ಬಿಗಿಬಟ್ಟೆ ಧರಿಸುವಂತಿಲ್ಲ, ಚುಂಬನ ಮಾಡುವಂತಿಲ್ಲ...! ಸೌದಿ ಪ್ರವಾಸೋದ್ಯಮ ನಿಯಮ
ವಿದೇಶಿ ಪ್ರವಾಸಿಗರಿಗೆ ಮುಕ್ತವಾದ ಒಂದು ದಿನದ ನಂತರ, ಸಾರ್ವಜನಿಕ ಸಭ್ಯತೆಯ ಉಲ್ಲಂಘನೆಗೆ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ.
ನವದೆಹಲಿ: ವಿದೇಶಿ ಪ್ರವಾಸಿಗರಿಗೆ ಮುಕ್ತವಾದ ಒಂದು ದಿನದ ನಂತರ, ಸಾರ್ವಜನಿಕ ಸಭ್ಯತೆಯ ಉಲ್ಲಂಘನೆಗೆ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ.
ಈಗ ಆಂತರಿಕ-ಸಚಿವಾಲಯವು 19 ಅಪರಾಧಗಳನ್ನು ಗುರುತಿಸಿದೆ, ಆದರೆ ಇದುವರೆಗೆ ಇನ್ನು ದಂಡವನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ ಎನ್ನಲಾಗಿದೆ. ಅತಿ ಸಾಂಪ್ರಾದಾಯಿಕ ಇಸ್ಲಾಮಿಕ್ ದೇಶವಾಗಿರುವ ಸೌದಿ, ಈಗ ತನ್ನ ತೈಲ-ಅವಲಂಬಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಭಾಗವಾಗಿ ಪ್ರವಾಸಿ ವೀಸಾಗಳನ್ನು ಮೊದಲ ಬಾರಿಗೆ ನೀಡಲು ಪ್ರಾರಂಭಿಸಿದೆ.
ನೂತನ ಪ್ರವಾಸೋದ್ಯಮದ ನಿಯಮದನ್ವಯ ಪುರುಷರು ಮತ್ತು ಮಹಿಳೆಯರು ಸಾಧಾರಣವಾಗಿ ಉಡುಪು ಧರಿಸಬೇಕು, ಅವರು ಸಾರ್ವಜನಿಕವಾಗಿ ಪ್ರದರ್ಶಿಸುವ ಅಸಭ್ಯತೆ ಗೆ ತಡೆ ಇರುತ್ತದೆ, ಮಹಿಳೆಯರು ಸಾಧಾರಣ ಉಡುಪುಗಳನ್ನು ಆಯ್ಕೆ ಮಾಡಲು ಮುಕ್ತರಾಗಿದ್ದಾರೆ' ಎಂದು ಹೇಳಿಕೆ ತಿಳಿಸಿದೆ. ಈ ನಿಯಮಗಳನ್ನು ರಾಜ್ಯದ ಸಂದರ್ಶಕರು ಮತ್ತು ಪ್ರವಾಸಿಗರು ಸಾರ್ವಜನಿಕ ನಡವಳಿಕೆಗೆ ಸಂಬಂಧಿಸಿದ ಕಾನೂನಿನ ಬಗ್ಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 49 ದೇಶಗಳ ನಾಗರಿಕರು ಆನ್‌ಲೈನ್ ಇ-ವೀಸಾ ಅಥವಾ ಆಗಮನದ ವೀಸಾಗಳಿಗೆ ಅರ್ಹರಾಗಿದ್ದಾರೆ ಎಂದು ಸೌದಿ ಅರೇಬಿಯಾ ಶುಕ್ರವಾರ ತಿಳಿಸಿದೆ.
ತೈಲ ನಂತರದ ಯುಗಕ್ಕೆ ಅತಿದೊಡ್ಡ ಅರಬ್ ಆರ್ಥಿಕತೆಯನ್ನು ಸಿದ್ಧಪಡಿಸುವ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿಷನ್ 2030 ಸುಧಾರಣಾ ಕಾರ್ಯಕ್ರಮದ ಪ್ರವಾಸೋದ್ಯಮವು ಒಂದು ಎನ್ನಲಾಗಿದೆ. ಪುರುಷರು ಮತ್ತು ಮಹಿಳೆಯರು ಬಿಗಿಯಾದ ಬಟ್ಟೆ ಅಥವಾ ಅಪವಿತ್ರ ಭಾಷೆ ಅಥವಾ ಚಿತ್ರಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಎಂದು ಪ್ರವಾಸೋದ್ಯಮ ಪ್ರಾಧಿಕಾರವು ಪ್ರಾರಂಭಿಸಿದ ಇಂಗ್ಲಿಷ್ ಭಾಷೆಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಮಹಿಳೆಯರು ಸಾರ್ವಜನಿಕವಾಗಿ ಭುಜ ಮತ್ತು ಮೊಣಕಾಲುಗಳನ್ನು ಮುಚ್ಚಬೇಕು ಎಂದು ಅದು ಹೇಳಿದೆ.