ಯಾವುದೇ ರೀತಿಯ Lockdown ಇಲ್ಲದೆ Coronavirus ವಿರುದ್ಧ ಹೋರಾಟ ಗೆದ್ದ ಜಪಾನ್
ಕರೋನಾ ವೈರಸ್‌ನಿಂದ ಒಂದೆಡೆ ಇಡೀ ಜಗತ್ತೇ ಪರದಾಡುತ್ತಿದ್ದಾರೆ, ಇನ್ನೊಂದೆಡೆ ಜಪಾನ್ ಮಾತ್ರ ಕೊರೊನಾ ವಿರುದ್ಧದ ಈ ಯುದ್ಧವನ್ನು ಬಹಳ ಸುಲಭವಾಗಿ ಗೆಲ್ಲುವ ಹಾದಿಯಲ್ಲಿದೆ.
ನವದೆಹಲಿ: ಕರೋನಾ ವೈರಸ್‌ನಿಂದ ಒಂದೆಡೆ ಇಡೀ ಜಗತ್ತೇ ಪರದಾಡುತ್ತಿದ್ದಾರೆ, ಇನ್ನೊಂದೆಡೆ ಜಪಾನ್ ಮಾತ್ರ ಕೊರೊನಾ ವಿರುದ್ಧದ ಈ ಯುದ್ಧವನ್ನು ಬಹಳ ಸುಲಭವಾಗಿ ಗೆಲ್ಲುವ ಹಾದಿಯಲ್ಲಿದೆ. ಅಲ್ಲಿ ಯಾವುದೇ ರೀತಿಯ ಲಾಕ್‌ಡೌನ್ ಆಗಲಿ, ಸಾರಿಗೆಯ ಮೇಲೆ ನಿರ್ಬಂಧವಾಗಲಿ ವಿಧಿಸಲಾಗಿಲ್ಲ ಅಷ್ಟೇ ಯಾಕೆ ರೆಸ್ಟೋರೆಂಟ್ ಹಾಗೂ ಸಲೂನ್ ಗಳನ್ನೂ ಸಹ ಮುಚ್ಚಲಾಗಿಲ್ಲ. ಆದರೂ ಕೂಡ ಜಪಾನಿಗಳು ಸೋಂಕನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕರೋನಾದಿಂದ ಸಾವಿರಾರು ಜನರು ಸಾವನ್ನಪ್ಪಿದ್ದರೆ, ಜಪಾನ್‌ನಲ್ಲಿ ಕೇವಲ 808 ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವದ ಎಲ್ಲಾ ದೊಡ್ಡ ರಾಷ್ಟ್ರಗಳಲ್ಲಿ ಜಪಾನ್ ಮೊದಲನೆಯ ರಾಷ್ಟ್ರವಾಗಿದ್ದು, ಅದರ ಬಳಿ ಕೊರೊನಾದಂತಹ ಮಹಾಮಾರಿಯನ್ನು ತಡೆಗಟ್ಟಲು CDCಗಳಂತಹ ರೋಗ ನಿಯಂತ್ರಣ ಕೇಂದ್ರಗಳಿಲ್ಲ. ಅದರ ಹೊರತಾಗಿಯೂ ಕೂಡ ಜಪಾನ್ ಪಿಡುಗು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಹೇಳಿಕೆ ನೀಡುವ ಹೊಕ್ಕೈಡೊ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೋಂಕು ನಿಯಂತ್ರಣ ವಿಭಾಗದಲ್ಲಿ ಪ್ರೊಫೆಸರ್ ಯೊಕೊ ಟ್ಸುಕಾಮೊಟೊ, ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಈ ಕೇಂದ್ರಗಳಿಗಿಂತ ಕೆಳಮಟ್ಟದ್ದಾಗಿಲ್ಲ ಎಂದಿದ್ದಾರೆ. ಮತ್ತೋರ್ವ ಪ್ರೊಫೆಸರ್ ಕಜುಟೋ ಸುಜ್ಹುಕಿ ಹೇಳುವ ಪ್ರಕಾರ, ಇದು ಸಿಂಗಾಪುರ್ ಮಾದರಿಯ ಆಪ್ ಆಧಾರಿತ ವ್ಯವಸ್ಥೆಯಾಗಿಲ್ಲ. ಇದು ಜನರಿಂದ ಹಾಗೂ ಆರೋಗ್ಯ ಕಾರ್ಯಕರ್ತರ ಸಕ್ರೀಯತೆಯಿಂದ ಕೂಡಿರುವ ವ್ಯವಸ್ಥೆಯಾಗಿದೆ. ಅಮೇರಿಕಾ, ಯುರೋಪ್ ಹಾಗೂ ಇತರೆ ದೇಶಗಳಲ್ಲಿ ದಾಯಿಯರಿಗೆ ಈ ಕುರಿತು ಇದೀಗ ತರಬೇತಿ ನೀಡಲಾಗುತ್ತಿದೆ ಅಂದರೆ, ನಮ್ಮಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಈ ಕುರಿತು ಸಿದ್ಧತೆ ಕೈಗೊಳ್ಳಲಾಗಿದೆ ಎಂದಿದ್ದಾರೆ.
1. ಇಂತಹ ಮಾರಕ ರೋಗಗಳನ್ನು ಎದುರಿಸಲು ಯುನೈಟೆಡ್ ಸ್ಟೇಟ್ಸ್‌ನ ಸಿಡಿಸಿ ಕೇಂದ್ರಗಳಂತೆ ರೋಗ ನಿಯಂತ್ರಣ ಕೇಂದ್ರಗಳು ಜಪಾನ್ ನಲ್ಲಿ ಇಲ್ಲ.
2. ಇತರ ದೇಶಗಳು ರೋಗಿಗಳನ್ನು ಹುಡುಕಲು ಹೈಟೆಕ್ ಅಪ್ಲಿಕೇಶನ್ ಬಳಸುತ್ತಿದ್ದರೆ, ಜಪಾನ್ ಅಂತಹ ಯಾವುದೇ ಅಪ್ಲಿಕೇಶನ್ ಅನ್ನು ಮಾಡಿಲ್ಲ.
3. ಒಂದೆಡೆ ಗರಿಷ್ಠ ಪರೀಕ್ಷೆ ನಡೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ, ಆದರೆ ಜಪಾನ್ ತನ್ನ ಒಟ್ಟು ಜನಸಂಖ್ಯೆಯ ಕೇವಲ 0.2% ಮಾತ್ರ ಪರೀಕ್ಷೆ ಕೈಗೊಂಡಿದೆ.
4. ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ಏಳು ರಾಷ್ಟ್ರಗಳಲ್ಲಿ ಒಂದಾದ ಜಪಾನ್ ನಲ್ಲಿ ಸೋಂಕು ಪಸರಿಸುವ ವೇಗ ಕೂಡ ಕಡಿಮೆಯಾಗಿದ್ದು, ಮೃತರ ಸಂಖ್ಯೆ ಕೂಡ ಸಹ 1000 ಕ್ಕಿಂತ ಕಡಿಮೆಯಾಗಿದೆ.
ಜಪಾನ್ ನಲ್ಲಿ ಇದು ಹೇಗೆ ಸಾಧ್ಯವಾಗಿದೆ?
ಜೀವನಶೈಲಿ: ಮಾಸ್ಕ್ ಧರಿಸುವುದು ಜಪಾನಿ ಜನರ ಜೀವನಶೈಲಿಯ ಒಂದು ಪ್ರಮುಖ ಭಾಗವಾಗಿದೆ, ಈ ಸಂಪ್ರದಾಯವು ಅಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಅಲ್ಲಿ ಬೊಜ್ಜು ಹೊಂದಿರುವ ಜನರೂ ಕೂಡ ತುಂಬಾ ಕಡಿಮೆ ಪ್ರಮಾಣದಲ್ಲಿ ಇದ್ದಾರೆ. ಅವನ ಮಾತನಾಡುವ ಶೈಲಿಯಲ್ಲಿಯೂ ಕೂಡ ಬಾಯಿಯ ಹನಿಗಳು ಸಿಡಿಯುವುದಿಲ್ಲ. ಅಷ್ಟೇ ಅಲ್ಲ, ಸೋಂಕಿನ ಪ್ರಕರಣಗಳು ವರದಿಯಾದ ಕೂಡಲೇ ಮೊದಲು ಶಾಲೆಗಳನ್ನು ಮುಚ್ಚಲಾಯಿತು.
ಸಂಪರ್ಕ ಪತ್ತೆಹಚ್ಚುವಿಕೆ: ಜಪಾನ್‌ನಲ್ಲಿ 50,000 ಕ್ಕೂ ಹೆಚ್ಚು ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಇದ್ದಾರೆ, ಅವರು 2018 ರಲ್ಲಿ ಇನ್ಫ್ಲುಯೆನ್ಸ ಮತ್ತು ಕ್ಷಯರೋಗಕ್ಕಾಗಿ ವಿಶೇಷವಾಗಿ ತರಬೇತಿ ಪಡೆದಿದ್ದರು. ಜನವರಿಯಲ್ಲಿ ಮೊದಲ ಪ್ರಕರಣ ಬಂದ ತಕ್ಷಣ ಅವರೆಲ್ಲರನ್ನು ಸಕ್ರೀಯಗೊಳಿಸಲಾಗಿದೆ, ಸಂಪರ್ಕವನ್ನು ಪತ್ತೆಹಚ್ಚುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಸಮೂಹಗಳು, ಕ್ಲಬ್‌ಗಳು ಅಥವಾ ಆಸ್ಪತ್ರೆಗಳಲ್ಲಿ ವಿಶೇಷ ನಿಗಾ ವಹಿಸಿದ್ದಾರೆ.
ಕಠಿಣ ತೀರ್ಮಾನಗಳು: ಫೆಬ್ರವರಿಯಲ್ಲಿ ವಜ್ರ ಕ್ರೂಸ್ ಹಡಗಿನಲ್ಲಿ ಸೋಂಕಿನ ವರದಿ ಬಂದಾಗ ಜಪಾನ್ ಅಂತರರಾಷ್ಟ್ರೀಯ ಟೀಕೆಗೆ ಗುರಿಯಾಗಿದೆ. ಅದರ ನಂತರ ಇಡೀ ವ್ಯವಸ್ಥೆಯೇ ಬದಲಾಗಿದೆ. ಏಪ್ರಿಲ್‌ನಲ್ಲಿ ಮತ್ತೆ ಪ್ರಕರಣಗಳು ಹೆಚ್ಚಾದಾಗ, ತುರ್ತು ಪರಿಸ್ಥಿತಿ ಜಾರಿಗೆ ತರಲಾಗಿದೆ. ಈಗ ಹೊಸ ಪ್ರಕರಣಗಳು ಒಂದು ದಿನದಲ್ಲಿ 50 ಕ್ಕೆ ಇಳಿದಿವೆ ಮತ್ತು ತುರ್ತು ಪರಿಸ್ಥಿತಿಯನ್ನು ಸಹ ತೆಗೆದುಹಾಕಲು ಜಪಾನ್ ಸಿದ್ಧವಾಗಿದೆ.
ಸರ್ಕಾರದ ಕ್ರಿಯಾಶೀಲತೆ: ಜಪಾನ್ ಕ್ರೂಸ್ ಹಡಗಿನಲ್ಲಿ ಸೋಂಕಿನ ಹರಡುವಿಕೆಯನ್ನು ಬಾಗಿಲಲ್ಲಿ ಬೆಂಕಿಗೆ ಬಿದ್ದ ಕಾರಿನಂತೆ ನೋಡಿದೆ ಮತ್ತು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಉನ್ನತ ವಿಜ್ಞಾನಿಗಳು, ಆರೋಗ್ಯ ತಜ್ಞರು, ವೈದ್ಯರು ಜನರನ್ನು ತಪಾಸಣೆಯಲ್ಲಿ ತೊಡಗಿದ್ದಾರೆ. ಟೀಕೆಗಳ ಹೊರತಾಗಿಯೂ, ಸರ್ಕಾರ ದೃಢವಾಗಿ ಎದ್ದು ನಿಂತಿದೆ.
ಸಾರ್ವಜನಿಕ ಜಾಗೃತಿ: ಈ ಕುರಿತು ಹೇಳಿಕೆ ನೀಡುವ ಜಪಾನ್ ಸರ್ಕಾರದ ಸಲಹೆಗಾರ ಮತ್ತು ಸಾಂಕ್ರಾಮಿಕ ರೋಗಗಳ ತಜ್ಞ ಶಿಗು ಓಮಿ, ಆರೋಗ್ಯದ ಪ್ರತಿ ಜಪಾನಿ ಜನರ ಜಾಗರೂಕತೆ ಇದರಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನುತ್ತಾರೆ. ವಿಶ್ವದ ಇತರೆ ದೇಶಗಳಲ್ಲಿ ಕಂಡು ಬಂದ ವೈರಸ್ ತಳಿಗಳಿಗಿಂತ ದುರ್ಬಲ ವೈರಸ್ ತಳಿಗಳು ಜಪಾನ್ ನಲ್ಲಿ ಕಂಡುಬಂದಿವೆ. ಹೀಗಾಗಿ ಇದೂ ಕೂಡ ಒಂದು ಕಾರಣ ಎಂದು ಹೇಳಲಾಗುತ್ತದೆ.