ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧದ ಪ್ರತಿರೋಧಕ್ಕೆ ಇಂದು ದೇಶದ ಹೊಸ ಆಡಳಿತಗಾರು ಗುಂಡಿನ ಮೂಲಕ ಉತ್ತರ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ತಾಲಿಬಾನ್ ಮತ್ತು ರಾಷ್ಟ್ರಪತಿ ಹಮೀದ್ ನಡುವೆ ಕಾಬೂಲ್ ನಲ್ಲಿ ಏಕತೆ ಸರ್ಕಾರದ ನಡೆಸುವ ವಿಚಾರವಾಗಿ ಮಾತುಕತೆ ನಡೆದ ಬೆನ್ನಲ್ಲೇ ಈಗ ತಾಲಿಬಾನ್ ಪ್ರತಿಭಟನಾಕಾರರಿಗೆ ಹಿಂಸೆಯ ಮೂಲಕ ಉತ್ತರ ನೀಡಿದೆ.


ಜಲಾಲಾಬಾದ್‌ನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಜನರು ತಾಲಿಬಾನ್ (Afghanistan) ಧ್ವಜವನ್ನು ಕೆಳಗಿಳಿಸಿ ಮತ್ತು ಕೆಂಪು, ಹಸಿರು ಮತ್ತು ಕಪ್ಪು ರಾಷ್ಟ್ರಧ್ವಜವನ್ನು ಬಿಡುಗಡೆ ಮಾಡಿದರು ಎಂದು ವರದಿಗಳು ತಿಳಿಸಿವೆ.ಸ್ಥಳೀಯ ಸುದ್ದಿ ಸಂಸ್ಥೆ ಪಜ್‌ವಾಕ್ ಅಫಘಾನ್ ನ್ಯೂಸ್ ಟ್ವೀಟ್ ಮಾಡಿದ ವೀಡಿಯೋದಲ್ಲಿ ಜನರು ರಾಷ್ಟ್ರೀಯ ಧ್ವಜವನ್ನು ಹೊತ್ತು ರಸ್ತೆ ದಾಟುತ್ತಿರುವುದನ್ನು ತೋರಿಸಿದೆ.ಆದರೆ ಇದೆ ವೇಳೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಯುತ್ತದೆ, ಆಗ ಜನರು ಘೋಷಣೆಗಳನ್ನು ಕೂಗಲು ಮುಂದಾಗುತ್ತಾರೆ.


'ಜಲಾಲಾಬಾದ್ ನಗರದಲ್ಲಿ ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಗುಂಡು ಹಾರಿಸಿತು ಮತ್ತು ಕೆಲವು ವಿಡಿಯೋ ಪತ್ರಕರ್ತರ ಮೇಲೆ ಹಲ್ಲೆ ಮಾಡಿದೆ ಹೊಡೆದಿದೆ"ಎಂದು ವೀಡಿಯೊದ ಒಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ