ನವದೆಹಲಿ: ಕರೋನಾ ವೈರಸ್ ಹಿನ್ನೆಲೆ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳ ಮಧ್ಯೆ ಹೊಸ ಮತ್ತು ಬೆಚ್ಚಿಬೀಳಿಸುವ ಸಂಶೋಧನೆಯೊಂದು ಹೊರಹೊಮ್ಮಿದೆ. ಕರೋನಾ ವೈರಸ್ ಕಿವಿಗೆ ಮಾತ್ರವಲ್ಲದೆ ಹಿಂಭಾಗದಲ್ಲಿರುವ ಮೂಳೆಗೂ ಸೋಂಕು ಪಸರಿಸುತ್ತದೆ ಎಂದು ಈ ಸಂಶೋಧನೆ ಬಹಿರಂಗಪಡಿಸಿದೆ. ಕರೋನಾ ವೈರಸ್ ಮೂಗು, ಗಂಟಲು ಮತ್ತು ಶ್ವಾಸಕೋಶಕ್ಕೆ ಸೋಂಕು ಪಸರಿಸುತ್ತದೆ ಎಂದು ಈ ಹಿಂದೆಯೇ ತಿಳಿದಿದೆ.


COMMERCIAL BREAK
SCROLL TO CONTINUE READING

ವೈದ್ಯಕೀಯ ಜರ್ನಲ್ JAMA Otolaryngology ನಲ್ಲಿ ಪ್ರಕಟವಾದ ಈ ಅಧ್ಯಯನವು ಕರೋನಾ ವೈರಸ್ ಸೋಂಕಿನಿಂದ ಮೃತಪಟ್ಟ ಮೂರು ರೋಗಿಗಳನ್ನು ಉಲ್ಲೇಖಿಸುತ್ತದೆ. ಈ ಮೂವರಲ್ಲಿ ಒಬ್ಬರು 60 ವರ್ಷ ಮತ್ತು ಇನ್ನೊಬ್ಬರು 80 ವರ್ಷ ವಯಸ್ಸಿನವರು. ಈ ಎರಡೂ ರೋಗಿಗಳ ಕಿವಿಗಳ ಹಿಂದಿನ ಮೂಳೆಯಲ್ಲಿ ಕರೋನಾ ಸೋಂಕು ಕಂಡುಬಂದಿದೆ. ಈ ಸಂಶೋಧನೆಯ ನಂತರ, ಜಾನ್ ಹಾಪ್ಕಿನ್ಸ್ ಸ್ಕೂಲ್ ಆಫ್ ಮೆಡಿಸಿನ್ ಕರೋನಾ ವೈರಸ್ ರೋಗಲಕ್ಷಣಗಳನ್ನು ಹೊಂದಿರುವ ಜನರ ಕಿವಿಗಳನ್ನು ಸಹ ಪರೀಕ್ಷಿಸಬೇಕು ಎಂದು ಹೇಳಿದೆ.


80 ವರ್ಷದ ರೋಗಿಯು ತನ್ನ ಬಲ ಕಿವಿಯ ಮಧ್ಯದಲ್ಲಿ ಮಾತ್ರ ವೈರಸ್ ಹೊಂದಿದ್ದರೆ, 60 ವರ್ಷದ ವ್ಯಕ್ತಿಯ ಎಡ ಮತ್ತು ಬಲ ಮಾಸ್ಟಾಯ್ಡ್ ಮತ್ತು ಎಡ ಮತ್ತು ಬಲ ಮಧ್ಯ ಕಿವಿಯಲ್ಲಿ ವೈರಸ್ ಇತ್ತು. ಕರೋನಾ ವೈರಸ್ ಸೋಂಕು ಕಿವಿಗೆ ಬರುವುದು ಇದೇ ಮೊದಲಲ್ಲ. ಆದರೂ, ಕೆಲವು ರೋಗಿಗಳಲ್ಲಿ, ಸೋಂಕಿನ ನಂತರ ಅವರ ಶ್ರವಣ ಶಕ್ತಿ ಕುಂಠಿತಗೊಂಡಿರುವುದು ಕಂಡುಬಂದಿದೆ.  ಮಧ್ಯ ಕಿವಿ ಪ್ರಕ್ರಿಯೆಗೆ ಒಳಗಾಗುವ ಮೊದಲು ಜನರು ಕಿವಿಯಲ್ಲಿ ಕರೋನಾ ವೈರಸ್ ತಪಾಸಣೆಗೆ ಒಳಗಾಗಬೇಕೆಂದು ಹೊಸ ಅಧ್ಯಯನ ತಂಡ ಶಿಫಾರಸು ಮಾಡಿದೆ.


ಶೀಘ್ರದಲ್ಲಿಯೇ ಕೊರೊನಾ ವೈರಸ್ ಗೆ ಲಸಿಕೆಯನ್ನು ಕಂಡು ಹಿಡಿಯುವ ಉದ್ದೇಶದಿಂದ ವಿಶ್ವದ ದೈತ್ಯ ಕಂಪನಿಗಳು, ಹೆಸರಾಂತ ಶಾಲೆಗಳು ಮತ್ತು ಮಿಲಿಟರಿ ಸಂಸ್ಥೆಗಳು ಭಾರಿ ಕಸರತ್ತು ನಡೆಸುತ್ತಿವೆ. ಇವುಗಳಲ್ಲಿ ಎಂಟು ಲಸಿಕೆಗಳಿವೆ, ವೈರಸ್ ಅನ್ನು ವಿಭಿನ್ನವಾಗಿ ಆಕ್ರಮಿಸುತ್ತವೆ. ಈ ಸಂಸ್ಥೆಗಳು ದುರ್ಬಲ ಅಥವಾ ನಿಷ್ಕ್ರಿಯ ವೈರಸ್, ಡಿಎನ್‌ಎ ಅಥವಾ ಆರ್‌ಎನ್‌ಎ ವಿಧಾನದ ಮೂಲಕ ಲಸಿಕೆಗಳನ್ನು ತಯಾರಿಸುತ್ತಿವೆ, ಆದರೆ ದೇಹದಲ್ಲಿನ ಕರೋನಾವನ್ನು ನಾಶಮಾಡುವ ಸಾಮರ್ಥ್ಯವನ್ನು ಸೃಷ್ಟಿಸುವುದು ಅವುಗಳ ಉದ್ದೇಶವಾಗಿದೆ.