ಅಬುದಾಭಿ: ಯುಎಇಯ ಬಹುಕಾಲದ ವಾಸ್ತವಿಕ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಅಧ್ಯಕ್ಷರಾಗಿ ಶನಿವಾರ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಯುಎಇ ಮಾಜಿ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಶುಕ್ರವಾರ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾಗಿದ್ದರು.   


COMMERCIAL BREAK
SCROLL TO CONTINUE READING

ಶೇಖ್ ಖಲೀಫಾರ ಮರಣದ ಒಂದು ದಿನದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ನ ಆಡಳಿತಗಾರರು ರಾಷ್ಟ್ರದ ಅಧ್ಯಕ್ಷರನ್ನಾಗಿ ಶೇಖ್ ಮೊಹಮ್ಮದ್‍ರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಅಬುಧಾಬಿಯ ಅಲ್ ಮುಶ್ರಿಫ್ ಪ್ಯಾಲೇಸ್‌ನಲ್ಲಿ ನಡೆದ ವಿಶೇಷ ಸಭೆಯಲ್ಲಿ ದೇಶದ 7 ಶೇಖ್‌ಡಮ್‌ಗಳ ಆಡಳಿತಗಾರರು ಈ ನಿರ್ಧಾರ ಕೈಗೊಂಡಿದ್ದಾರೆ.


ಇದನ್ನೂ ಓದಿ: UAE President Died : ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಇನ್ನಿಲ್ಲ!


ಶೇಖ್ ಮೊಹಮ್ಮದ್ ಅವರು ಫೆಡರಲ್ ಸುಪ್ರೀಂ ಕೌನ್ಸಿಲ್‌ನಿಂದ ಚುನಾಯಿತರಾದರು. ಸದ್ಯ 1971ರಲ್ಲಿ ಅವರ ತಂದೆ ಸ್ಥಾಪಿಸಿದ ತೈಲ ಸಮೃದ್ಧ ದೇಶದ ಆಡಳಿತಗಾರರಾಗಿ ಆಯ್ಕೆುಯಾಗಿದ್ದಾರೆ.


ಮತದಾನದ ನಂತರ ಟ್ವೀಟ್ ಮಾಡಿರುವ ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ‘ನಾವು ಶೇಖ್ ಮೊಹಮ್ಮದ್‍ರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅವರೊಂದಿಗೆ ನಿಷ್ಠಾವಂತರಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡುತ್ತೇವೆ. ನಮ್ಮ ಜನರು ಅವರಿಗೆ ನಿಷ್ಠೆಯಿಂದ ಇರುವುದಾಗಿ ಪ್ರತಿಜ್ಞೆ ಮಾಡುತ್ತಾರೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: "ಭಾರತಕ್ಕೆ ಪಲಾಯನ ಮಾಡಿದ ರಾಜಪಕ್ಸೆ": ವರದಿಗಳ ಬಗ್ಗೆ ಹೈಕಮಿಷನ್‌ ಹೇಳಿದ್ದೇನು?


ಶೇಖ್ ಖಲೀಫಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾದ ಬಳಿಕ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. 1948ರಲ್ಲಿ ಜನಿಸಿದ ಶೇಖ್ ಖಲೀಫಾ ಯುಎಇಯ 2ನೇ ಅಧ್ಯಕ್ಷ ಮತ್ತು ಅಬುಧಾಬಿ ಎಮಿರೇಟ್‌ನ 16ನೇ ಆಡಳಿತಗಾರರಾಗಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.