ಸ್ಪೇನ್: ಸ್ಪೇನ್ ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ವೆರೋನಿಕಾ ಡ್ಯೂಕ್ (43) ಕಳೆದ ಸುಮಾರು 15 ವರ್ಷಗಳಿಂದ ತಮ್ಮನ್ನು ತಾವು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ, ಸಾಮಾಜಿಕ ಅಧ್ಯಯನ, ಕಲೆ, ಇಂಗ್ಲೀಷ್ ಹಾಗೂ ಸ್ಪ್ಯಾನಿಷ್ ವಿಷಯಗಳನ್ನು ಬೋಧಿಸುತ್ತಾರೆ. ಆದರೆ, ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರ ಬೋಧಿಸಲು ಮುಂದಾದ ವೆರೋನಿಕಾ ಸ್ವಿಮ್ ಸೂಟ್ ಖರೀದಿಸಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕಾಗಿ ಇಂಟರ್ನೆಟ್ ಸಹಾಯ ಪಡೆದ ಅವರು ಸರ್ಫಿಂಗ್ ಗೆ ಮುಂದಾಗಿದ್ದಾರೆ. ಈ ವೇಳೆ  ಅವರಿಗೆ AliExpress ಸ್ವಿಮ್ ಸೂಟ್ ಜಾಹೀರಾತು ಎದುರಾಗಿದೆ. ಇದನ್ನು ವಿಕ್ಷೀಸಿದ ವೆರೋನಿಕಾ ಮೊದಲು ಚಿಕ್ಕ-ಚಿಕ್ಕ ಮಕ್ಕಳಿಗೆ ದೇಹದ ಆಂತರಿಕ ಅಂಗಗಳ ಸ್ವರೂಪವನ್ನುದೃಶ್ಯೀಕರಿಸುವುದು ಎಷ್ಟು ಉಚಿತ ಎಂಬುದರ ಕುರಿತು ಯೋಚಿಸಿದ್ದಾರೆ. ಬಳಿಕ ಆ ಸ್ವಿಮ್ ಸೂಟ್ ಖರೀದಿಸಿ ಪ್ರಯೋಗ ನಡೆಸಲು ಮುಂದಾಗಿದ್ದಾರೆ.


ಬಿಕಿನಿಯಲ್ಲಿ ತನ್ನ ದೇಹವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸುವುದನ್ನು ಉಚಿತವಲ್ಲ ಎಂದು ಭಾವಿಸಿದ ವೆರೋನಿಕಾ, ಅಡಿಯಿಂದ ಮುಡಿಯವರೆಗೆ ಸ್ವಿಮ್ ಸೂಟ್ ಮೇಲೆ ಅಂಗಶಾಸ್ತ್ರದ ರೇಖಾ ಚಿತ್ರಗಳನ್ನು ಬಿಡಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಪತಿಯ ಸಹಾಯವನ್ನು ಪಡೆದುಕೊಂಡಿದ್ದಾರೆ. ಬಳಿಕ ಅವರ ಪತಿ ತಮ್ಮ ಪತ್ನಿಯ ರೇಖಾಚಿತ್ರಗಳನ್ನು ಒಳಗೊಂಡ ನಗ್ನ ಶರೀರದ ಫೋಟೋಗಳನ್ನು ಕ್ಲಿಕ್ಕಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 16ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರು ಹಂಚಿಕೊಂಡಿರುವ ಫೋಟೋಗಳು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಫೋಟೋಗಳಿಗೆ ಇದುವರೆಗೆ 65,300 ಲೈಕ್ಸ್ ಬಂದಿದ್ದು, 13,000 ಬಾರಿ ರೀಟ್ವೀಟ್ ಗೆ ಒಳಗಾಗಿವೆ.



ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವ ರಂಗಪರಿಕರಗಳು ಮತ್ತು ವೇಷಭೂಷಣಗಳನ್ನು ಬಳಸುವುದರಲ್ಲಿ ಡ್ಯೂಕ್ ಹೆಸರುವಾಸಿಯಾಗಿದ್ದಾರೆ.


ಈ ಕುರಿತು ಮಾತನಾಡುವ ಡ್ಯೂಕ್  "ಇತಿಹಾಸದ ಪಾಠಗಳಿಗಾಗಿ ವೇಷಗಳನ್ನು ಬಳಸಲು ನಾನು ಬಹಳ ಹಿಂದೆಯೇ ನಿರ್ಧರಿಸಿರುವುದಾಗಿ " ಹೇಳುತ್ತಾರೆ. “ ನಾನು ವಿದ್ಯಾರ್ಥಿಗಳಿಗೆ ನಾಮಪದಗಳು, ವಿಶೇಷಣಗಳು ಮತ್ತು ಕ್ರಿಯಾಪದಗಳಂತಹ ವ್ಯಾಕರಣದ ಅಂಶಗಳನ್ನು ತಿಳಿಸಿಕೊಡಲು ರಟ್ಟಿನಿಂದ ತಯಾರಿಸಲಾದ ಪರಿಕ್ಕರಗಳನ್ನು ಬಳಸುತ್ತೇನೆ” ಎಂದು ಡ್ಯೂಕ್ ಹೇಳಿಕೊಳ್ಳುತ್ತಾರೆ.


ತಮ್ಮ ಈ ಪ್ರಯತ್ನಗಳು ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಉತ್ಸಾಹ ಭರಿತ ಶಿಕ್ಷಕರಿಗೆ ಸಂಪನ್ಮೂಲಗಳ ಬಳಕೆ ಮಾಡಲು ಪ್ರೋತ್ಸಾಹಿಸಲಿದೆ ಎಂದು ತಾವು ಆಶಿಸಿಸುತ್ತಿರುವುದಾಗಿ ಡ್ಯೂಕ್ ಹೇಳುತ್ತಾರೆ.