ನವದೆಹಲಿ: Sleepy Hollow Village:ನಿದ್ರೆ ಅನೇಕ ಜನರ ದೌರ್ಬಲ್ಯ. ನಿದ್ರೆ ಬಂದಾಗ, ಒಬ್ಬ ವ್ಯಕ್ತಿಯು ಎಲ್ಲವನ್ನೂ ಬಿಟ್ಟು ಮಲಗಲು ಪ್ರಾರಂಭಿಸುತ್ತಾನೆ. ಯಾವುದೇ ವ್ಯಕ್ತಿಯು ತನ್ನ ನಿದ್ರೆ ಪೂರ್ಣಗೊಳ್ಳುವವರೆಗೆ ಮಲಗಲು ಬಯಸುತ್ತಾನೆ. ಪ್ರತಿಯೊಬ್ಬರಿಗೂ ನಿದ್ರೆ ಮಾಡಲು ವಿಭಿನ್ನ ಸಮಯವಿದೆ. ಕೆಲವರು ಎರಡು-ನಾಲ್ಕು ಗಂಟೆಗಳ ಕಾಲ ನಿದ್ರೆ ಮಾಡುತ್ತಾರೆ, ಮತ್ತೆ ಕೆಲವರು ಏಳು ರಿಂದ ಎಂಟು ಗಂಟೆಗಳ ಕಾಲ ಮಲಗುತ್ತಾರೆ. ಆದರೆ ಜನರು ನಡೆಯುವಾಗ ನಡುರಸ್ತೆಯಲ್ಲಿ ಮಲಗುವುದನ್ನು ನೀವು ಎಂದಾದರೂ ಊಹಿಸಿದ್ದೀರಾ?


COMMERCIAL BREAK
SCROLL TO CONTINUE READING

ಮಲಗುವ ನಿಘೂಢ ಕಾಯಿಲೆ
ಕಜಕಿಸ್ಥಾನ್ ನಲ್ಲಿರುವ ಹಳ್ಳಿಯೊಂದರ ಜನರು ನಡೆಯುವಾಗಲೇ  ನಡುರಸ್ತೆಯಲ್ಲಿ ನಿದ್ರೆಗೆ ಜಾರುತ್ತಾರಂತೆ. ಅಷ್ಟೇ ಅಲ್ಲ ಒಮ್ಮೆ ನಿದ್ರೆಗೆ ಜಾರಿದ ನಂತರ ಈ ಜನರು ಅನೇಕ ದಿನಗಳವರೆಗೆ ನಿದ್ರಿಸುತ್ತಾರೆ. ಕಲಾಚಿ ಹೆಸರಿನ ಈ  ಗ್ರಾಮದಲ್ಲಿ ಜನರು ಸಾಕಷ್ಟು ನಿದ್ರೆ ಮಾಡುತ್ತಾರೆ. ವಾಸ್ತವವಾಗಿ, ಈ ಹಳ್ಳಿಯ ಜನರುನಿಘೂಢ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಜನರು ಒಮ್ಮೆ ಮಲಗಿದ ನಂತರ ತಿಂಗಳುಗಟ್ಟಲೆ ಮಲಗುತ್ತಾರೆ. ಹಲವಾರು ದಿನಗಳವರೆಗೆ ನಿದ್ರಿಸಿದ ಮೊದಲ ಪ್ರಕರಣ 2010 ರಲ್ಲಿ ಬೆಳಕಿಗೆ ಬಂದಿತು. ಕೆಲವು ಮಕ್ಕಳು ಇದ್ದಕ್ಕಿದ್ದಂತೆ ಇಲ್ಲಿ ಶಾಲೆಯಲ್ಲಿ ಬಿದ್ದು ಅಲ್ಲಿ ಮಲಗಲು ಪ್ರಾರಂಭಿಸಿದರು. ನಂತರ, ಈ ಹಳ್ಳಿಯಲ್ಲಿ, ಈ ನಿಘೂಢ ಕಾಯಿಲೆಯ ತುತ್ತಾದ  ಪ್ರಕರಣಗಳು ಒಂದರ ನಂತರ ಮತ್ತೊಂದು ಕಾಣಿಸಿಕೊಳ್ಳಲು ಆರಂಭಿಸಿದವು. 


ಇದನ್ನು ಓದಿ-Coronavirus ಬಳಿಕ ಈ ರಾಜ್ಯದಲ್ಲಿ ಹರಡಿರುವ ನಿಗೂಢ ಕಾಯಿಲೆಗೆ 2 ಬಲಿ


ಗ್ರಾಮಕ್ಕೆ ತಗುಲಿದ 'ಸ್ಲೀಪಿ ಹಾಲೋ' ಹೆಸರು
ಈ ಹಳ್ಳಿಯಲ್ಲಿರುವ ಈ ನಿಘೂಡ  ನಿದ್ರೆಯ ಕಾಯಿಲೆಯ ಬಗ್ಗೆ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ, ಆದರೆ ಇದುವರೆಗೂ ಕೂಡ ವಿಜ್ಞಾನಿಗಳಿಗೆ ಅದು ಕಗ್ಗಂಟಾಗಿಯೇ ಉಳಿದಿದೆ.  ಅನೇಕ ವೈದ್ಯರು ಮತ್ತು ವಿಜ್ಞಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಆದರೆ ಈ ರೋಗದ ಬಗ್ಗೆ ಏನನ್ನು ಕಂಡುಹಿಡಿಯಲು ಅವರಿಂದ ಸಾಧ್ಯವಾಗುತ್ತಿಲ್ಲ. ಇಲ್ಲಿನ ಜನರು ಇಷ್ಟು ದಿನ ಹೇಗೆ ನಿದ್ರಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ಅವರು ಆಶ್ಚರ್ಯಪಡುತ್ತಾರೆ. ಈ ಗ್ರಾಮವನ್ನು ಈಗ 'ಸ್ಲೀಪಿ ಹಾಲೊ' ಎಂದು ಕರೆಯಲಾಗುತ್ತಿದೆ.


ಇದನ್ನು ಓದಿ-Andhra Pradeshaದಲ್ಲಿ ಹರಡಿದ ನಿಗೂಢ ಕಾಯಿಲೆ, ಓರ್ವ ಬಲಿ, 292 ಜನರ ಸ್ಥಿತಿ ನಾಜೂಕು


ಶೇ.14 ರಷ್ಟು ಜನರು ಇಂದು ಈ ನಿಘೂಡ ಕಾಯಿಲೆಗೆ ತುತ್ತಾಗಿದ್ದಾರೆ 
ಪ್ರಸ್ತುತ ಗ್ರಾಮದಲ್ಲಿ ಈ ನಿಘೂಡ ಕಾಯಿಲೆಯಿಂದ (Mysterious Disease) ಬಳಲುತ್ತಿರುವವರ ಸಂಖ್ಯೆ 600ಕ್ಕೆ ತಲುಪಿದೆ. ಅಂದರೆ, ಗ್ರಾಮದ ಶೇ.14 ರಷ್ಟು ಜನರು ಈ ನಿಗೂಢ ಕಾಯಿಲೆಗೆ ತುತ್ತಾಗಿದ್ದಾರೆ. ಇಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈ ಕಾಯಿಲೆ ಇರುವವರಿಗೆ ಅವರು ನಿದ್ರೆಗೆ ಜಾರಿದ್ದಾರೆ ಎಂಬುದೂ ಕೂಡ   ತಿಳಿದಿರುವುದಿಲ್ಲ. ಈ ಗ್ರಾಮದ ಶಾಲೆಗಳಲ್ಲಿ, ಪೊದೆಗಳಲ್ಲಿ, ಮಾರುಕಟ್ಟೆಯಲ್ಲಿ ಹಾಗೂ ನಡುರಸ್ತೆಯಲ್ಲಿ ಮಲಗಿರುವ ಜನರನ್ನು ನೀವು ನೋಡಬಹುದು. ಅದರ ನಂತರ ಅವರು ಹಲವಾರು ದಿನಗಳವರೆಗೆ ನಿದ್ರಿಸುತ್ತಾರೆ. ಈ ಗ್ರಾಮದ ಪಕ್ಕದಲ್ಲಿ ಒಂದು ಕಾಲದಲ್ಲಿ ಯುರೇನಿಯಂ ಗಣಿಗಾರಿಕೆ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ಈ ಗಣಿಯಿಂದ ವಿಷಕಾರಿ ವಿಕಿರಣಗಳು ಹೊರಸೂಸುತ್ತಿದ್ದವು ಎನ್ನಲಾಗುತ್ತದೆ. ಈ ವಿಕಿರಣಗಳು ಆಹಾರದ ಮೂಲಕ ಜನರ ದೇಹ ಪ್ರವೆಶಿಸಿರುವುದೇ ಈ ನಿಘೂಢ ಕಾಯಿಲೆಗೆ ಕಾರಣ ಎನ್ನಲಾಗುತ್ತದೆ. ಆದರೆ, ಪ್ರಸ್ತುತ ಈ ಗ್ರಾಮದಲ್ಲಿ ರೇಡಿಯೇಶನ್ ನ ಯಾವುದೇ ಅಂಶ ಇಲ್ಲ ಎಂಬುದು ಇಲ್ಲಿ ಗಮನಾರ್ಹ.