ಕಳೆದ ಮೂರು ವರ್ಷಗಳಿಂದ ಸಿರಿಯಾ ಮತ್ತು ಇಸ್ಲಾಮಿಕ್ ಪ್ರಾಂತ್ಯದ ನಡುವೆ ನಡೆಯುತಿದ್ದ ಶೀತಲ ಸಮರಕ್ಕೆ ತೆರೆಬಿದ್ದಿದ್ದು, ಸಿರಿಯಾ ಸೈನ್ಯವು ಗುರುವಾರ ಜಿಹಾದಿ ಮುಸ್ಲಿಂ ಮೂಲಭೂತವಾದಿಗಳ ಗುಂಪನ್ನು ವಶಪಡಿಸಿಕೊಳ್ಳುವ ಮೂಲಕ ಕೊನೆಗೂ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಸಿರಿಯಾದ ಮರುಭೂಮಿ ಪ್ರದೇಶ ಹಾಗೂ ಇರಾಕ್ ದೇಶದ ಗಡಿ ಪ್ರದೇಶದಲ್ಲಿರುವ  ಅಲ್ಬು ಕಮಾಲ್ ಪ್ರದೇಶವು ಇಸ್ಲಾಮಿಕ್ ಗುಂಪಿನ ವಶದಲ್ಲಿತ್ತು.  2014 ರಿಂದ ಸಿರಿಯಾ ಸೈನ್ಯ ಹಾಗೂ ಇಸ್ಲಾಮಿಕ್ ಗುಂಪಿನ ಮಧ್ಯದಲ್ಲಿ ಸತತ ಮೂರು ವರ್ಷಗಳಿಂದ ನಡೆಯುತ್ತಿದ್ದ ಜಿದ್ದಾಜಿದ್ದಿನ ಹೋರಾಟಕ್ಕೆ ಸಿರಿಯಾದ ಸೈನ್ಯವು ಗುರುವಾರ  ಜಿಹಾದಿ ಮುಸ್ಲಿಂ ಮೂಲಭೂತವಾದಿಗಳ ಗುಂಪಿನ ನೆಲೆಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ಯುದ್ದಕ್ಕೆ ಅಂತ್ಯಹಾಡಿದೆ. ಆ ಮೂಲಕ ಈ ಯುದ್ದ ಪೀಡಿತ ಪ್ರದೇಶದಲ್ಲಿ  ಶಾಂತಿ ನೆಲೆಗೊಂಡಿದೆ.  ದಿನಪ್ರತಿ  ನಡೆಯುವ ಈ ಮಾರಣಹೋಮದಲ್ಲಿ ಸಾಕಷ್ಟು ಸಾವು ನೋವುಗಳಿಂದಾಗಿ ಈ ಪ್ರದೇಶವು ಎಲ್ಲಾ ರೀತಿಯಿಂದಲೂ ಅಸ್ಥಿರಗೊಂಡಿತ್ತು ಈಗ ಇಸ್ಲಾಮಿಕ್ ಗುಂಪಿನ ವಿರುದ್ದದ ಹೋರಾಟದಿಂದಾಗಿ ಈ ಭಾಗದ ಜನ ನಿಟ್ಟಿಸಿರು ಬಿಡುವಂತಾಗಿದೆ. 


ಸತತ ಒಂಭತ್ತು ತಿಂಗಳ  ಇರಾಕಿನ ಸೈನ್ಯದ ಹೋರಾಟದಲ್ಲಿ ಮೊಸುಲ್ ಮಸೀದಿಯು ಹಾನಿಗೊಳಗಾಗಿತ್ತು.  ಅಲ್ಲದೆ ಯುಎಸ್  ಹಾಗೂ  ಅರಬ್ ಬೆಂಬಲಿತ ಸೈನ್ಯವಾದ 'ಸಿರಿಯನ್ ಡೆಮೋಕ್ರಾಟಿಕ್ ಫೋರ್ಸ್' ಮತ್ತು ಇರಾಕಿನ ಗೆರಿಲ್ಲಾ ಮಾದರಿಯ ಹೋರಾಟವು ಇಸ್ಲಾಮಿಕ್ ಮಿಲಿಟೆಂಟ್ ಗುಂಪಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು.