ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೊರೊನಾವೈರಸ್ ಅನ್ನು ಎದುರಿಸುವುದಕ್ಕಾಗಿ ಕಾರ್ಯತಂತ್ರ ರೂಪಿಸಲು ಸಾರ್ಕ್ ನಾಯಕರ ವಿಡಿಯೋ ಸಮ್ಮೇಳನ ಭಾನುವಾರ ಸಂಜೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ದಕ್ಷಿಣ ಏಷ್ಯನ್ ಅಸೋಸಿಯೇಷನ್ ​​ಫಾರ್ ರೀಜನಲ್ ಕೋಆಪರೇಷನ್ (ಸಾರ್ಕ್) ನ ಇತರ ಏಳು ಸದಸ್ಯರು ಶುಕ್ರವಾರ ಮೋದಿಯವರು ಮಾಡಿದ ಪ್ರಸ್ತಾಪವನ್ನು ಅನುಮೋದಿಸಿದರು. ಪ್ರಧಾನಿ ಮೋದಿ ಆಹ್ಚಾನವನ್ನು ಒಪ್ಪಿಕೊಂಡ ಕೊನೆಯ ಸದಸ್ಯ ರಾಷ್ಟ್ರವಾದ ಪಾಕಿಸ್ತಾನ ತನ್ನ ಆರೋಗ್ಯ ಸಚಿವರು ವಿಡಿಯೋ ಸಮ್ಮೇಳನದಲ್ಲಿ ಸೇರಲಿದ್ದಾರೆ ಎನ್ನುವುದು ಖಚಿತವಾಗಿದೆ.ಪ್ರಧಾನಿ ಮೋದಿ ಟ್ವೀಟ್ ನಲ್ಲಿ, ಸಾರ್ಕ್ ರಾಜ್ಯಗಳ ನಾಯಕತ್ವವು "ಕೊರೊನಾವೈರಸ್ ವಿರುದ್ಧ ಹೋರಾಡಲು ಬಲವಾದ ಕಾರ್ಯತಂತ್ರವನ್ನು ರೂಪಿಸಬೇಕು" ಮತ್ತು "ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ, ನಮ್ಮ ನಾಗರಿಕರನ್ನು ಆರೋಗ್ಯವಾಗಿಡಲು ಮಾರ್ಗಗಳನ್ನು ಚರ್ಚಿಸಬೇಕು" ಎಂದು ಪ್ರಸ್ತಾಪಿಸಿದ್ದರು.


ಸುದ್ದಿಮೂಲಗಳ ಪ್ರಕಾರ ಭಾನುವಾರ ಸಂಜೆ 5 ಗಂಟೆಗೆ ವೀಡಿಯೊ ಸಮ್ಮೇಳನವನ್ನು ನಿಗದಿಪಡಿಸಲಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ವಿಶೇಷ ಸಲಹೆಗಾರ ಜಾಫರ್ ಮಿರ್ಜಾ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.


ಪಾಕಿಸ್ತಾನ ಮೂಲದ ಭಯೋತ್ಪಾದಕರ ಮೇಲೆ ಆರೋಪ ಹೊರಿಸಿರುವ ಕಾಶ್ಮೀರದ ಉರಿಯಲ್ಲಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯ ನಂತರ 2016 ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಶೃಂಗಸಭೆಯನ್ನು ರದ್ದುಗೊಳಿಸಿದಾಗಿನಿಂದ ಸಾರ್ಕ್ ಹೆಚ್ಚಾಗಿ ನಿಷ್ಕ್ರಿಯವಾಗಿದೆ. ಅಂದಿನಿಂದ, ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸಲು ಭಾರತ ಬಿಮ್‌ಸ್ಟೆಕ್‌ನಂತಹ ಪರ್ಯಾಯ ಬಣಗಳತ್ತ ಮುಖ ಮಾಡಿದೆ.


COVID-19 ಕುರಿತಾಗಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ ಜಂಟಿ ಕಾರ್ಯತಂತ್ರದ ಸಲಹೆಯನ್ನು ಆರು ಸಾರ್ಕ್ ರಾಜ್ಯಗಳ ಉನ್ನತ ನಾಯಕರು ಒಪ್ಪಿಕೊಂಡರೆ, ಪಾಕಿಸ್ತಾನವು ಶುಕ್ರವಾರ ಮಧ್ಯರಾತ್ರಿಯ ನಂತರ ಮಿರ್ಜಾ ವೀಡಿಯೊ ಸಮ್ಮೇಳನದಲ್ಲಿ ದೇಶವನ್ನು ಪ್ರತಿನಿಧಿಸುವುದಾಗಿ ಘೋಷಿಸಿತು.