ಪೇಷಾವರ್: ಬಾಲಿವುಡ್ ಸೂಪರ್ ಸ್ಟಾರ್  ಶಾರುಖ್ ಖಾನ್ ಅವರ ಸೋದರ ಸಂಬಂಧಿಯೊಬ್ಬರು  ಜುಲೈ 25ರಂದು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಪೇಶಾವರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು  ಮಾಧ್ಯಮವೊಂದರ ವರದಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಶಾರುಖ್ ಖಾನ್ ರ ಸಂಬಂಧಿ ನೂರ್ ಜೆಹಾನ್ ಅವರು ಖೈಬರ್-ಪಖ್ತುನ್ಖ್ವಾ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.ಜಹಾನ್ ಮತ್ತು ಅವರ ಕುಟುಂಬವು ಖ್ಯಾತ ಖಿಸ್ಸಾ ಖ್ವಾನಿ ಬಜಾರ ಪಕ್ಕದಲ್ಲಿರುವ ಶಾ ವಾಲಿ ಖತಲ್ ಪ್ರದೇಶದಲ್ಲಿ ನೆಲೆಸಿದೆ. ಶಾರೂಖ್ ತಂದೆಯ ಸೋದರಸಂಬಂಧಿ ಜೆಹಾನ್ ಎರಡು ಬಾರಿ ಶಾರುಖ್ ಖಾನ್ ರನ್ನು  ಭೇಟಿ  ಮಾಡಿದ್ದಾರೆ ಅಲ್ಲದೆ ಖಾನ್  ಸಂಬಂಧಿಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.


ಅವಾಮಿ ನ್ಯಾಷನಲ್ ಪಾರ್ಟಿ (ಎಎನ್ಪಿ) ಮಹಿಳಾ ಮೀಸಲಾತಿ ಸ್ಥಾನಕ್ಕೆ ಜೆಹನ್ ಎಂದು ಪರಿಗಣಿಸಿತ್ತು, ಆದರೆ ದುರದೃಷ್ಟವಶಾತ್ ಅವರು ಅದನ್ನು ಖೈಬರ್-ಪಖ್ತುನ್ಖ್ವಾ ಅಸೆಂಬ್ಲಿಗೆ ಪರಿಗಣಿಸಲಿಲ್ಲ ಎಂದು ತಿಳಿಸಿದರು.