Valentine's day : ಪ್ರೇಮಿಗಳ ದಿನ.. ವಿಶ್ವ ಪ್ರೇಮಿಗಳ ದಿನ.. ಇದು ಪ್ರೇಮಿಗಳಿಗೆ ಮೀಸಲಾದ ದಿನ. ಹಾಗಾಗಿಯೇ ಪ್ರೇಮಿಗಳ ಅನುಕೂಲಕ್ಕಾಗಿ ದೇಶವೊಂದು ವಿಚಿತ್ರ ನಿರ್ಧಾರ ಕೈಗೊಂಡಿದೆ. ಪ್ರೇಮಿಗಳ ದಿನದಂದು ದೇಶಾದ್ಯಂತ 95 ಮಿಲಿಯನ್ ಉಚಿತ ಕಾಂಡೋಮ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಆ ದೇಶ ಬೇರಾವುದೂ ಅಲ್ಲ.. ಪ್ರವಾಸಿಗರ ಸ್ವರ್ಗ ಎನಿಸಿರುವ ಥಾಯ್ಲೆಂಡ್.


COMMERCIAL BREAK
SCROLL TO CONTINUE READING

ಹೌದು.. ಥಾಯ್ಲೆಂಡ್ ನಲ್ಲಿ ಪ್ರೇಮಿಗಳ ದಿನದಂದು 95 ಮಿಲಿಯನ್ ಕಾಂಡೋಮ್ ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಫೆಬ್ರವರಿ 1 ರಿಂದ, ಥೈಲ್ಯಾಂಡ್ ದೇಶಾದ್ಯಂತ ಉಚಿತ ಕಾಂಡೋಮ್ಗಳನ್ನು ವಿತರಿಸಲು ಪ್ರಾರಂಭಿಸಿದೆ. ಇನ್ನು ಸರ್ಕಾರ ಒಂದು ಈ ನಿರ್ಧಾರ ಕೈಗೊಂಡಿರುವುದು ಜನಸಂಖ್ಯಾ ನಿಯಂತ್ರಣಕ್ಕೆ ಮಾತ್ರ ಅಂತ ನೀವು ಅಂದು ಕೊಂಡಿದ್ದರೆ ತಪ್ಪು.  


ಇದನ್ನೂ ಓದಿ: Population: ಮದುವೆಯಾಗದೆ ಮಕ್ಕಳು ಮಾಡಿಕೊಂಡ್ರೂ ಸಿಗುತ್ತೆ ಸರ್ಕಾರಿ ಸೌಲಭ್ಯ!


ಈ ಉಚಿತ ಕಾಂಡೋಮ್‌ಗಳು ಏಕೆ..? : ಒಂದು ದೇಶದ ಸರ್ಕಾರವು ತನ್ನ ನಾಗರಿಕರಿಗೆ ಉಚಿತ ಕಾಂಡೋಮ್ಗಳನ್ನು ವಿತರಿಸುತ್ತಿದ್ದರೆ, ಜನಸಂಖ್ಯೆಯ ಬೆಳವಣಿಗೆಯನ್ನು ತಡೆಗಟ್ಟಲು ಇದು ಮುನ್ನೆಚ್ಚರಿಕೆಯ ಕ್ರಮವಾಗಿರಬಹುದು ಅಂತ ಎಲ್ಲರೂ ಭಾವಿಸುತ್ತಾರೆ. ಆದರೆ ಪ್ರೇಮಿಗಳ ದಿನದಂದು ಉಚಿತ ಕಾಂಡೋಮ್‌ಗಳನ್ನು ವಿತರಿಸುತ್ತಿರುವುದು ಏಕೆ‌ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಹೌದು.. ಉಚಿತ ಕಾಂಡೋಮ್ ವಿತರಿಸುತ್ತಿರುವುದಕ್ಕೆ ಸಾರ್ವಜನಿಕ ಹಿತಾಸಕ್ತಿ ಕಾರಣವೂ ಇದೆ ಅಂತ ಥಾಯ್ಲೆಂಡ್ ಹೇಳಿದೆ.


ಥಾಯ್ ಸರ್ಕಾರವು ಹೇಳುವಂತೆ, ಪ್ರೇಮಿಗಳ ದಿನದ ಮೊದಲು ಉಚಿತ ಕಾಂಡೋಮ್‌ಗಳನ್ನು ವಿತರಿಸುವುದರಿಂದ ಲೈಂಗಿಕವಾಗಿ ಹರಡುವ ರೋಗಗಳನ್ನು (ಎಸ್‌ಟಿಡಿ) ತಡೆಗಟ್ಟಬಹುದು. ಅಲ್ಲದೆ, ಹದಿಹರೆಯದ ಗರ್ಭಧಾರಣೆಯನ್ನು ತಡೆಯಬಹುದು. ಹದಿಹರೆಯದ ಗರ್ಭಧಾರಣೆ ಎಂದರೆ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗುವುದು. ಆದ್ದರಿಂದ 95 ಮಿಲಿಯನ್ ಕಾಂಡೋಮ್ ವಿತರಿಸುವ ಉದ್ದೇಶವನ್ನು ಜನಕಲ್ಯಾಣ ಕಾರ್ಯಕ್ರಮವನ್ನಾಗಿ ಪರಿಗಣಿಸಿ ಥಾಯ್ಲೆಂಡ್‌ ಸರ್ಕಾರ ಫೆಬ್ರವರಿ 1 ರಿಂದ ಕಾಂಡೋಮ್ ವಿತರಣೆ ಆರಂಭಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.