ಮನಿಲಾ: ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊ ದ್ವೀಪದಲ್ಲಿ ಸಂಭವಿಸಿದ 6.4 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.


COMMERCIAL BREAK
SCROLL TO CONTINUE READING

ಫಿಲಿಪೈನ್ ಇನ್ಸ್ಟಿಟ್ಯೂಟ್ ಆಫ್ ವಾಲ್ಕನೋ ಅಂಡ್ ಫಿವೊಲ್ಕ್ಸ್ ಬುಧವಾರ ರಾತ್ರಿ 7.37ಕ್ಕೆ ಭೂಕಂಪ ಸಂಭವಿಸಿರುವುದಾಗಿ ತಿಳಿಸಿದ್ದು, ಭೂಕಂಪದ ಬಳಿಕ ಸುಮಾರು 246 ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದೆ. 


ಉತ್ತರ ಕೊಟಾಬಾಟೊ ಪ್ರಾಂತ್ಯದ ತುಲುನಂನಲ್ಲಿ, ಭೂಕಂಪದಿಂದಾಗಿ ಮನೆ ಕುಸಿದು ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಹತ್ತಿರದ ನಗರವಾದ ಕಿಡಪವಾನ್ ನಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಮತ್ತೊಂದು ಎರಡು ವರ್ಷದ ಬಾಲಕಿ ಮನೆ ಕುಸಿದು ಸಾವನ್ನಪ್ಪಿದ್ದು, ದಾವೊ ಡೆಲ್ ಸುರ್ ಪ್ರಾಂತ್ಯದ ಮ್ಯಾಗ್ಸೆಸೆ ನಗರದಲ್ಲಿ ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಫಿವೊಲ್ಕ್ಸ್ ತಿಳಿಸಿದೆ.


ಮ್ಯಾಗ್ಸೆಸೆಯಲ್ಲಿರುವ ಹೆಚ್ಚಿನ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಸಿಟಿ ಹಾಲ್ ವಕ್ತಾರ ಆಂಥೋನಿ ಅಲ್ಲಾಡಾ ಹೇಳಿದ್ದಾರೆ. ಜನರಲ್ ಸ್ಯಾಂಟೋಸ್‌ನಲ್ಲಿ, ದಾವೊ ಡೆಲ್ ಸುರ್‌ನಲ್ಲಿಯೂ ಸಹ ಭೂಕಂಪದ ನಂತರ ಶಾಪಿಂಗ್ ಕೇಂದ್ರವೊಂದು ಬೆಂಕಿಗೆ ಆಹುತಿಯಾಗಿದೆ. ಆದರೂ ಅಧಿಕೃತ ಅಪಘಾತದ ಸಂಖ್ಯೆಯನ್ನು ಬಹಿರಂಗಪಡಿಸಲಾಗಿಲ್ಲ.