ಟೆಕ್ಸಾಸ್ (ಯುಎಸ್): ಟೆಕ್ಸಾಸ್‌ನ ಶಾಲೆಯೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 19 ಮಕ್ಕಳು ಮತ್ತು ಇಬ್ಬರು ವಯಸ್ಕರು ಸೇರಿದಂತೆ ಸಾವಿನ ಸಂಖ್ಯೆ 21 ಕ್ಕೆ ಏರಿದೆ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಅವರು ಸಾಮೂಹಿಕ ಗುಂಡಿನ ದಾಳಿಯ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅಧ್ಯಕ್ಷ ಅಬ್ದುಲ್ಲಾ ಸಾಹಿದ್ ಅವರು ಟ್ವಿಟರ್‌ನಲ್ಲಿ, "ಟೆಕ್ಸಾಸ್‌ನ ಉವಾಲ್ಡೆಯಲ್ಲಿನ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ." ಎಂದು ಸಂತಾಪ ಸೂಚಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಳಲಿ ಮಸೀದಿ ಜಾಗದಲ್ಲಿ ಶಿವ ಸಾನಿಧ್ಯ ಗೋಚರ!


ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ 18 ವರ್ಷದ ಬಂದೂಕುಧಾರಿ ಗುಂಡು ಹಾರಿಸಿದ ನಂತರ ಮಂಗಳವಾರ (ಸ್ಥಳೀಯ ಕಾಲಮಾನ) ಈ ಘಟನೆ ನಡೆದಿದೆ. ನಂತರ ಬಂದೂಕುಧಾರಿಯನ್ನು ಅಧಿಕಾರಿಗಳು ಕೊಂದರು ಎಂದು ಸಿಎನ್ಎನ್ ವರದಿ ಮಾಡಿದೆ.


ಟೆಕ್ಸಾಸ್‌ನ ಉವಾಲ್ಡೆ ಕನ್ಸಾಲಿಡೇಟೆಡ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ (ಯುಸಿಐಎಸ್‌ಡಿ) ರಾಬ್ ಎಲಿಮೆಂಟರಿ ಸ್ಕೂಲ್‌ನಲ್ಲಿ ನಡೆದ ಗುಂಡಿನ ದಾಳಿಯ ನಂತರ ಎಲ್ಲಾ ಶಾಲಾ ಚಟುವಟಿಕೆಗಳನ್ನು ರದ್ದುಗೊಳಿಸುವುದಾಗಿ ಹೇಳಿದೆ.


ಸಿಎನ್‌ಎನ್ ಪ್ರಕಾರ, ಫ್ಲೋರಿಡಾದ ಪಾರ್ಕ್‌ಲ್ಯಾಂಡ್‌ನಲ್ಲಿ 2018 ರಲ್ಲಿ ಮಾರ್ಜೊರಿ ಸ್ಟೋನ್‌ಮ್ಯಾನ್ ಡೌಗ್ಲಾಸ್ ಹೈಸ್ಕೂಲ್ ಗುಂಡಿನ ದಾಳಿಯ ನಂತರ ಇದು ಅತ್ಯಂತ ಭೀಕರ ದಾಳಿಯಾಗಿದೆ. ಅಲ್ಲಿ 17 ಜನರು ಸಾವನ್ನಪ್ಪಿದ್ದಾರೆ.


ಏತನ್ಮಧ್ಯೆ, ಯುಎಸ್ ಅಧ್ಯಕ್ಷ ಜೋ ಬೈಡನ್ ಶೋಕಾಚರಣೆಗೆ ಸೂಚನೆ ನೀಡಿದ್ದಾರೆ. ಶಾಲೆಯಲ್ಲಿ ಮೃತಪಟ್ಟ ಮಕ್ಕಳಿಗೆ ಸಂತಾಪ ಸೂಚಿಸಲು ಶ್ವೇತ ಭವನ ಸೇರಿದಂತೆ ಇತರ ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಶನಿವಾರದ (ಮೇ 28) ತನಕ ಅರ್ಧಕ್ಕೆ ಹಾರಿಸಲು ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. 


ಇದನ್ನೂ ಓದಿ: UAE T20 League: ಜಾಗತಿಕ ಪ್ರಸಾರದ ಹಕ್ಕು ZEE ನೆಟ್‌ವರ್ಕ್‌ ಪಾಲು, ಟೂರ್ನಿಯ ಮಾಹಿತಿ ಇಲ್ಲಿದೆ


ಅಮೆರಿಕದಲ್ಲಿ ಗನ್ ಲಾಬಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಪಾನ್ ಸೇರಿದಂತೆ ಏಷ್ಯಾದ ದೇಶಗಳಿಗೆ ಐದು ದಿನಗಳ ಪ್ರವಾಸಕ್ಕೆ ತೆರಳಿದ್ದ ಬೈಡನ್ 'ಇಂತಹ ಪ್ರಕರಣಗಳು ವಿಶ್ವದ ಇತರ ದೇಶಗಳಲ್ಲಿ ಅಪರೂಪಕ್ಕೊಮ್ಮೆ ಆಗುತ್ತವೆ. ಆದರೆ ಅಮೆರಿಕದಲ್ಲಿ ಪದೇ ಪದೆ ಆಗುತ್ತಿರುವುದು ವಿಷಾದದ ಸಂಗತಿ. ನಾವು ಗನ್ ಲಾಬಿಗೆ ಕಡಿವಾಣ ಹಾಕುತ್ತೇವೆ. ಮೃತರ ಗೌರವಾರ್ಥ ದೇಶವ್ಯಾಪಿ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸುತ್ತೇವೆ' ಎಂದು ತಿಳಿಸಿದ್ದಾರೆ. 


ಈ ಬಗ್ಗೆ  ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಕೂಡ ವಿಷಾದ ವ್ಯಕ್ತಪಡಿಸಿದ್ದು, ಟೆಕ್ಸಾಸ್‌ ಶಾಲೆಯಲ್ಲಿ ನಡೆದ ಶಾಲೆಯ ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಠಿಣ ಕಾನೂನು ಕ್ರಮ ಮತ್ತು ನಿಲುವು ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.