ಹೊರ ಬಿತ್ತು ಘನಘೋರ ಸತ್ಯ.! ಚೀನಾ ತಯಾರಿಸುತ್ತಿತ್ತು ಕರೋನಾ ವೈರಸ್ ಜೆನೆಟಿಕ್ ಅಸ್ತ್ರ.!
ಚೀನಾ ಅಧಿಕಾರಿಗಳ ಪತ್ರ ಈಗ ಅಮೆರಿಕದ ಕೈಗೆ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ಚೀನಾ ಕರೋನಾ ಜೆನೆಟಿಕ್ ಅಸ್ತ್ರ ತಯಾರಿಸುತ್ತಿದೆ.ಚೀನಾ ಮೂರನೇ ವಿಶ್ವ ಯುದ್ಧಕ್ಕೆ ತಯಾರಿ ನಡೆಸುತ್ತಿತ್ತು.
ಬೀಜಿಂಗ್ : 2015 ರಲ್ಲಿ ಚೀನಾ ವಿಜ್ಞಾನಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಬರೆದಿರುವ ಒಂದು ಪತ್ರ ಇದೀಗ ಬಹಿರಂಗವಾಗಿದೆ. ಕರೋನಾ ವೈರಸ್ ನ್ನು (Coronavirus) ಬಳಸಿ ಅದನ್ನು ಜೆನೆಟಿಕ್ ಅಸ್ತ್ರದ ರೂಪದಲ್ಲಿ ಬಳಸುವ ಬಗ್ಗೆ ಆ ಪತ್ರದಲ್ಲಿ ಚರ್ಚಿಸಲಾಗಿದೆ. 2015ರಲ್ಲೇ ಚೀನಾದಲ್ಲಿ (China) ಕರೋನಾ ಜೆನೆಟಿಕ್ ಅಸ್ತ್ರದ (Genetic Weapon) ಬಗ್ಗೆ ಚರ್ಚೆ ನಡೆಸಿರುವುದು, ಚೀನಾದ ವುಹಾನ್ ಲ್ಯಾಬ್ ನಲ್ಲೇ ಕರೋನಾ (Corona) ಸೃಷ್ಟಿಯಾಗಿದೆ ಎಂಬ ಆರೋಪ ಕೇಳಿ ಬಂದಿರುವುದು, ಒಂದಕ್ಕೊಂದು ತಾಳೆಯಾಗುತ್ತಿದ್ದು, ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದೆ
ಮೂರನೇ ವಿಶ್ವಯುದ್ಧಕ್ಕೆ ಚೀನಾ ತಯಾರಿ..?
ಚೀನಾ (China) ಅಧಿಕಾರಿಗಳ ಈ ಪತ್ರ ಈಗ ಅಮೆರಿಕದ (America) ಕೈಗೆ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ಚೀನಾ ಕರೋನಾ ಜೆನೆಟಿಕ್ ಅಸ್ತ್ರ (Genetic Weapon) ತಯಾರಿಸುತ್ತಿದೆ.ಚೀನಾ ಮೂರನೇ ವಿಶ್ವ ಯುದ್ಧಕ್ಕೆ (3rd world war) ತಯಾರಿ ನಡೆಸುತ್ತಿತ್ತು. ಅದರಲ್ಲಿ ಕರೋನಾ ವೈರಸ್ ಜೈವಿಕ ಮತ್ತು ಜೆನೆಟಿಕ್ ಅಸ್ತ್ರ ತಯಾರಿಸಿ ಪ್ರಯೋಗಿಸುವ ಸಿದ್ದತೆ ನಡೆಸುತ್ತಿತ್ತು ಎಂದು ಪತ್ರದ ಆಧಾರ ಮೇಲೆ ಅಮೆರಿಕ (America) ಹೇಳಿದೆ. ಸಿಕ್ರೇಟ್ ಕೋವಿಡ್ ಡಾಕ್ಯುಮೆಂಟ್ (Secret Covid Document) ಎಂದು ಹೇಳಲಾಗಿರುವ ಈ ಪತ್ರದಲ್ಲಿ 'ಇದು ನಮ್ಮ ಗೆಲುವಿನ ಪ್ರಮುಖ ಅಸ್ತ್ರವಾಗಿದೆ' ಎಂದು ಹೇಳಲಾಗಿದೆ.
ಇದನ್ನೂ ಓದಿ : Viral Video:Covid-19ನಿಂದ ಭಾರತದ ರಕ್ಷಣೆಗಾಗಿ 'ಓಂ ನಮಃ ಶಿವಾಯ್' ಮಂತ್ರ ಹೇಳಿದ Israel ಜನರು
ಕರೋನಾ ವೈವಿಕಾಸ್ತ್ರಕ್ಕೆ 5 ವರ್ಷದಿಂದಲೇ ತಯಾರಿ :
ಚೀನಾ 2015 ರಿಂದಲೇ ಕರೋನಾ ಜೈವಿಕಾಸ್ತ್ರ ಸೇನಾ ಮಟ್ಟದಲ್ಲಿ ಬಳಸುವ ತಯಾರಿ ನಡೆಸುತ್ತಿತ್ತು ಎಂದು ಅಸ್ಟ್ರೇಲಿಯಾದ Weekend Australian ಎಂಬ ಪತ್ರಿಕೆ ವರದಿ ಮಾಡಿದೆ. ಮೂರನೇ ವಿಶ್ವ ಯುದ್ದ ಜೈವಿಕ ಅಸ್ತ್ರದ (Biological Weapons) ಮೂಲಕ ನಡೆಯಲಿದೆ ಎಂದು ಚೀನಾ ಡ್ಯಾಕುಮೆಂಟ್ ಹೇಳಿದೆ. ಕರೋನಾ ವೈರಸ್ ಬಳಸಿ ಹೇಗೆ ಅಸ್ತ್ರವನ್ನು ರೂಪಿಸಬೇಕು ಮತ್ತು ಅದನ್ನು ಹೇಗೆ ಬಳಸಬೇಕು ಎಂಬ ಚರ್ಚೆ ಆ ರಹಸ್ಯ ಪತ್ರದಲ್ಲಿ ನಡೆದಿದೆ.
ಇದನ್ನೂ ಓದಿ : ಭಾರತ ಜಸ್ಟ್ ಮಿಸ್..! ಪ್ರಳಯ ಸದೃಶ್ಯ ಆ ಚೀನಾ ರಾಕೇಟ್ ಅಪ್ಪಳಿಸಿದ್ದೆಲ್ಲಿ ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.