SHOCKING News: ಸೇತುವೆ ಕುಸಿದು ನದಿಗೆ ಉರುಳಿಬಿದ್ದ ರೈಲು..!
Train Derails into River: ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ.
ನವದೆಹಲಿ: ಅಮೆರಿಕದ ಕೊಲಂಬಸ್‌ನಲ್ಲಿ ಸೇತುವೆ ಕುಸಿದ ಪರಿಣಾಮ ಗೂಡ್ಸ್ ರೈಲೊಂದು ನದಿಗೆ ಉರುಳಿಬಿದ್ದಿರುವ ಘಟನೆ ನಡೆದಿದೆ. ನದಿಯ ಮೇಲಿನ ಸೇತುವೆ ಇದ್ದಕ್ಕಿದ್ದಂತೆಯೇ ಕುಸಿದ ಪರಿಣಾಮ ಈ ರೈಲು ನದಿಗೆ ಬಿದ್ದಿದೆ.
ಗೂಡ್ಸ್ ರೈಲಿನಲ್ಲಿ ಬಿಸಿ ಡಾಂಬರು ಮತ್ತು ಗಂಧಕದಂತಹ ಅಪಾಯಕಾರಿ ಪದಾರ್ಥಗಳಿದ್ದವು ಎಂದು ವರದಿಯಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಮೊಂಟಾನಾ ರೈಲ್ ಲಿಂಕ್ ವಕ್ತಾರ ಆಂಡಿ ಗಾರ್ಲ್ಯಾಂಡ್, ‘ಬಿಸಿ ಡಾಂಬರು, ಕರಗಿದ ಗಂಧಕವನ್ನು ಹೊತ್ತ ರೈಲು ನದಿಗೆ ಬಿದ್ದಿದೆ. ಹೀಗಾಗಿ ನದಿ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ. ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಿ 20 ಅಧ್ಯಕ್ಷತೆಯಲ್ಲಿ ಭಾರತ ಅದ್ಭುತ ಕೆಲಸ ಮಾಡುತ್ತಿದೆ: ಯುಕೆ ಸಚಿವರ ಶ್ಲಾಘನೆ
ಸೇತುವೆ ಕುಸಿತದಿಂದ ರಾಜ್ಯದ ಜನರಿಗೆ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಫೈಬರ್ ಆಪ್ಟಿಕ್ ಕೇಬಲ್ ಅನ್ನು ಸಹ ತೆಗೆದುಹಾಕಲಾಗಿದೆ ಎಂದು ಹೈಸ್ಪೀಡ್ ಪ್ರೊವೈಡರ್ ಗ್ಲೋಬಲ್ ನೆಟ್ ಹೇಳಿದೆ. ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ.
ರೈಲು ಹಳಿತಪ್ಪಿ ಘಟನೆ ಸಂಭವಿಸಿದೆ: ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮೊಂಟಾನಾದಲ್ಲಿ ರೈಲು ಹಳಿತಪ್ಪಿದ ಕಾರಣ ಯೆಲ್ಲೊಸ್ಟೋನ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕುಸಿದಿದೆ. ಯೆಲ್ಲೊಸ್ಟೋನ್ ಕೌಂಟಿ ಡಿಸಾಸ್ಟರ್ ಮತ್ತು ಎಮರ್ಜೆನ್ಸಿ ಸೇವೆಗಳ ಪ್ರಕಾರ, ರೈಲು ಹಳಿತಪ್ಪಿದ ಘಟನೆ ಬೆಳಗ್ಗೆ 6 ಗಂಟೆ ವೇಳೆಗೆ ಸಂಭವಿಸಿದೆ. ರೈಲಿನ ಬಹುತೇಕ ಟ್ಯಾಂಕರ್‍ಗಳು ಹಾನಿಗೊಳಗಾಗಿವೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಸೋರಿಕೆಯಾಗುತ್ತಿವೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಲ್ಲೊಸ್ಟೋನ್ ನದಿಯ ರೈಲು ಸೇತುವೆಯ ಸುತ್ತಲಿನ ಪ್ರದೇಶಗಳಿಂದ ದೂರವಿರುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಸ್ಥಳೀಯ ಮೀನುಗಾರಿಕೆ ಪ್ರವೇಶಗಳನ್ನು ಮುಚ್ಚಲಾಗುವುದು. ನೀರು ಸಂಸ್ಕರಣಾ ಘಟಕಗಳು, ನೀರಾವರಿ ಜಿಲ್ಲೆಗಳು ಮತ್ತು ಕೈಗಾರಿಕಾ ಕಂಪನಿಗಳು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಯೆಲ್ಲೊಸ್ಟೋನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.