Taliban New Government: ಅಫ್ಘಾನಿಸ್ತಾನದಲ್ಲಿನ (Afghanistan)ಹೊಸ ತಾಲಿಬಾನ್ (Taliban) ಸರ್ಕಾರವನ್ನು ಸ್ವೀಕರಿಸಲು ಭಾರತ (India) ನಿರಾಕರಿಸಿದೆ. ಶನಿವಾರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S.Jaishankar) ಅವರು ಹೊಸ ತಾಲಿಬಾನ್ ಸರ್ಕಾರವನ್ನು ವಿನಿಯೋಗಕ್ಕಿಂತ (Despensation) ಹೆಚ್ಚೇನೂ ಪರಿಗಣಿಸುವುದಿಲ್ಲ ಮತ್ತು ಅದರಲ್ಲಿ ಎಲ್ಲಾ ವರ್ಗಗಳು ಇಲ್ಲ ಎಂಬುದರ ಕುರಿತು ಚಿಂತೆ ಹೊಂದಿದೆ ಎಂದು ಸ್ಪಸ್ಥಪಡಿಸಿದ್ದಾರೆ. ಇದರ ಹೊರತಾಗಿ, ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಭಾರತವು ತೀವ್ರ ಕಾಳಜಿ ಹೊಂದಿದೆ ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಅಫ್ಘಾನಿಸ್ತಾನದ (Afghanistan Crisis) ಮಣ್ಣನ್ನು ಭಯೋತ್ಪಾದನೆಗೆ ಬಳಸುವುದನ್ನು ಭಾರತ ಬಯಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ, ಭಾರತವು ವಿಶ್ವಸಂಸ್ಥೆಯ 2593 ವಿಧೇಯಕವನ್ನು ಜಾರಿಗೊಳಿಸುವ ಕುರಿತು ಆಸ್ಟ್ರೇಲಿಯಾದೊಂದಿಗೆ ಚರ್ಚಿಸಿದೆ. ಈ ಮಸೂದೆಯ ಅಡಿಯಲ್ಲಿ, ಯಾವುದೇ ದೇಶವು ಭಯೋತ್ಪಾದನೆಯನ್ನು ಉತ್ತೇಜಿಸುವುದನ್ನು ತಡೆಯಲು ಒತ್ತು ನೀಡಲಾಗುತ್ತದೆ.


ಶನಿವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2 ಪ್ಲಸ್ 2 ಸಭೆಯ ನಂತರ ವಿದೇಶಾಂಗ ವ್ಯವಹಾರಗಳ ಸಚಿವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಮಾಧ್ಯಮಗೋಷ್ಠಿಯಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೆ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮೇರಿ ಪೇನ್ ಮತ್ತು ರಕ್ಷಣಾ ಸಚಿವ ಪೀಟರ್ ಡಟನ್ ಕೂಡ ಇದ್ದರು.


ಆಸ್ಟ್ರೇಲಿಯಾ (Australia) ಜೊತೆಗಿನ 2 ಪ್ಲಸ್ 2 ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿನ ಡಿಸ್ಪೆನ್ಸೆಶನ್ (ವ್ಯವಸ್ಥೆ) ನ ಇನ್ಕ್ಲುಸಿವ್ನೆಸ್ ಕುರಿತು ಅಂದರೆ ವಿತರಣೆ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಚರ್ಚೆ ನಡೆಸಲಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.


ಇದನ್ನೂ ಓದಿ-Funny Video : ಡಾನ್ಸ್ ಮೂಲಕ ಮದುವೆ ವೇದಿಕೆಗೆ ಎಂಟ್ರಿ ಕೊಟ್ಟ ಜೋಡಿ, ಅತೀ ಉತ್ಸಾಹದಿಂದ ಕುಣಿಯುತ್ತಿದ್ದ ವೇಳೆ ಆಗಿದ್ದು....


ಈ ಸಂದರ್ಭದಲ್ಲಿ ಮಾತನಾಡಿರುವ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮೇರಿ ಪೇನ್ (Merry Pen) ಕೂಡ ಅಫ್ಘಾನಿಸ್ತಾನದ ಮಣ್ಣನ್ನು ಭಯೋತ್ಪಾದಕರ ಉತ್ಪಾದನೆಗೆ ಬಳಸಬಾರದು ಎಂದು ಪುನರುಚ್ಚರಿಸಿದ್ದಾರೆ.  ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗಬಾರದು. ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವಿಗೆ ಸಂಬಂಧಿಸಿದಂತೆ ಅವರು ಟು ಪ್ಲಸ್ ಟು ಸಭೆಯಲ್ಲಿ ಭಾರತದ ಜೊತೆ ಚರ್ಚಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟು ಪ್ಲಸ್ ಟು ಸಭೆ (Two Plus Two Meet) ಇದಾಗಿದೆ. ಅಂದರೆ ಎರಡೂ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರು ಒಟ್ಟಾಗಿ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಭಯ ದೇಶಗಳ ನಡುವಿನ ಈ  ಮೊದಲನೇ ಟು ಪ್ಲಸ್ ಟು ಸಭೆ ರಾಜಧಾನಿ ದೆಹಲಿಯಲ್ಲಿ ಮುಕ್ತಾಯಗೊಂಡಿದೆ.


ಇದನ್ನೂ ಓದಿ-OMG! ಕಳೆದ 40 ವರ್ಷಗಳಿಂದ ಒಂದು ದಿನವೂ ನಿದ್ದೆಯೇ ಮಾಡಿಲ್ಲವಂತೆ ಈ ಮಹಿಳೆ- ವೈರಲ್ ಸುದ್ದಿ


ಇಂದು (ಶನಿವಾರ) ಅಮೆರಿಕದ 9/11 ದಾಳಿಯ (9/11 Terror Attack) 20 ನೇ ಜನ್ಮ ದಿನಾಚರಣೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ರಾಜಿ ಮಾಡಿಕೊಳ್ಳಬಾರದು ಎಂದು ಈ ದಾಳಿ ನಮಗೆ ನೆನಪಿಸುತ್ತದೆ. ಭಯೋತ್ಪಾದನೆಯ ಕೇಂದ್ರಬಿಂದು ಭಾರತಕ್ಕೆ ತೀರಾ ಹತ್ತಿರವಾಗಿರುವುದರಿಂದ ಭಾರತ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ವೇಳೆ ಮೇರಿ ಪೇನ್ ಕೂಡ ನಮ್ಮ ಸ್ನೇಹಿತ ದೇಶ ಅಮೆರಿಕಾದ ಮೇಲೆ ನಡೆಸಲಾಗಿರುವ ಈ 9/11 ದಾಳಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ-ಆಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಸಹೋದರನನ್ನು ಹತ್ಯೆಗೈದ ತಾಲಿಬಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ