ನವದೆಹಲಿ: ಟ್ರೈನ್ ನಲ್ಲಿ ಯಾತ್ರಿಗಳು ಸಾಮಾನು ಮರೆತು ಹೋಗುವುದು ಸಾಮಾನ್ಯ ಘಟನೆಯಾಗಿದೆ. ಇಂತಹ ಘಟನೆ ನಿಮ್ಮ ಜೊತೆಗೂ ಕೂಡ ಘಟಿಸಿರಬಹುದು. ಹಲವು ಹಲವು ಘಟನೆಗಳಲ್ಲಿ ಮರೆತು ಹೋದ ಸಾಮಾನು ಸಿಗುತ್ತದೆ. ಆದರೆ, ಕೆಲ ಘಟನೆಗಳಲ್ಲಿ ಹಾನಿ ಎದುರಾಗುತ್ತದೆ.


COMMERCIAL BREAK
SCROLL TO CONTINUE READING

ಟ್ರೈನ್ ನಲ್ಲಿ ವ್ಯಕ್ತಿಯೋರ್ವ ಸಾಮಾನು ಮರೆತು ಹೋದ ಘಟನೆ ಸ್ವಿಟ್ಜರ್ಲ್ಯಾಂಡ್ ನ ಉತ್ತರ ಭಾಗದಲ್ಲಿರುವ ಗೈಲನ್ ನಿಂದ ವರದಿಯಾಗಿದೆ. ಆದರೆ ಸಾಮಾನು ಮರೆತು ಹೋದ ವ್ಯಕ್ತಿ ಅಂತಿಂತ ಸಾಮಾನು ಮರೆತು ಹೋಗಿಲ್ಲ. ಆತ ಟ್ರೈನ್ ನಲ್ಲಿ ಮರೆಹೊಗಿದ್ದು ಚಿನ್ನ್ನದ ಬಿಸ್ಕಿಟ್ ಗಳು. ಮಾಧ್ಯಮಗಳ ವರದಿ ಪ್ರಕಾರ ಈ ಚಿನ್ನದ ಬಿಸ್ಕಿಟ್ ಗಳ ಒಟ್ಟು ಬೆಲೆ ಸುಮಾರು 1.5ಕೋಟಿ ರೂ.ಗಳಷ್ಟಾಗಿದೆ. ಈ ಚಿನ್ನದ ಬಿಸ್ಕಿಟ್ ಗಳು ಯಾರಿಗೆ ಸೇರಿವೆ ಅವರು ಬಂದು ತೆಗೆದುಕೊಂಡು ಹೋಗುವಂತೆ ಆಡಳಿತ ಸೂಚಿಸಿದೆ. ಆದರೆ, ಇಲ್ಲಿ ಆಶ್ಚರ್ಯದ ವಿಷಯ ಎಂದರೆ, ಇದುವರೆಗೆ ಆ ಬಿಸ್ಕಿಟ್ ಗಳನ್ನು ಯಾರೂ ತೆಗೆದುಕೊಂಡು ಹೋಗಿಲ್ಲ.


ಮಾಧ್ಯಮಗಳ ವರದಿ ಪ್ರಕಾರ ಸ್ವಿಟ್ಜರ್ಲ್ಯಾಂಡ್ ನ ಉತ್ತರ ಭಾಗದಲ್ಲಿರುವ ಸೆಂಟ್ ಗೈಲನ್ ನಲ್ಲಿ ಟ್ರೈನ್ ವೊಂದರಲ್ಲಿ ರೇಲ್ವೆ ಅಧಿಕಾರಿಗಳಿಗೆ 1 ಲಕ್ಷ 91 ಸಾವಿರ ಡಾಲರ್ ಅಂದರೆ 1.5 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕಿಟ್ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದೆ. ಆದರೆ, ಇತ್ತೀಚೆಗಷ್ಟೇ ಈ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. 


ಈ ಕುರಿತು ಘೋಷಣೆ ಮಾಡಿರುವ ಸ್ವಿಟ್ಜರ್ಲ್ಯಾಂಡ್ ಅಧಿಕಾರಿಗಳು, ಈ ಚಿನ್ನದ ಬಿಸ್ಕಿಟ್ ಯಾರಿಗೆ ಸೇರಿವೆ ಅವರು ಬಂದು ಅವುಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಹೇಳಿದೆ. ಅಷ್ಟೇ ಅಲ್ಲ ಅವುಗಳನ್ನು ವಾಪಸ್ ಪಡೆಯಲು ಸಮಯ ಕೂಡ ನಿರ್ಧರಿಸಿದೆ. ಇವುಗಳನ್ನು ವಾಪಸ್ ಪಡೆಯಲು ಅದರ ಮಾಲೀಕರ ಬಳಿ 5 ವರ್ಷಗಳ ಕಾಲಾವಕಾಶ ಇದೆ. 5 ವರ್ಷಗಳ ಬಳಿಕ ಚಿನ್ನದ ಬಿಸ್ಕಿಟ್ ಗಳ ಮೇಲಿನ ಆತನ ಮಾಲಿಕತ್ವ ಮುಕ್ತಾಯಗೊಳ್ಳಲಿದೆ ಎಂದೂ ಕೂಡ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.