ಟೆಕ್ಸಾಸ್ (ಅಮೆರಿಕ): ಟೆಕ್ಸಾಸ್‌ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷದ ವ್ಯಕ್ತಿಯೊಬ್ಬ ನಡೆಸಿದ ಅತ್ಯಂತ ಅಮಾನವೀಯ ಗುಂಡಿನ ದಾಳಿಯಲ್ಲಿ 18 ಮಕ್ಕಳು ಮತ್ತು ಓರ್ವ ಶಿಕ್ಷಕ ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ. ಇವರನ್ನು ಗುಂಡಿಕ್ಕಿ ಕೊಂದ 18 ವರ್ಷದ ಬಂದೂಕುಧಾರಿ ಸಾಲ್ವಡಾರ್ ರಾಮೋಸ್, ಈ ದಾಳಿಗೂ ಮುನ್ನ 2 ಆಕ್ರಮಣಕಾರಿ ರೈಫಲ್‌ಗಳ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Aishwarya Rai: 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಯಾಗುತ್ತೆ!!


18ರ ಹರೆಯದ ರಾಮೋಸ್, ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 11:32ರ ಸುಮಾರಿಗೆ ಉವಾಲ್ಡೆಯ ರಾಬ್ ಎಲಿಮೆಂಟರಿ ಶಾಲೆಗೆ ಎರಡು ಆಕ್ರಮಣಕಾರಿ ರೈಫಲ್‌ಗಳೊಂದಿಗೆ ತೆರಳುವ ಮೊದಲು ತನ್ನ ಅಜ್ಜಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.


ಮಂಗಳವಾರ ಉವಾಲ್ಡೆಯ ರಾಬ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಶಂಕಿತ ಎಂದು ಗುರುತಿಸಲಾದ 18 ವರ್ಷದ ಬಂದೂಕುಧಾರಿ, ಗುಂಡಿನ ದಾಳಿಯ ನಂತರ ಪೊಲೀಸರಿಂದ ಕೊಲ್ಲಲ್ಪಟ್ಟ.


ಇದನ್ನೂ ಓದಿ: "ಮಸೀದಿ ಜಾಗದಲ್ಲಿ ದೈವ ಸಾನಿಧ್ಯ ಇರೋದು ಸ್ಪಷ್ಟ"


ಮಂಗಳವಾರದ ಶೂಟಿಂಗ್ ಯುಎಸ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಶಾಲಾ ಹತ್ಯಾಕಾಂಡಗಳಲ್ಲಿ ಒಂದಾಗಿದೆ.  ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿ ಬಳಿಕ ನಡೆದ ಅತಿ ದೊಡ್ಡ ದುರಂತ ಇದಾಗಿದೆ. 


2012 ರಲ್ಲಿ, ಕನೆಕ್ಟಿಕಟ್‌ನ ಸ್ಯಾಂಡಿ ಹುಕ್ ಎಲಿಮೆಂಟರಿ ಸ್ಕೂಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 20 ಪ್ರಥಮ ದರ್ಜೆ ವಿದ್ಯಾರ್ಥಿಗಳು ಮತ್ತು ಆರು ಶಿಕ್ಷಕರು ಕೊಲ್ಲಲ್ಪಟ್ಟರು. ಆ ಸಂದರ್ಭದಲ್ಲಿ ಬಂದೂಕುಧಾರಿ ಆಡಮ್ ಲಾಂಜಾ, ಶಾಲೆಯಲ್ಲಿ ಗುಂಡು ಹಾರಿಸುವ ಮೊದಲು ತನ್ನ ತಾಯಿಯನ್ನು ಹಾಸಿಗೆಯಲ್ಲಿ ಗುಂಡಿಕ್ಕಿ ಕೊಂದಿದ್ದ. 2007 ರಲ್ಲಿ ವರ್ಜೀನಿಯಾ ಟೆಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವತ್ತೆರಡು ಜನರು ಸಾವನ್ನಪ್ಪಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.