ಸಿಂಗಾಪುರ್: ಸಿಂಗಾಪುರದ ವಿಜ್ಞಾನಿಗಳು ನೂತನ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದು, ಪ್ರಯೋಗಾಲಯದಲ್ಲಿ ಕೋವಿಡ್ -19 ಪರೀಕ್ಷೆಯ ಫಲಿತಾಂಶ ಕೇವಲ 36 ನಿಮಿಷಗಳಲ್ಲಿ ಬರಲಿದೆ. ಪ್ರಸ್ತುತ ಟೆಸ್ಟ್ ವ್ಯವಸ್ಥೆಗೆ ಹೆಚ್ಚು ತರಬೇತಿ ಪಡೆದ ತಾಂತ್ರಿಕ ಸಿಬ್ಬಂದಿ ಅಗತ್ಯವಿರುತ್ತದೆ ಮತ್ತು ಫಲಿತಾಂಶಗಳು ಹಲವಾರು ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತವೆ.


COMMERCIAL BREAK
SCROLL TO CONTINUE READING

ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿಯ (ಎನ್‌ಟಿಸಿ) ಲಿ ಕಾಂಗ್ ಚಿಯೆನ್ ಸ್ಕೂಲ್ ಆಫ್ ಮೆಡಿಸಿನ್‌ನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ನೂತನ ತಂತ್ರಜ್ಞಾನವು "ಕೋವಿಡ್ -19 ರ ಪ್ರಯೋಗಾಲಯ ಪರೀಕ್ಷೆಯಲ್ಲಿ ಬೇಕಾಗುವ ಸಮಯ ಮತ್ತು ವೆಚ್ಚವನ್ನು ಸುಧಾರಿಸುವ ಮಾರ್ಗಗಳನ್ನು" ಸೂಚಿಸುತ್ತದೆ ಎನ್ನಲಾಗಿದೆ.


ಹೊಸ ತಂತ್ರಜ್ಞಾನದಿಂದ ಕೇವಲ 36 ಗಂಟೆಗಳಲ್ಲಿ ಬರಲಿದೆ ಕೊರೊನಾ ಟೆಸ್ಟ್ ರಿಪೋರ್ಟ್
ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ವಿಶ್ವವಿದ್ಯಾಲಯ,  ಪೋರ್ಟಬಲ್ ಸಾಧನಗಳೊಂದಿಗೆ ಮಾಡಬಹುದಾದ ಈ ಪರೀಕ್ಷೆಯನ್ನು ಸಮುದಾಯದಲ್ಲಿ 'ಸ್ಕ್ರೀನಿಂಗ್ ಸಾಧನ'ವಾಗಿ ನಿಯೋಜಿಸಬಹುದು ಎಂದಿದೆ. ಹೊಸ ತಂತ್ರಜ್ಞಾನದೊಂದಿಗೆ, ಕೋವಿಡ್ -19 ರ ಪ್ರಯೋಗಾಲಯ ತನಿಖೆಯ ವರದಿ 36 ನಿಮಿಷಗಳಲ್ಲಿ ಬರಲಿದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.


ಪ್ರಸ್ತುತ, COVID-19 ಅನ್ನು ಪರೀಕ್ಷಿಸುವ ಅತ್ಯಂತ ಸೂಕ್ಷ್ಮ ವಿಧಾನವೆಂದರೆ 'ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್)' ಎಂಬ ಪ್ರಯೋಗಾಲಯ ತಂತ್ರ, ಇದರಲ್ಲಿ ಯಂತ್ರವು ಪದೇ ಪದೇ ವೈರಲ್ ಆನುವಂಶಿಕ ಕಣಗಳನ್ನು ನಕಲಿಸುತ್ತದೆ ಮತ್ತು ತನಿಖೆ ಮಾಡುತ್ತದೆ. ಇದರಿಂದ SARS-COV-2 ವೈರಸ್‌ನ ಯಾವುದೇ ರೋಗಲಕ್ಷಣಗಳನ್ನು ಕಂಡುಹಿಡಿಯಬಹುದು.


RNA ಟೆಸ್ಟ್ ನಲ್ಲಿ ಸಮಯಾವಕಾಶಬೇಕು 
ಆರ್‌ಎನ್‌ಎ ಪರೀಕ್ಷೆಗೆ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಇದರಲ್ಲಿ ರೋಗಿಯ ಮಾದರಿಯಲ್ಲಿನ ಇತರ ಘಟಕಗಳಿಂದ ಆರ್‌ಎನ್‌ಎ ಪ್ರತ್ಯೇಕಿಸಲ್ಪಡುತ್ತದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಿರುವ ರಾಸಾಯನಿಕಗಳ ಪೂರೈಕೆ ಜಗತ್ತಿನಲ್ಲಿ ತುಂಬಾ ಕಡಿಮೆ ಎನ್ನಲಾಗಿದೆ.


NTU LCKmedison ಅಭಿವೃದ್ಧಿಪಡಿಸಿದ ಹೊಸ ತಂತ್ರಜ್ಞಾನವು ಹಲವಾರು ಹಂತಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಅಲ್ಲದೆ, ರೋಗಿಯ ಮಾದರಿಯನ್ನು ನೇರವಾಗಿ ಪರೀಕ್ಷಿಸುತ್ತದೆ. ಇದು ಫಲಿತಾಂಶಗಳ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಆರ್‌ಎನ್‌ಎ ಶುದ್ಧೀಕರಣ ರಾಸಾಯನಿಕಗಳ ಅಗತ್ಯತೆಯನ್ನು ತೊಡೆದುಹಾಕುತ್ತದೆ. 


ಈ ಹೊಸ ತಂತ್ರದ ಬಗ್ಗೆ ವಿವರವಾದ ಮಾಹಿತಿಯನ್ನು 'ಜೀನ್ಸ್' ಎಂಬ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.