ಲಾಂಗ್‌ ಬೀಚ್‌ : ದಕ್ಷಿಣ ಕ್ಯಾಲಿಫೋರ್ನಿಯದ ಔದ್ಯಮಿಕ ತಾಣವೊಂದರಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮವಾಗಿ ಇಬ್ಬರು ಮೃತಪಟ್ಟು ಇತರ ಹಲವರು ಗುಂಡೇಟಿನಿಂದಾಗಿ ಗಾಯಗೊಂಡಿದ್ದಾರೆಂದು ಲಾಂಗ್‌ ಬೀಚ್‌ ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆ ಶನಿವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2.25ರ ಸಮಯದಲ್ಲಿ ನಡೆಯಿತೆಂದು ತಿಳಿಸಿರುವ ಪೊಲೀಸರು ಸದ್ಯಕ್ಕೆ ಯಾವುದೇ ಹೆಚ್ಚಿನ ಮಾಹಿತಿಗಳನ್ನು ನೀಡಿಲ್ಲ.


ಶೂಟರ್‌ ಹಾರಿಸಿದ ಗುಂಡಿಗೆ ಬಹಳಷ್ಟು ಮಂಡಿ ಗಾಯಗೊಂಡಿದ್ದಾರೆ. ಆದರೆ ಅವರ ಸಂಖ್ಯೆ ಮತ್ತು ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 


ಗುರುತು ಸಿಗದ ಕಟ್ಟಡದಿಂದ ಜನರು  ಹೊರಗಡೆ ಓಡಿ ಬರುತ್ತಿರುವ ಜನರು ಒಳಗೆ ಶೂಟಿಂಗ್‌ ನಡೆಯುತ್ತಿರುವುದಾಗಿ ಕೂಗಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. 


ಎರಡು ಮಹಡಿಗಳ ಈ ಕಟ್ಟಡದಲ್ಲಿ ಹಲವು ಕಾನೂನು ಸೇವಾ ಕಚೇರಿಗಳಿವೆ; ಆದರೆ ಇಲ್ಲಿ ಯಾವ ರೀತಿಯ ವ್ಯಾಪಾರ-ವಹಿವಾಟು ನಡೆಯುತ್ತಿದೆ ಎಂಬುದನ್ನು ಪೊಲೀಸರು ತಿಳಿಸಿಲ್ಲ. 


12ಕ್ಕೂ ಅಧಿಕ ಪೊಲೀಸ್‌ ಅಧಿಕಾರಿಗಳು, SWAT ತಂಡದ ಸದಸ್ಯರೊಡಗೂಡಿ ಪೂರ್ಣ ಕಟ್ಟಡವನ್ನು ಸುತ್ತುವರಿದಿದ್ದಾರೆ. ಆದರೆ ಶೂಟಿಂಗ್‌ ಘಟನೆ ಈಗ ಮುಗಿದು ಹೋಗಿದೆ ಎಂದವರು ತಿಳಿಸಿದ್ದಾರೆ.


ಲಾಸ್‌ ಏಂಜಲ್ಸ್‌ನಿಂದ ಸುಮಾರು 20 ಮೈಲು ದಕ್ಷಿಣಕ್ಕಿರುವ ಲಾಂಗ್‌ ಬೀಚ್‌ ಪಟ್ಟಣವು ಸುಮಾರು 4,60,000 ಜನಸಂಖ್ಯೆಯನ್ನು ಹೊಂದಿದೆ. ಇದು ಲಾಸ್‌ ಏಂಜಲ್ಸ್‌ ಕೌಂಟಿಯ ದಕ್ಷಿಣ ತುದಿಯಲ್ಲಿದೆ.