Russia's Biggest Missile Attack On Ukraine: ಕ್ರೈಮಿಯಾವನ್ನು ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ದಾಳಿಯ ಬಳಿಕ, ರಷ್ಯಾ ಉಕ್ರೇನ್ ಮೇಲೆ ಇದುವರೆಗಿನ ಅತ್ಯಂತ ಭೀಕರ ದಾಳಿಯನ್ನು ನಡೆಸಿದೆ.  ರಾಜಧಾನಿ ಕೀವ್ ಸೇರಿದಂತೆ ಇಡೀ ದೇಶದ ಹಲವು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ರಷ್ಯಾ ಕನಿಷ್ಠ 75 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉಕ್ರೇನ್ ಹೇಳಿದೆ. ಇದೇ ವೇಳೆ, ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯನ್ನು ಸ್ಫೋಟಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ.

COMMERCIAL BREAK
SCROLL TO CONTINUE READING

ರಷ್ಯಾದ ದಾಳಿಗಳು ಯುಕ್ರೇನ್ ನ ಅನೇಕ ಸ್ಥಳಗಳಲ್ಲಿ ಭಾರೀ ಹಾನಿಯನ್ನುಂಟು ಮಾಡಿವೆ ಎನ್ನಲಾಗಿದೆ. ಕೀವ್ ಹೊರತುಪಡಿಸಿ, ಖ್ಮೆಲ್ನಿಟ್ಸ್ಕಿ, ಝೈಟೊಮಿರ್ ಮತ್ತು ಎಲ್ವಿವ್ ಕೂಡ ರಷ್ಯಾದ ಕೆಂಗಣ್ಣಿಗೆ ಗುರಿಯಾಗಿವೆ. ಸೆಂಟ್ರಲ್ ಕೀವ್ ನಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಕೀವ್ ಮೇಯರ್ ಹೇಳಿದ್ದಾರೆ. ಝೆಲೆನ್ಸ್ಕಿಯ ಕಚೇರಿ ಬಳಿಯೂ ಕ್ಷಿಪಣಿ ಬಿದ್ದಿದೆ. ಕ್ರಿಮಿಯಾ ಸೇತುವೆ ಮೇಲಿನ ದಾಳಿಯನ್ನು ಭಯೋತ್ಪಾದಕ ಘಟನೆ ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ. ಉಕ್ರೇನ್ ಮೇಲೆ ಇಂತಹ ದಾಳಿಯ ನಂತರ ಇದೀಗ ಝೆಲೆನ್ಸ್ಕಿ ಕೂಡ ಅಂಡರ್ ಗ್ರೌಂಡ್ ಆಗಿದ್ದಾರೆ ಎನ್ನಲಾಗಿದೆ. ಈ ದಾಳಿಗಳನ್ನು ಭಯೋತ್ಪಾದಕರ ಸಂಚು ಎಂದು ಅವರು ಕರೆದಿದ್ದಾರೆ.


"ನಾವು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದೇವೆ" ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಹತ್ತಾರು ರಾಕೆಟ್‌ಗಳು ಮತ್ತು ಇರಾನಿನ ಆತ್ಮಹತ್ಯಾ ಡ್ರೋನ್‌ಗಳು ದಾಳಿಗೆ ಗುರಿಯಾಗಿವೆ. ಗರಿಷ್ಠ ಹಾನಿಯಾಗುವ ಉದ್ದೇಶದಿಂದ ಅವರು ಈ ದಾಳಿಯ ಸಮಯವನ್ನು ಆಯ್ಕೆ ಮಾಡಿದ್ದಾರೆ. ವರದಿಗಳ ಪ್ರಕಾರ, ರಷ್ಯಾ ನೇರವಾಗಿ ಝೆಲೆನ್ಸ್ಕಿಯ ಮೇಲೆ ದಾಳಿ ಮಾಡಲು ಬಯಸುತ್ತದೆ. ಇದೇ ಉದ್ದೇಶದಿಂದ ರಷ್ಯಾ  ಸೆಂಟ್ರಲ್ ಕೀವ್ ನಲ್ಲಿರುವ  ಅವರ ಕಚೇರಿಯ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.


ಇದನ್ನೂ ಓದಿ-Video: ಪಾಕ್ ನಲ್ಲಿ ಮಾಲ್‌ ಗೆ ವ್ಯಾಪಿಸಿದ ಭಾರಿ ಬೆಂಕಿ


ದೇಶದ ನಾಗರಿಕರಿಗೆ ಮನವಿ ಮಾಡಿದ ಝೆಲೆನ್ಸ್ಕಿ
ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ದೇಶದ ನಾಗರಿಕರಿಗೆ ಮನವಿ ಮಾಡುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ರಷ್ಯಾ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ, ಆದ್ದರಿಂದ ಮನೆಯೊಳಗೆ ಇರಿ ಎಂದು ಅವರು ಹೇಳಿದ್ದಾರೆ. ಝೆಲೆನ್ಸ್ಕಿ ಅವರ ಕಚೇರಿ ಬಳಿ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ. ರಷ್ಯಾ ಎರಡು ಸ್ಥಳಗಳನ್ನು ಗುರಿಯಾಗಿಸಿಕೊಂಡಿದೆ, ಒಂದು ಇಂಧನ ಸೌಲಭ್ಯ ಮತ್ತು ಇನ್ನೊಂದು ಉಕ್ರೇನ್ ನಾಗರಿಕರು ಎಂದು ಅವರು ಹೇಳಿದ್ದಾರೆ.


ಕಾಕ್‌ಪಿಟ್‌ನಲ್ಲಿ ಬಟ್ಟೆ ಬಿಚ್ಚಿ ಲೈಂಗಿಕ ಕಿರುಕುಳ: ಏರ್‌ಲೈನ್ಸ್ ವಿರುದ್ಧ ಮಹಿಳಾ ಪೈಲಟ್ ದೂರು!


ಸುದ್ದಿ ಸಂಸ್ಥೆ ಎಪಿ ವರದಿಯ ಪ್ರಕಾರ, ಸೆಂಟ್ರಲ್ ಕೀವ್ ಒಂದು ಐತಿಹಾಸಿಕ ನಗರವಾಗಿದೆ ಮತ್ತು ಅಲ್ಲಿ ಅನೇಕ ಸರ್ಕಾರಿ ಕಚೇರಿಗಳಿವೆ. ರಷ್ಯಾ ಅಲ್ಲಿ ದಾಳಿ ನಡೆಸಿದೆ. ಕೀವ್ ನ ರಾಷ್ಟ್ರೀಯ ವಿಶ್ವವಿದ್ಯಾಲಯದ ಬಳಿಯೂ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ದಾಳಿ ನಡೆದಿದೆ. ವರದಿಗಳ ಪ್ರಕಾರ, ದಾಳಿಯ ನಂತರ ಅನೇಕ ಸ್ಥಳಗಳಲ್ಲಿ ಜನರ ಶವಗಳು ರಸ್ತೆಯಲ್ಲಿ ಚಲ್ಲಾಪ್ಲಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಇದಲ್ಲದೇ ಜನರ ಮನೆಗಳ ಗಾಜುಗಳು ಒಡೆದು ವಾಹನಗಳು ಬೆಂಕಿಗಾಹುತಿಯಾಗಿವೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.