ಬೃಹತ್ ಡ್ಯಾಂ ಒಡೆದು 7 ಮಂದಿ ಸಾವು, 200ಕ್ಕೂ ಹೆಚ್ಚು ಮಂದಿ ನಾಪತ್ತೆ
ಕಣ್ಮರೆಯಾಗಿರುವ 200ಕ್ಕೂ ಹೆಚ್ಚು ಜನರನ್ನು ಹುಡುಕುವ ಕಾರ್ಯದಲ್ಲಿ ರಕ್ಷಣಾ ತಂಡ ನಿರತವಾಗಿದೆ.
ಬ್ರೆಜಿಲ್: ಪ್ರವಾಹಕ್ಕೆ ಬೃಹತ್ ಅಣೆಕಟ್ಟೆಯೊಂದು ಒಡೆದ ಪರಿಣಾಮ ಉಂಟಾದ ಪ್ರವಾಹದಲ್ಲಿ 7 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿರುವ ಘಟನೆ ಬೆಲೋ ಹಾರಿಜಾಂಟೆಯಲ್ಲಿ ನಡೆದಿದೆ.
ವೈಲ್ ಎಸ್ಎ ಒಡೆತನದ ಕಬ್ಬಿಣದ ಅದಿರಿನ ಗಣಿ ಬಳಿ ಶುಕ್ರವಾರ ಅಣೆಕಟ್ಟು ಒಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದ 7 ಜನರ ಮೃತದೇಹಗಳು ಪತ್ತೆಯಾಗಿವೆ ಎಂದು ಬ್ರಮಾಡಿನ್ಹೋ ಪಟ್ಟಣದ ಮಹಾಪೌರ ಅವಿಮಾರ್ ಡಿ ಮೆಲೊ ಬರ್ಸೆಲೋಸ್ ತಿಳಿಸಿದ್ದಾರೆ.
ಈ ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಿಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಣ್ಮರೆಯಾಗಿರುವ 200ಕ್ಕೂ ಹೆಚ್ಚು ಜನರನ್ನು ಹುಡುಕುವ ಕಾರ್ಯದಲ್ಲಿ ರಕ್ಷಣಾ ತಂಡ ನಿರತವಾಗಿದೆ ಎನ್ನಲಾಗಿದೆ.