Spain President To Skip G-20 For Covid Positive : ಸ್ಪೇನ್‌ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್‌ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದ್ದು, ಈ ಹಿನ್ನೆಲೆ ಭಾರತದಲ್ಲಿ ನಡೆಯಲಿರುವ G-20 ಶೃಂಗಸಭೆಗೆ ನವದೆಹಲಿಗೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು  ಸ್ಪೇನ್‌ ಅಧ್ಯಕ್ಷ X ನಲ್ಲಿ (ಹಿಂದೆ ಟ್ವಿಟರ್) ಹಂಚಿಕೊಂಡಿದ್ದಾರೆ.‌ "ಈ ಮಧ್ಯಾಹ್ನ ನಾನು COVID ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ ಮತ್ತು G20 ಶೃಂಗಸಭೆಗಾಗಿ ನವದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ನಾನು ಚೆನ್ನಾಗಿರುತ್ತೇನೆ. " ಜಿ 20 ಶೃಂಗಸಭೆಯಲ್ಲಿ ಸ್ಪೇನ್ಅನ್ನು ಮೊದಲ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೊ ಮತ್ತು ಆರ್ಥಿಕ ವ್ಯವಹಾರಗಳ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳು, ಇಯು ಮತ್ತು ಸಹಕಾರ ಸಚಿವರು ಪ್ರತಿನಿಧಿಸುತ್ತಾರೆ ಎಂದು ತಿಳಿಸಿದ್ದಾರೆ.


ಜಿ 20 ಗೆ ಆಫ್ರಿಕನ್ ಯುನಿಯನ್ ಗೆ ಎಂಟ್ರಿ..! ಶೀಘ್ರದಲ್ಲೇ ಗ್ರೂಪ್ ಗೆ ಮರುನಾಮಕರಣ


COMMERCIAL BREAK
SCROLL TO CONTINUE READING

ನವದೆಹಲಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತ್ ಮಂಟಪಂ ಕನ್ವೆನ್ಷನ್ ಸೆಂಟರ್‌ನಲ್ಲಿ G20 ನಾಯಕರ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಇದಾಗಿದೆ. ಈ ಸಭೆಯಲ್ಲಿ ಅನೇಕ ಜಾಗತಿಕ ನಾಯಕರು ಮತ್ತು ಪ್ರತಿನಿಧಿಗಳ ಭಾಗಿಯಾಗಲಿದ್ದಾರೆ.


 ಜಿ20ಗೆ ಸಂಬಂಧಿಸಿದ ಸುಮಾರು 200 ಸಭೆಗಳನ್ನು ದೇಶಾದ್ಯಂತ 60 ನಗರಗಳಲ್ಲಿ ಆಯೋಜಿಸಲಾಗಿದೆ. 18ನೇ ಜಿ20 ಶೃಂಗಸಭೆಯು ಭಾರತದ ಮೃದು ಶಕ್ತಿ ಮತ್ತು ಆಧುನಿಕ ಮುಖ ಎರಡನ್ನೂ ಪ್ರದರ್ಶಿಸುವ ಮೂಲ ಉದ್ದೇಶವನ್ನು ಈ ಶೃಂಗಸಭೆ ಹೊಂದಿದ್ದು, ವ್ಯಾಪಕ ಸಿದ್ಧತೆ ಮತ್ತು ವ್ಯವಸ್ಥೆಗಳನ್ನು ಮಾಡಲಾಗಿದೆ. ಮುಂದಿನ 2024ರ ಜಿ-20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ ವಹಿಸಿಕೊಳ್ಳಲಿದ್ದು, 2025ರ ಅಧ್ಯಕ್ಷ ಸ್ಥಾನವನ್ನು ದಕ್ಷಿಣ ಆಫ್ರಿಕಾ ವಹಿಸಿಕೊಳ್ಳಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.