ಇಂದಿನ ತಂತ್ರಜ್ಞಾನ ನಮ್ಮ ಅನೇಕ ಕೆಲಸಗಳನ್ನು ಬಹಳಷ್ಟು ಸುಲಭವಾಗಿಸಿದೆ. ಆದರೆ ಅದು ಯುವ ಪೀಳಿಗೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬುದನ್ನು ನಾವು ಗಮನಿಸುವುದು ಅತ್ಯಗತ್ಯವಾಗಿದೆ.


COMMERCIAL BREAK
SCROLL TO CONTINUE READING

ಈ ದಿನಗಳಲ್ಲಿ ಅಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಇದು ನ್ಯೂಜೆರ್ಸಿಯ ವೈರಲ್ ವೀಡಿಯೊ. ವಾಸ್ತವವಾಗಿ,  ಒಂದು ಮಗು ತನ್ನ ಗಣಿತ ಹೋಮ್ವರ್ಕ್ ಪೂರ್ಣಗೊಳಿಸಲು ಅಲೆಕ್ಸಾ(Alexa) ಸಾಧನದಲ್ಲಿ ಚೀಟ್ ಮಾಡುತ್ತಿದ್ದದ್ದು ಕಂಡು ಬಂದಿದೆ.


ಅಲೆಕ್ಸಾ ಎಂಬುದು ಒಂದು ಸ್ಮಾರ್ಟ್ ಸ್ಪೀಕರ್. ಇದು ಆಜ್ಞೆಯನ್ನು ಸ್ವೀಕರಿಸಿ ಕಾರ್ಯನಿರ್ವಹಿಸುತ್ತದೆ. 6 ವರ್ಷ ವಯಸ್ಸಿನ ಜೆರಿಯಲ್ ಅಲೆಕ್ಸಾವನ್ನು ಹೇಗೆ ಕೇಳುತ್ತಾನೆ ಎಂಬುದನ್ನು ಈ ವೀಡಿಯೊ ಸ್ಪಷ್ಟವಾಗಿ ಕಾಣಬಹುದು: '5 ರಲ್ಲಿ 3 ಹೋದರೆ ಎಷ್ಟು ಉಳಿದಿದೆ'. ಅಲೆಕ್ಸಾ ತಕ್ಷಣವೇ  2 ಎಂದು ಪ್ರತಿಕ್ರಿಯಿಸುತ್ತದೆ. ಅದೇ ಸಮಯದಲ್ಲಿ, ಜೆರಿಯಲ್ನ ತಾಯಿ ಯೆರ್ಲಿನ್, ಕ್ಯಾಮೆರಾದಲ್ಲಿ ಜೆರಿಯಾಲ್ನ ಸಂಪೂರ್ಣ ಚಲನೆಯನ್ನು ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.



ನ್ಯೂಯಾರ್ಕ್ ಪೋಸ್ಟ್ನ ಸುದ್ದಿ ಪ್ರಕಾರ, ಯೆರ್ಲಿನ್ ತನ್ನ 6 ವರ್ಷದ ಮಗ ಜೆರ್ರಿ ಪ್ರತಿದಿನ ಅದೇ ರೀತಿ ಹೋಮ್ವರ್ಕ್ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೆ ಅವರ ಮಗ ಕೇವಲ ಅಲೆಕ್ಸಾ ಸಹಾಯದಿಂದಷ್ಟೇ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾನೆ ಎಂಬುದನ್ನು ಕಂಡುಹಿಡಿದಿದ್ದಾರೆ.


ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊ ಚರ್ಚೆಯ ವಿಷಯವಾಗಿ ಉಳಿದಿದೆ. ಈ ವೈರಲ್ ವೀಡಿಯೋವನ್ನು 1.3 ಮಿಲಿಯನ್ಗಿಂತಲೂ ಹೆಚ್ಚು ರಿಟ್ವೀಟ್ ಮಾಡಲಾಗಿದೆ, 8 ಮಿಲಿಯನ್ಗಿಂತ ಹೆಚ್ಚು ವೀಕ್ಷಿಸಲಾಗಿದೆ. ಟ್ವಿಟ್ಟರ್ನಲ್ಲಿ ವೀಡಿಯೊ 4.7 ಮಿಲಿಯನ್ ಲೈಕ್ ಪಡೆದಿದೆ.