ಇನ್ಮುಂದೆ ಮುಪ್ಪು ನಿಮ್ಮ ಹತ್ತಿರಕ್ಕೆ ಸುಳಿಯುವದಿಲ್ಲವಂತೆ? ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನದ ಆವಿಷ್ಕಾರ...!
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್‌ಡಿಯಾಗೊ (ಯುಸಿಎಸ್‌ಡಿ) ಯ ವಿಜ್ಞಾನಿಗಳು ಯೀಸ್ಟ್ ಮೇಲೆ `ಏಜಿಂಗ್`ನ ಪರಿಣಾಮವನ್ನು ತಿಳಿದುಕೊಳ್ಳಲು ಅಧ್ಯಯನವೊಂದನ್ನು ನಡೆಸಿದ್ದಾರೆ.
ನವದೆಹಲಿ: ಸಾಮಾನ್ಯವಾಗಿ ವಯಸ್ಕರಾಗುವುದು ಅಥವಾ ಮುಪ್ಪನ್ನು ಯಾರು ಬಯಸುವುದಿಲ್ಲ. ಮನುಷ್ಯನ ಜೀವನದ ಅತ್ಯಂತ ನಿರಾಶಾದಾಯಕ ಸ್ಥಿತಿ ಎಂದರೆ ಅದು ಮುಪ್ಪಿನ ವಯಸ್ಸು. ವಯಸ್ಸು ತನ್ನ ಜೊತೆಗೆ ಕಾಣಿಸಿಕೊಳ್ಳುವ ಶಾರೀರಿಕ ಬದಲಾವಣೆಗಳನ್ನು ಕೂಡ ತರುತ್ತದೆ. ಮೂಳೆಗಳು ದುರ್ಬಲಗೊಳ್ಳುತ್ತವೆ. ಚರ್ಮ ಸುಕ್ಕುಗಟ್ಟುತ್ತದೆ. ದೃಷ್ಟಿ ಬಲಹೀನವಾಗುತ್ತದೆ ಹಾಗೂ ಸಮಯಕ್ಕೆ ತಕ್ಕಂತೆ ಸ್ಮರಣ ಶಕ್ತಿ ಕೂಡ ಕುಂಠಿತಗೊಳ್ಳುತ್ತದೆ. ಆದರೆ, ವೈಜ್ಞಾನಿಕರು ಮುಪ್ಪಾಗುವಿಕೆಯಿಂದ ಪಾರಾಗಲು ಪರಿಹಾರ ಕಂಡುಕೊಂಡಿದ್ದಾರೆ ಎಂಬಂತೆ ತೋರುತ್ತಿದೆ.
ಯೀಸ್ಟ್ ಇಫೆಕ್ಟ್
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್‌ಡಿಯಾಗೊ (ಯುಸಿಎಸ್‌ಡಿ) ಯ ವಿಜ್ಞಾನಿಗಳು ಯೀಸ್ಟ್ ಮೇಲೆ 'ಏಜಿಂಗ್'ನ ಪರಿಣಾಮವನ್ನು ತಿಳಿದುಕೊಳ್ಳಲು ಅಧ್ಯಯನವೊಂದನ್ನು ನಡೆಸಿದ್ದಾರೆ. ಯೀಸ್ಟ್ ಕೋಶಗಳಲ್ಲಿ ಬದಲಾವಣೆಗಳನ್ನು ಸುಲಭವಾಗಿ ಮಾಡಬಹುದು. ವಿಭಿನ್ನ ಕೋಶಗಳು ವಿಭಿನ್ನ ದರಗಳಲ್ಲಿ ಮುಪ್ಪಾಗುತ್ತವೇಯೇ ಹಾಗೂ ಅವೆಲ್ಲವೂ ಒಂದೇ ಗುರಿಯನ್ನು ಹೊಂದಿರುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಈ ಅಧ್ಯಯನ ನಡೆಸಿದ್ದಾರೆ.
ಆದರೆ, ಇದು ನಿಜವಲ್ಲ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಒಂದೇ ಪರಿಸರದಲ್ಲಿ ಬೆಳೆಯುವ ಬಹುತೇಕ ಒಂದೇ ರೀತಿಯ ಆನುವಂಶಿಕ ವಸ್ತುಗಳ ಜೀವಕೋಶಗಳು ವಿಭಿನ್ನ ರೀತಿಯಲ್ಲಿ ಮುಪ್ಪಾಗುತ್ತವೆ ಎಂಬುದನ್ನು ಎಂಬುದನ್ನು ಅವರು ಕಂಡುಕೊಂಡಿದ್ದಾರೆ.
ಪರೀಕ್ಷಿಸಿದ ಯೀಸ್ಟ್ ಕೋಶಗಳಲ್ಲಿ ಅರ್ಧದಷ್ಟು ಕೋಶಗಳು ಬೇಗ ಮುಪ್ಪಾಗಿವೆ ಹಾಗೂ ಅವುಗಳ ನ್ಯೂಕ್ಲಿಯಸ್ ಸುತ್ತ ಇರುವ 'ನೂಕ್ಲಿಯೋಲಸ್ ನಾಶವಾಗಲು ಪ್ರಾರಂಭಿಸಿತ್ತು. ಕಂಪ್ಯೂಟರ್ ಮಾಡೆಲಿಂಗ್ ಮತ್ತು ಇತರ ಸಂಕೀರ್ಣ ತಂತ್ರಗಳನ್ನು ಬಳಸಿ ವಿಜ್ಞಾನಿಗಳು ಈ ಅಸಾಮಾನ್ಯ ತೀರ್ಮಾನಕ್ಕೆ ಬಂದಿದ್ದಾರೆ.
ಇನ್ನೊಂದೆಡೆ ಮೈಟೊಕಾಂಡ್ರಿಯವು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಉಳಿದ ಅರ್ಧದಷ್ಟು ಕೋಶಗಳು ಮುಪ್ಪಾಗಿವೆ. ಜೀವಕೋಶದ ಈ ಅಂಗವು ಶಕ್ತಿಯನ್ನು ಉತ್ಪಾದಿಸುತ್ತದೆ. ಜೀವಕೋಶಗಳು ಸಾಯಲು 2 ಮಾರ್ಗಗಳಿವೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ - ನ್ಯೂಕ್ಲಿಯರ್ ಅಥವಾ ಮೈಟೊಕಾಂಡ್ರಿಯ.
ಈ ಕುರಿತು ಮಾಹಿತಿ ನೀಡಿರುವ ಈ ಅಧ್ಯಯನದ ಹಿರಿಯ ಲೇಖಕ ನ್ಯಾನ್ ಹಾವೊ ಸಿಎನ್‌ಎನ್, 'ನಾವು ಏಜಿಂಗ್ ರೂಟ್ ನ ಮಾಲಿಕ್ಯುಲರ್ ಪ್ರೋಸೆಸ್ ಹಾಗೂ ಅವುಗಳ ನಡುವಿನ ಸಂಪರ್ಕಗಳನ್ನು ಪತ್ತೆಹಚ್ಚಿದ್ದೇವೆ. ಅಷ್ಟೇ ಅಲ್ಲ ವಯಸ್ಸಾದ ಕೋಶಗಳನ್ನು ನಿಯಂತ್ರಿಸುವ ಮಾಲಿಕ್ಯೂಲರ್ ಸರ್ಕಿಟ್ ಗಳನ್ನೂ ಕೂಡ ಕಂಡುಕೊಂಡಿದ್ದೇವೆ' ಎಂದು ಹೇಳಿದ್ದಾರೆ.
ದೊಡ್ಡ ಸಾಧನೆ
ವಿಜ್ಞಾನಿಗಳು 'ಏಜಿಂಗ್ ಲ್ಯಾಂಡ್ ಸ್ಕೇಪ್'ವನ್ನು ಸ್ಥಾಪಿಸುವ ಮೂಲಕ ವಯಸ್ಸಾದ ಪ್ರಕ್ರಿಯೆಯನ್ನು ಕುಶಲತೆಯಿಂದ ನಿರ್ವಹಿಸುವ ಮೂಲಕ ಇಡೀ ಪ್ರಕ್ರಿಯೆಯನ್ನೇ ಬದಲಾಯಿಸಿದ್ದಾರೆ. ಜೀವಕೋಶಗಳ ಡಿಎನ್‌ಎಗಳನ್ನು ಬದಲಾಯಿಸುವ ಮೂಲಕ ಈ ಯಶಸ್ಸನ್ನು ಸಾಧಿಸಲಾಗಿದೆ.
ಈ ಅಧ್ಯಯನದಿಂದ, ವಿಜ್ಞಾನಿಗಳು ಜೀವಕೋಶಗಳ ಜೀವಿತಾವಧಿಯನ್ನು ಹೆಚ್ಚಿಸುವ 'ಅನನ್ಯ ಏಜಿಂಗ್ ರೂಟ್ ಅನ್ನು ರಚಿಸಲು ಸಾಧ್ಯವಾಗಲಿದೆ. ಈ ಬದಲಾವಣೆಗಳನ್ನು ಮಾಡುವ ಮೂಲಕ ವಯಸ್ಸಾಗುವಿಕೆಯ ಪ್ರಕ್ರಿಯೆನ್ನು ವಿಳಂಬಗೊಲಿಸಬಹುದಾಗಿದೆ ಎನ್ನಲಾಗಿದೆ.
ವೈದ್ಯಕೀಯ ಕ್ಷೇತ್ರದ ಉನ್ನತ ಸಾಧನೆ
ಆದರೆ, ಪ್ರಸ್ತುತ, ಈ ಪರೀಕ್ಷೆಯನ್ನು ಯೀಸ್ಟ್ ಕೋಶಗಳ ಮೇಲೆ ಮಾಡಲಾಗಿದೆ. ಇದನ್ನು ಮಾನವರ ಮೇಲೆ ಪರೀಕ್ಷಿಸುವ ಮೊದಲು, ವಿಜ್ಞಾನಿಗಳು ಹೆಚ್ಚು ಸಂಕೀರ್ಣ ಕೋಶಗಳ ಮೇಲೆ ಈ ಪರೀಕ್ಷೆಗಳನ್ನು ಮಾಡಲು ಬಯಸಿದ್ದಾರೆ. ನಂತರ, ಕೆಲವು ಜೀವಿಗಳ ಮೇಲೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿದ್ದಾರೆ.