ನವದೆಹಲಿ: ಕಾಕ್‌ಪಿಟ್‌ನಲ್ಲಿ ಅಸಭ್ಯ ವರ್ತನೆ ತೋರಿದ ಮಾಜಿ ಸಹೋದ್ಯೋಗಿ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಏರ್‌ಲೈನ್ಸ್ ವಿರುದ್ಧ ಮಹಿಳಾ ಪೈಲಟ್ ಪ್ರಕರಣ ದಾಖಲಿಸಿದ್ದಾರೆ. ವರದಿಯ ಪ್ರಕಾರ, ಏರ್‌ಲೈನ್‌ನ ಪುರುಷ ಕ್ಯಾಪ್ಟನ್ ವಿಮಾನದ ಕಾಕ್‌ಪಿಟ್‌ನೊಳಗೆ ಮಹಿಳಾ ಪೈಲಟ್‍ಗೆ ಲೈಂಗಿಕ ಕಿರಿಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.


COMMERCIAL BREAK
SCROLL TO CONTINUE READING

ಮಹಿಳಾ ಪೈಲಟ್ ಕ್ರಿಸ್ಟಿನ್ ಜಾನ್ನಿಂಗ್ ಅವರು ತಮ್ಮ ಸಹ-ಪೈಲಟ್ ಮೈಕೆಲ್ ಹಾಕ್ ನಡವಳಿಕೆ ವಿರುದ್ಧ ಕಂಪನಿ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI)ಗೆ ದೂರು ನೀಡಿದ್ದರು. ದುರ್ನಡತೆ ತೋರಿದ ತನ್ನ ಮಾಜಿ ಸಹೋದ್ಯೋಗಿ ಹಾಕ್ ವಿರುದ್ಧ ಏರ್‌ಲೈನ್ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಆರೋಪಿಸಿದ ಕ್ರಿಸ್ಟಿನ್ ಈ ಬಗ್ಗೆ ಪ್ರಕರಣ ದಾಖಲಿಸಿದ್ದಳು.


ಇದನ್ನೂ ಓದಿ: ಕ್ರೈಮಿಯಾದ ಪ್ರಮುಖ ಸೇತುವೆಯ ಮೇಲೆ ಟ್ರಕ್ ಬಾಂಬ್ ಸ್ಫೋಟ!


ಕಾಕ್‌ಪಿಟ್‌ನಲ್ಲಿ ಅಶ್ಲೀಲ ಕೃತ್ಯ


ಈ ಘಟನೆಯು ಆಗಸ್ಟ್ 2020ರಲ್ಲಿ ಫಿಲಡೆಲ್ಫಿಯಾ (PHL)ದಿಂದ ಫ್ಲೋರಿಡಾ (MCO)ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ನಡೆದಿತ್ತು. ಕ್ರಿಸ್ಟಿನ್ ಜಾನ್ನಿಂಗ್ ಆರೋಪದ ಪ್ರಕಾರ, ‘ಇದುವೇ ನನ್ನ ಅಂತಿಮ ಹಾರಾಟ, ನಾನು ನಿವೃತ್ತಿಯಾಗುತ್ತಿದ್ದೇನೆ. ಹೀಗಾಗಿ ನಾನು ಏನೂ ಮಾಡಿದರೂ ನಡೆಯುತ್ತೆ ಅಂತಾ ಹಾಕ್ ನನಗೆ ಹೇಳಿದ್ದ. ಬಳಿಕ ಆತ ನನ್ನ ಮುಂದೆಯೇ ಕಾಕ್‍ಪಿಟ್‍ನಲ್ಲಿಯೇ ಅಶ್ಲೀಲ ಕೃತ್ಯವೆಸಗಿದ್ದ.


ಕಾಕ್‌ಪಿಟ್‌ನ ಬಾಗಿಲಿಗೆ ಬೀಗ ಹಾಕಿದ ಹಾಕ್ ತನ್ನ ಎಲ್ಲಾ ಬಟ್ಟೆ ಬಿಚ್ಚಿ ನನ್ನ ಮುಂದೆಯೇ ವಿವಸ್ತ್ರನಾಗಿದ್ದ. ಬಳಿಕ ಫೋಟೋ ಮತ್ತು ವಿಡಿಯೋ ಮಾಡುತ್ತಾ ತನ್ನ ಲ್ಯಾಪ್‌ಟಾಪ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಲು ಪ್ರಾರಂಭಿಸಿದ. ಇದರಿಂದ ನನಗೆ ಏನೂ ಮಾಡಬೇಕೆಂದು ದಿಕ್ಕೇ ತೋಚಲಿಲ್ಲವೆಂದು ಜಾನ್ನಿಂಗ್ ಆರೋಪಿಸಿದ್ದಳು.   


ಇದನ್ನೂ ಓದಿ: Hindu Temple Attack: ಬಾಂಗ್ಲಾದೇಶದಲ್ಲಿ ಕಾಳಿ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು!


ವಿಚಾರಣೆಯಲ್ಲಿ ತಪ್ಪು ಒಪ್ಪಿಕೊಂಡ ಆರೋಪಿ


ಘಟನೆಯ 3 ತಿಂಗಳ ನಂತರ ಹಾಕ್‍ನ ದುರ್ನಡೆತ ವಿರುದ್ಧ ಎಫ್‌ಬಿಐಗೆ ಜಾನ್ನಿಂಗ್ ದೂರು ನಿಡಿದ್ದರು. ವಿಚಾರಣೆಯ ಬಳಿಕ ಮೇ 2021ರಲ್ಲಿ ತನ್ನ ದುಷ್ಕೃತ್ಯದ ಬಗ್ಗೆ ಹ್ಯಾಕ್ ತಪ್ಪೊಪ್ಪಿಕೊಂಡಿದ್ದ. ಬಳಿಕ ಅಮೆರಿಕದ ನ್ಯಾಯಾಲಯವು ಹಾಕ್‌ಗೆ 1 ವರ್ಷದ ಜೈಲುಶಿಕ್ಷೆ ಮತ್ತು 5 ಸಾವಿರ ಅಮೆರಿಕನ್ ಡಾಲರ್ ದಂಡವನ್ನು ವಿಧಿಸಿ ಆದೇಶಿಸಿತ್ತು.


ಏರ್ಲೈನ್ಸ್ ಪ್ರತಿಕ್ರಿಯೆ


ಜಾನ್ನಿಂಗ್ ಹೇಳುವ ಪ್ರಕಾರ, ತನಗೆ ಲೈಂಗಿಕ ಕಿರುಕುಳ ನೀಡಿದ ಹಾಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಏರ್‌ಲೈನ್‌ನ ಮ್ಯಾನೇಜ್‌ಮೆಂಟ್‌ಗೆ ದೂರು ನೀಡಲಾಗಿತ್ತು.ಆದರೆ ಕ್ಯಾಪ್ಟನ್ ನಿವೃತ್ತರಾದ ಕಾರಣ ತಾನು ಈ ಬಗ್ಗೆ ತನಿಖೆ ಕೈಗೊಳ್ಳಲು ಸಾಧ್ಯವಿಲ್ಲವೆಂದು ಏರ್‌ಲೈನ್‌ ಕಂಪನಿ ಜಾನ್ನಿಂಗ್‍ಗೆ ತಿಳಿಸಿತ್ತು. ಇದರಿಂದ ಬೇಸರಗೊಂಡ ಆಕೆ ಬಳಿಕ ಎಫ್‌ಬಿಐಗೆ ಹೋಗಿ ತನ್ನ ಏರ್‍ಲೈನ್ ಕಂಪನಿ ಮತ್ತು ಮಾಜಿ ಸಹೋದ್ಯೋಗಿ ವಿರುದ್ಧ ಪ್ರಕರಣ ದಾಖಲಿಸಿದ್ದಳು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.