ್‌ಫೀಲ್ಡ್ ಮೇಲೆ ಉಕ್ರೇನ್ ದಾಳಿ!
ಖೆರ್ಸನ್ ಏರ್‌ಫೀಲ್ಡ್(Kherson Airfield) ಮೇಲೆ ಉಕ್ರೇನ್ ದಾಳಿ ಮಾಡಿದೆ. ಈ ವೇಳೆ ರಷ್ಯಾದ ಅನೇಕ ಹೆಲಿಕಾಪ್ಟರ್(Russian Helicopters)ಗಳನ್ನು ನಾಶಪಡಿಸಿದೆ. ಈ ಹಿಂದೆ ರಷ್ಯಾದ ಸೈನ್ಯವು ಖೆರ್ಸನ್ ಏರ್‌ಫೀಲ್ಡ್(Kharson Airfield)ಅನ್ನು ವಶಪಡಿಸಿಕೊಂಡಿತ್ತು. ಇದೀಗ ರಷ್ಯಾ ಸೇನೆಯ ಮೇಲೆ ಉಕ್ರೇನ್ ಸೇನೆ ಪ್ರತಿದಾಳಿ ನಡೆಸುವ ಮೂಲಕ ಬಿಸಿಮುಟ್ಟಿಸಿದೆ.
ಕೈವ್‌ನಲ್ಲಿ ರಷ್ಯಾದ ಪ್ರಮುಖ ವೈಮಾನಿಕ ದಾಳಿ
ಕೈವ್ ಮೇಲೆ ರಷ್ಯಾದ ದಾಳಿ ಮುಂದುವರಿದಿದ್ದು, ಕೈವ್ ನ ಕಟ್ಟಡವೊಂದರ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಸ್ಫೋಟದ ಹೊಡೆತಕ್ಕೆ ಕಟ್ಟಡಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿದೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳಿಂದ ಯುಎಸ್ ಪತ್ರಕರ್ತ ಬ್ರೆಂಟ್ ರೆನಾಡ್ ಹತ್ಯೆ
ರಷ್ಯಾದ ಸೈನಿಕರಿಂದ ನಾಗರಿಕರಿಗೆ ಸಹಾಯ
ರಷ್ಯಾದ ಸೇನಾ ಪಡೆಗಳು ಖಾರ್ಕಿವ್‌ನಲ್ಲಿ ನಾಗರಿಕರಿಗೆ ಸಹಾಯ ಮಾಡಿದೆ. 90 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಹೇಳಿಕೊಂಡಿದೆ. ರಷ್ಯಾದ ಪಡೆಗಳು ನಾಗರಿಕರಿಗೆ ಸಹಾಯ ಮಾಡುತ್ತಿವೆ ಮತ್ತು ಡೆರ್ಗಾಚೆವ್ಸ್ಕಿ ಜಿಲ್ಲೆಯಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ವರದಿಯಾಗಿದೆ.
ಉಕ್ರೇನ್ ತೊರೆದ 3 ಮಿಲಿಯನ್ ಜನರು
21ನೇ ದಿನವೂ ಉಕ್ರೇನ್-ರಷ್ಯಾ ಯುದ್ಧ(Russia-Ukraine War) ಮುಂದುವರೆದಿದೆ. ರಷ್ಯಾದ ಪಡೆಗಳು ಕೈವ್ ಸೇರಿದಂತೆ ಅನೇಕ ನಗರಗಳ ಅತಿಕ್ರಮಿಸಲು ಹೋರಾಟವನ್ನು ತೀವ್ರಗೊಳಿಸಿವೆ. ಏತನ್ಮಧ್ಯೆ ಇದುವರೆಗೆ 3 ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್‌ನ 10 ನಗರಗಳಲ್ಲಿ ದಾಳಿಯ ಎಚ್ಚರಿಕೆ
ಉಕ್ರೇನ್(Ukraine)ನ 10 ನಗರಗಳಲ್ಲಿ ಪ್ರಮುಖ ದಾಳಿಯ ಎಚ್ಚರಿಕೆ ನೀಡಲಾಗಿದೆ. ಈ ನಗರಗಳಲ್ಲಿ ಚೆರ್ಕಾಸಿ, ಡ್ನಿಪ್ರೊ, ಎಲ್ವಿವ್, ಕೈವ್, ಇವಾನೊ-ಫ್ರಾಂಕಿವ್ಸ್ಕ್, ಒಡೆಸ್ಸಾ ಮತ್ತು ಇನ್ನೂ ಅನೇಕವು ಸೇರಿವೆ. ರಷ್ಯಾದ ದಾಳಿಯ ಹಿನ್ನೆಲೆ ಎಲ್ಲಾ ಪ್ರದೇಶಗಳಲ್ಲಿ ಸೈರನ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ರಷ್ಯಾದ ಸೇನಾಪಡೆ ಈ ಎಲ್ಲಾ ಪ್ರದೇಶಗಳಲ್ಲಿ ಯಾವುದೇ ಸಮಯದಲ್ಲಿ ವಿನಾಶವನ್ನು ಉಂಟುಮಾಡಬಹುದು ಅಂತಾ ಹೇಳಲಾಗುತ್ತಿದೆ.
400 ಜನರನ್ನು ಒತ್ತೆಯಾಳಾಗಿಸಿಕೊಂಡ ರಷ್ಯಾ ಸೈನಿಕರು
ರಷ್ಯಾದ ಸೈನಿಕರು ಮಾರಿಯುಪೋಲ್(Mariupol)ನಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನು ವಶಪಡಿಸಿಕೊಂಡಿದ್ದು, ಸುಮಾರು 400 ಜನರನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ. ವೈದ್ಯರು ಮತ್ತು ರೋಗಿಗಳು ಸೇರಿದಂತೆ 400 ಜನರನ್ನು ಒತ್ತೆಯಾಳುಗಳನ್ನಾಗಿಸಲಾಗಿದೆ. ಹೊರಗೆ ಹೋಗಲು ಯಾರಿಗೂ ಅನುಮತಿ ನೀಡುತ್ತಿಲ್ಲವೆಂದು ಮರಿಯುಪೋಲ್‌ನ ಉಪ ಮೇಯರ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.